ನಶ್ವರವಾದ ನರಜನ್ಮಪರಮೇಶ್ವರನ ಧ್ಯಾನದಿಂದ ಜನ್ಮ ಪಾವನ : ಹಾರಕೂಡ ಶ್ರೀ

ಬೀದರ್: ಜ.10:ಇಡೀ ಬ್ರಹ್ಮಾಂಡ ಪಾಲಕನಾಗಿರುವ ಪರಮೇಶ್ವರನನ್ನು ಪ್ರತಿಯೊಬ್ಬರು ತಮ್ಮ ಹೃದಯ ಗದ್ದಿಗೆಯಲ್ಲಿ ಪ್ರತಿಷ್ಠಾಪಿಸಿಕೊಂಡಿದ್ದೆ ಆದರೆ ನಶ್ವರವಾದ ನರಜನ್ಮ ಈಶ್ವರಮಯವಾಗಲು ಸಾಧ್ಯ ಎಂದು ಹಾರಕೂಡದ ಪೂಜ್ಯ ಶ್ರೀ ಡಾ. ಚೆನ್ನವೀರ ಶಿವಾಚಾರ್ಯರು ನುಡಿದರು.
ತಾಲೂಕಿನ ಯಲದದಗುಂಡಿ ಗ್ರಾಮದ ಶ್ರೀ ಪರಮೇಶ್ವರ ಜಾತ್ರಾ ಮಹೋತ್ಸವ ಧರ್ಮಸಭೆಯ ಸಾನಿಧ್ಯ ವಹಿಸಿ ಮಾತನಾಡಿದ ಹಾರಕೂಡ ಶ್ರೀಗಳು ಭಾವಸಾಗರ ದಾಟಿ ಕೈವಲ್ಯಧಾಮ ತಲುಪಬೇಕಾದರೆ ಪರಶಿವನ ನಾಮ ಸ್ಮರಣೆಯ ಜೊತೆಗೆ ಪರಹಿತ ಕಾರ್ಯಗಳನ್ನು ಶಿವಪೂಜೆ ಎಂದು ಬಗೆದು ಸಮರ್ಪಣಾ ಭಾವದಿಂದ ಮಾಡುವುದನ್ನು ರೂಢಿಸಿಕೊಳ್ಳಬೇಕು.
ಜಾತ್ರೆಗಳು ಕೇವಲ ಬೌತಿಕ ಸಂಭ್ರಮ ವಾಗಿರದೆ, ಆಂತರಿಕ ಸಮೃದ್ಧಿಯ ಭಾವ ಸಂಗಮದ ಪವಿತ್ರ ಸಂದರ್ಭಗಳು, ಹಾಗಾಗಿ ಪರಮೇಶ್ವರ ಎಲ್ಲರ ಬದುಕಿನಲ್ಲಿ ನೆಮ್ಮದಿಯ ಪುಷ್ಪವಷ್ರ್ಠಿ ಹರೀಸಲಿ ಎಂದು ಶುಭ ಹಾರೈಸಿದರು.
ನೇತೃತ್ವ ವಹಿಸಿದ ಹಿರೇನಾಗಾಂವ ಶ್ರೀ ಜಯಶಾಂತ ಲಿಂಗ ಮಹಾಸ್ವಾಮಿಗಳು ಮಾತನಾಡಿ ನರರು ಹರನು ಆಡಿಸುವ ಆಟದ ಗೊಂಬೆಗಳು ಯಾರ ಬದುಕಿನಲ್ಲಿ ಯಾವಾಗ ಬೇಕಾದರೂ ಯಾವ ತಿರುವನ್ನು ನೀಡುವಂತಹ ಅದ್ಭುತ ಶಕ್ತಿ ಆ ಪರಶಿವನಲ್ಲಿರುವಾಗ ನಾವೆಲ್ಲರೂ ಬಹಳ ಜಾಗೃತೆಯಿಂದ ನಮ್ಮ ಭುವಾದ ಪಯಣ ಸಾಗಿಸಬೇಕಾಗಿದೆ ಎಂದು ನೋಡಿದರು.
ಕಾಂಗ್ರೆಸ್ ಮುಖಂಡ ಧನರಾಜ ತಾಡಂಪಳ್ಳಿ ಮಾತನಾಡಿ ನಾವು ಎಷ್ಟೇ ಉನ್ನತ ಹುದ್ದೆ ಅಲಂಕರಿಸಿದರೂ ನಾವು ಮಾಡುವ ಕೆಲಸ ಕಾರ್ಯಗಳು ಧರ್ಮ ಸಮ್ಮತ, ದೇವ ಸಮ್ಮತ ವಾಗಿರಬೇಕು. ಈ ಭಾಗದ ಜನತೆಗೆ ಹಾರಕೂಡ ಶ್ರೀಗಳಂತ ಶ್ರೇಷ್ಠ ಗುರು ಲಭಿಸಿರುವುದು ಪರಮ ಭಾಗ್ಯವೇ ಸರಿ.
ಪರಮೇಶ್ವರನನ್ನು ಪೂಜ್ಯ ಚೆನ್ನವೀರ ಶಿವಾಚಾರ್ಯರ ರೂಪದಲ್ಲಿ ನೋಡಲು ಸಾಧ್ಯವಾಗಿರುವುದು ನಮ್ಮ ಪುಣ್ಯ ಎಂದು ನುಡಿದರು.
ಮಾಜಿ ಎಂಎಲ್ಸಿ ವಿಜಯ ಸಿಂಗ, ಪಂಡಿತ್ ಬಸವರಾಜ, ಶ್ರೀಮತಿ ಸಾವಿತ್ರಿ ಶರಣು ಸಲಗರ ಮಾತನಾಡಿದರು.
ಕಾಂಗ್ರೆಸ್ ಮುಖಂಡ ಬಾಬು ಹೊನ್ನ ನಾಯಕ, ತಾಲೂಕ ಪಂಚಾಯತ್ ಮಾಜಿ ಅಧ್ಯಕ್ಷ ಗುರುಲಿಂಗಪ್ಪ ಸೈದಾಪುರೆ, ಮಲ್ಲಿನಾಥ ಹಿರೇಮಠ ಹಾರಕೂಡ, ಮುಖಂಡರಾದ ಮೇಘರಾಜ ನಾಗರಾಳೆ, ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ರಾಮಪ್ಪ ಗುದಗೆ, ರತಿಕಾಂತ ಕೊಹಿನೂರ, ನಾಗೇಶ ಮಹಾಜನ ಬಟಗೇರ, ಮಂಜುನಾಥ ಪಿರಜೆ, ಸಂತೋಷ ಪಾಟೀಲ ಹಾರಕೂಡ, ಸಿದ್ರಾಮ ಕವಳೆ ಹಣಮಂತರಾಯ ಪಾಟೀಲ ಗುಂಡೂರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು
ಆನಂದ ಪಾಟೀಲ ಸ್ವಾಗತಿಸಿದರು.
ಮಲ್ಲಿನಾಥ ಕೋಟೆ ಕಾರ್ಯಕ್ರಮವನ್ನು ನಿರೂಪಿಸಿದರು.
ಶಿವರಾಜ ಪಾಟೀಲ ವಂದಿಸಿದರು.
ಪಂಚ ಕಮಿಟಿ ಅಧ್ಯಕ್ಷರಾದ ಪಂಡಿತರಾವ ಪಾಟೀಲ, ಉಪಾಧ್ಯಕ್ಷ ಪುಂಡಲಿಕ ರೆಡ್ಡಿ ಪ್ರಮುಖರಾದ ಶಿವಲಿಂಗಪ್ಪ ಭಂಗೆ, ದತ್ತಾತ್ರಿ ಚಿಂಚೊಳೆ,
ಪರಮೇಶ್ವರ ಗಿಲ್ಕಿ ಮುಂತಾದವರು ಉಪಸ್ಥಿತರಿದ್ದರು.