ನಶೆನಂಟು ಸ್ಟಾರ್‌ ದಂಪತಿ ದಿಗಂತ್‌, ಐಂದ್ರಿತಾಗೆ ಸಿಸಿಬಿ ನೋಟೀಸ್

ಬೆಂಗಳೂರು,ಸೆ.15- ಡ್ರಗ್ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್ ವುಡ್ ನ ಸ್ಟಾರ್‌ ದಂಪತಿ ದಿಗಂತ್‌, ಐಂದ್ರಿತಾ ರೇಗೆ ಸಿಸಿಬಿ ನೋಟಿಸ್‌ ಜಾರಿ ಮಾಡಿದೆ.
ಸಿಸಿಬಿ ಕಚೇರಿಗೆ ನಾಳೆ ಬೆಳಗ್ಗೆ 11 ಗಂಟೆಗೆ ಹಾಜರಾಗಿ ವಿಚಾರಣೆಗೆ ಎದುರಿಸಬೇಕೆಂದು ಸೂಚಿಸಿ ನೋಟೀಸ್ ಜಾರಿಗೊಳಿಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಎರಡು ದಿನಗಳ ಹಿಂದೆ ನಟಿ ಐಂದ್ರಿತಾ ರೇಯವರು ಶ್ರೀಲಂಕಾದ ಕ್ಯಾಸಿನೋಗೆ ಹೋಗಿದ್ದ ವಿಡಿಯೋ, ಫೋಟೋ ವೈರಲ್‌ ಆಗಿತ್ತು. ಈ ವೇಳೆ ಈ ಪ್ರಕರಣದ ಆರೋಪಿ ಶೇಕ್‌ ಫಾಝಿಲ್‌ ಜೊತೆ ಇದ್ದ ಫೋಟೋಗಳು ಸಹ ಸಿಕ್ಕಿದ್ದು ಡ್ರಗ್ ಜಾಲದ ನಂಟು ಹೊಂದಿರುವ ಅನುಮಾನದ ಹಿನ್ನೆಲೆಯಲ್ಲಿ ನೋಟೀಸ್ ಜಾರಿಗೊಳಿಸಲಾಗಿದೆ
ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಐಂದ್ರಿತಾ ರೇ, ನಾನು ಸಿನಿಮಾ ಪ್ರಮೋಶನ್ ಗಾಗಿ ಕೊಲಂಬೋದಲ್ಲಿರುವ ಕ್ಯಾಸಿನೋಗೆ ಹೋಗಿದ್ದೆ. ಚಿತ್ರ ಪ್ರಚಾರಕ್ಕಾಗಿ ನಮ್ಮ ಮ್ಯಾನೇಜರ್ ಹೋಗಬೇಕು ಅಂತ ಹೇಳಿದ್ದರಿಂದ ಸೊಹೈಲ್ ಮತ್ತು ಅರ್ಬಾಜ್ ಖಾನ್ ಜೊತೆ ಹೋಗಿದ್ದೇನೆ. ಶೇಖ್ ಫಾಝಿಲ್ ನನಗೆ ವೈಯಕ್ತಿಯ ಪರಿಚಯವಿಲ್ಲ ಎಂದು ತಿಳಿಸಿದ್ದರು.
ಅರ್ಬಾಜ್ ಖಾನ್ ಜೊತೆ ‘ಮೇ ಜರೂರ್ ಆವೂಂಗಾ’ ಸಿನಿಮಾ ಮಾಡುತ್ತಿರುವಾಗ ಕ್ಯಾಸಿನೋಗೆ ಹೋಗಿದ್ದೇನೆ. ಅಲ್ಲಿ ಸಿನಿಮಾ ಪ್ರಮೋಶನ್ ಚೆನ್ನಾಗಿ ಆಗುತ್ತೆ ಎಂದು ಹೇಳಿದ್ದರಿಂದ ಚಿತ್ರತಂಡ ನಮ್ಮನ್ನ ಕ್ಯಾಸಿನೋಗೆ ಕಳುಹಿಸಿದ್ದರು.
ಕ್ಯಾಸಿನೋ ಪಾರ್ಟಿಗೆ ತೆರಳಿರುವ ಫೋಟೋಗಳು ನನ್ನ ಇನ್‍ಸ್ಟಾಗ್ರಾಂನಲ್ಲಿವೆ. ಯಾವ ಫೋಟೋ ಮತ್ತು ವಿಡಿಯೋಗಳನ್ನ ಡಿಲೀಟ್ ಮಾಡಿಲ್ಲ. ಪ್ರೊಫೆಷನಲ್ ಗಾಗಿ ಕ್ಯಾಸಿನೋಗೆ ಹೋಗಿದ್ದೆ, ಎರಡು ಬಾರಿ ಸ್ಟೆಪ್ ಹಾಕಿ ಬಂದಿದ್ದೇನೆ. ಕರೀಷ್ಮಾ ಕಪೂರ್, ಸೊಹೈಲ್ ಖಾನ್, ಅರ್ಬಾಜ್ ಖಾನ್ ಜೊತೆ ನನ್ನ ಜೊತೆ ಬಂದಿದ್ದರು ಎಂದು ವಿವರಿಸಿದ್ದರು.
ಎರಡನೇ ಬಾರಿ ಅರ್ಬಾಜ್ ಖಾನ್ ಹುಟ್ಟುಹಬ್ಬದ ಅಂಗವಾಗಿ ಬೆಂಗಳೂರಿನ ಹೋಟೆಲ್ ನಲ್ಲಿ ಪಾರ್ಟಿ ಮಾಡಲಾಗಿತ್ತು. ಬರ್ತ್ ಡೇ ಪಾರ್ಟಿ ವೇಳೆ ಫಾಝಿಲ್ ಬಂದಿದ್ದ. ಆದರೆ ಅವನನ್ನ ನಾನು ಭೇಟಿಯಾಗಿರಲಿಲ್ಲ. ಪಾರ್ಟಿಯಲ್ಲಿದ್ದಾಗ ಸಹಜವಾಗಿ ಫಾಝಿಲ್ ಜೊತೆ ಫೋಟೋ ತೆಗೆಸಿಕೊಳ್ಳಲಾಗಿತ್ತು. ಕೆಲ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿವೆ. ಎರಡು ಬಾರಿಯೂ ಅರ್ಬಾಜ್ ಖಾನ್ ಮೂಲಕವೇ ಫಾಝಿಲ್ ಭೇಟಿಯಾಗಿದೆ. ಅರ್ಬಾಜ್ ಖಾನ್ ಬರ್ತ್ ಡೇ ಪಾರ್ಟಿ ವೇಳೆ ಮಾಧ್ಯಮದವರು ಸಹ ಇದ್ರು. 10 ರಿಂದ 20 ನಿಮಿಷ ನಾನು ಅಲ್ಲಿದ್ದು ಹೊರ ಬಂದಿದ್ದೇನೆ. ಆಗ ಯಾರಿಗೂ ಫಾಝಿಲ್ ಬಗ್ಗೆ ನಮಗೂ ಗೊತ್ತಿರಲಿಲ್ಲ ಎಂದು ತಿಳಿಸಿದರು.
ಶ್ರೀಲಂಕಾದ ಕ್ಯಾಸಿನೋಗೆ ಹಬ್ಬದ ಸಮಯದಲ್ಲಿ ಸಿನಿಮಾದ ದೊಡ್ಡ ದೊಡ್ಡ ತಾರೆಯರನ್ನ ಕರೆಸುತ್ತಾರೆ. ನಮಗೂ ಆ ರೀತಿಯ ಆಹ್ವಾನಗಳು ಬರುತ್ತವೆ. ಆಹ್ವಾನ ಬಂದಾಗ ಆ ವ್ಯಕ್ತಿಯ ಹಿನ್ನೆಲೆ ಚೆಕ್ ಮಾಡಲು ಆಗಲ್ಲ. ಪಾರ್ಟಿಗಳಲ್ಲಿ ಫೋಟೋ ತೆಗೆದುಕೊಳ್ಳುವಾಗ ಪ್ರತಿಯೊಬ್ಬರ ಹಿನ್ನೆಲೆ ಕೇಳಲು ಆಗಲ್ಲ. ಫೋಟೋ ತೆಗೆದುಕೊಂಡವರು ತಪ್ಪು ಮಾಡಿದ್ರೆ ನಮ್ಮನ್ನ ಪ್ರಶ್ನೆ ಮಾಡುವುದು ಎಷ್ಟು ಸರಿ ಎಂದು ಐಂದ್ರಿತಾ ಪ್ರಶ್ನಿಸಿದ್ದರು.

ಬೆಂಗಳೂರು,ಸೆ.15- ಡ್ರಗ್ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್ ವುಡ್ ನ ಸ್ಟಾರ್‌ ದಂಪತಿ ದಿಗಂತ್‌, ಐಂದ್ರಿತಾ ರೇಗೆ ಸಿಸಿಬಿ ನೋಟಿಸ್‌ ಜಾರಿ ಮಾಡಿದೆ. ಸಿಸಿಬಿ ಕಚೇರಿಗೆ ನಾಳೆ ಬೆಳಗ್ಗೆ 11 ಗಂಟೆಗೆ ಹಾಜರಾಗಿ ವಿಚಾರಣೆಗೆ ಎದುರಿಸಬೇಕೆಂದು ಸೂಚಿಸಿ ನೋಟೀಸ್ ಜಾರಿಗೊಳಿಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.