ನಶಿಸುತ್ತಿರುವ ಜನಪದ ಸಂಸ್ಕøತಿ ಉಳಿಸಲು ಎಲ್ಲರು ಮುಂದಾಗಬೇಕಿದೆ

ಬೀದರ್ ಜೂ. 16:ಪಾಶ್ಚಿಮಾತ್ಯ ಸಂಸ್ಕøತಿಯಿಂದ ಇತ್ತಿಚೀನ ದಿನಗಳಲ್ಲಿ ನಶಿಸುತ್ತಿರುವ ನಮ್ಮ ಜಾನಪದ ಸಂಸ್ಕøತಿಯನ್ನು ಎಲ್ಲರು ಕೂಡಿ ಉಳಿಸಲು ಮುಂದಾಗಬೇಕಿದೆ ಎಂದು ಕನಾಟಕ ಪಶು ವೈದ್ಯ ಹಾಗೂ ಮೀನುಗಾರಿಕೆ ವಿe್ಞÁನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಪೆÇ್ರ. ಕೆ.ಸಿ. ವೀರಣ್ಣ ಕರೆ ನೀಡಿದರು.

ಅವರು ಕನಾಟಕ ಜಾನಪದ ಪರಿಷತ್ತು ಜಿಲ್ಲಾ ಹಾಗೂ ತಾಲೂಕು ಘಟಕದಿಂದ ಸಂಸ್ಕøತಿ ಮಂತ್ರಾಲಯ ನವದೆಹಲಿ, ಕದಂಬ ಸಂಸ್ಥೆ ಬೀದರ್ ಸಹಯೋಗದಲ್ಲಿ ಸರಕಾರಿ ಪ್ರಥಮ ದರ್ಜೆ ಪದವಿ ಮಹಿಳಾ ಕಾಲೇಜು ಬೀದರ್, ಕರ್ನಾಟಕ ಸಾಹಿತ್ಯ ಸಂಘದಿಂದ ಗುರುವಾರ ನಗರದ ಡಾ. ಅಂಬೇಡ್ಕರ್ ವೃತ್ತದ ಬಳಿಯ ಕರ್ನಾಟಕ ಸಾಹಿತ್ಯ ಸಂಘದಲ್ಲಿ ಆಯೋಜಿಸಿದ ಜಿಲ್ಲಾ ಜನಪದ ಸಾಹಿತ್ಯ ಉತ್ಸವ ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಜಾನಪದ ದೇಶದಲ್ಲಿಯೇ ಕರ್ನಾಟಕದ ಸಂಸ್ಕøತಿ ವೈವಿದ್ಯಮಯ ಸಂಸ್ಕøತಿ ಹೊಂದಿದೆ. ಇಲ್ಲಿನ ಡೊಳ್ಳು ಕುಣಿತ, ವೀರಗಾಸೆ, ಕಂಸಾಳೆ, ದೊಡ್ಡಾಟ, ಶ್ರೀಕೃಷ್ಣ ಪಾರಿಜಾತ ಸೇರಿದಂತೆ ಹೀಗೆ ಅನೇಕ ಜಾನಪದ ನೃತ್ಯಗಳು ಬೇರೆಡೆ ಸಿಗುವುದಿಲ್ಲ ಎಂದರು.

ಜೀವನದ ಇಡೀ ಚಿತ್ರವೇ ಜನಪದದಲ್ಲಿ ಅಡಗಿದೆ. ಇದು ಜನರ ಬಾಯಿಂದ ಬಂದಿರುವ e್ಞÁನವೇ ಜನಪದವಾಗಿದೆ. ಹೀಗಾಗಿ ಇದು ಯಾವಾಗ ಜನ್ಮ ತಾಳಿದೆ ಎಂಬುದನ್ನು ಪತ್ತೆ ಹಚ್ಚುವುದು ಕಷ್ಟಕರವಾಗುತ್ತದೆ. ಜನಪದ ಸಾಹಿತ್ಯ ಕಲೆಯನ್ನು ರಕ್ಷಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ.

ನಮ್ಮ ಜಾನಪದ ಸಂಸ್ಕøತಿ ಇನ್ನು ಗ್ರಾಮೀಣ ಭಾಗದಲ್ಲಿ ಸಂಕ್ರಾಂತಿ ಹಾಗೂ ದೀಪಾವಳಿ ಹಬ್ಬದಲ್ಲಿ ಜಾನುವಾರುಗಳನ್ನು ಸಿಂಗರಿಸಿ ಸಂಭ್ರಮಿಸುವುದನ್ನು ನೋಡಲು ಸಿಗುತ್ತದೆ. ಹಿಂದಿನ ಕಾಲದಲ್ಲಿ ಇರುವ ಜಾನಪದ ಗೀತೆಗಳ ಅನುಭವ ನಮಗೆ ಆಗಿದೆ ಆದರೆ ಇಂದಿನ ಮಕ್ಕಳಿಗೆ ಇದರ ಬಗ್ಗೆ ಮಾಹಿತಿಯೇ ಇಲ್ಲ. ಹೀಗಾಗಿ ಜಾನಪದ ಸಂಸ್ಕøತಿಯ ಅಗತ್ಯವಿದೆ ಎಂದರು.

ಬೀದರ್‍ನ ಅಕ್ಕಮಹಾದೇವಿ ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪೆÇ್ರ. ಶರಣಪ್ಪ ದುಬಲಗುಂಡಿ, ಅಕ್ಕಮಹಾದೇವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಪೆÇ್ರ. ವಿಶ್ವನಾಥ ಕಿವಡೆ ಮಾತನಾಡಿ ಪಾಶ್ಚಿಮಾತ್ಯದ ಪ್ರಭಾವದಲ್ಲಿ ಎಲ್ಲರು ನಮ್ಮ ಸಂಸ್ಕøತಿ ಮರೆಯುತಿದ್ದೇವೆ. ಮತ್ತೆ ಹಳೆ ಸಂಸ್ಕøತಿಯತ್ತ ಮುಖ ಮಾಡುವ ಸಂದರ್ಭ ಬಂದೊದಗಿದೆ ಎಂದು ಹೇಳಿದರು.

ಕರ್ನಾಟಕ ಜಾನಪದ ಪರಿಷತ್ತು ರಾಜ್ಯ ಘಟಕದ ಆಡಳಿತ ಮಂಡಳಿ ಸದಸ್ಯರಾದ ಪೆÇ್ರ. ಜಗನ್ನಾಥ ಹೆಬ್ಬಾಳೆ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿ ದಿಸೆಯಿಂದ ಜನಪದ ಸಾಹಿತ್ಯ ಹಾಗೂ ಸಂಸ್ಕøತಿ ಬೆಳೆಸುವ ಉದ್ದೇಶ ನಮ್ಮದ್ದಾಗಿದೆ. ನಮ್ಮ ಪಾರಂಪರಿಕ, ಸಾಂಪ್ರದಾಯಕ ಪದ್ದತಿಗಳನ್ನು ಹಿಂದಿನಿಂದಲು ಅಳವಡಿಸಿಕೊಂಡು ವೈe್ಞÁನಿಕವಾಗಿ ಬದುಕಿನಲ್ಲಿ ಇದನ್ನು ಅಳವಡಿಸಿಕೊಂಡು ಬದುಕಿದ್ದಾರೆ. ಅವರಂತೆ ನಾವು ಕೂಡ ಬಾಳ ಬೇಕಾಗಿದೆ.

ಸಿನೇಮಾಗಳಲ್ಲಿ ನಟಿಸುವವರು ರೀಲ್ ಶೋ ಮೂಲಕ ಕಾಣಿಸುತ್ತಾರೆ ಆದರೆ ಜಾನಪದದಲ್ಲಿ ಇರುವವರು ರಿಯಲ್ ಶೋ ಮೂಲಕ ನಮಗೆ ಕಾಣಿಸುತ್ತಾರೆ ಇಂತಹ ನಮ್ಮ ಜಾನಪದ ಕಲೆಗಳನ್ನು ಉಳಿಸಲು ನಿಮ್ಮ ಪಾತ್ರ ಕೂಡ ಬಹಳ ಮುಖ್ಯವಾಗಿದೆ ಎಂದು ವಿದ್ಯಾರ್ಥಿಗಳಿಗೆ ವಿಸ್ತಾರವಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಪೆÇ್ರ. ಮನೋಜಕುಮಾರ ಕುಲಕರ್ಣಿ, ಕೇಂದ್ರ ಸಾಹಿತ್ಯ ಅಕಾಡೆಮಿ ನವದೆಹಲಿಯ ಕನ್ನಡ ಭಾಷೆ ತಜ್ಞ ಸಮಿತಿ ಸದಸ್ಯರಾದ ಪೆÇ್ರ. ಜಯದೇವಿ ಗಾಯಕವಾಡ, ಕರ್ನಾಟಕ ಸರಕಾರಿ ಪದವಿ ಕಾಲೇಜು ಅಧ್ಯಾಪಕರ ಸಂಘ ಗುಲಬರ್ಗಾ ವಿಶ್ವವಿದ್ಯಾಲಯ ವಲಯ ಕಾರ್ಯದರ್ಶಿಗಳಾದ ಪೆÇ್ರ. ವೀರಶೆಟ್ಟಿ ಮೈಲೂರಕರ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ರಾಜ್ಯಸ್ಥಾನದ ಸನರೈಜ್ ಕಾಲೇಜಿನ ಪೆÇ್ರ. ಉಮಾಕಾಂತ ಪಾಟೀಲ್, ವಿವಿಧ ಜಾನಪದ ಗಣ್ಯರು, ವಿವಿಧ ಕಾಲೇಜಿನ ವಿದ್ಯಾರ್ಥಿ/ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ. ರಾಜಕುಮಾರ ಹೆಬ್ಬಾಳೆ ಸ್ವಾಗತಿಸಿದರು. ಪರಿಷತ್ತಿನ ಬೀದರ್ ತಾಲೂಕು ಘಟಕದ ಅಧ್ಯಕ್ಷ ಎಸ್‍ಬಿ ಕುಚಬಾಳ ಪ್ರಾಸ್ತಾವಿಕ ಮಾತನಾಡಿದರು. ಡಾ. ಮಹಾರುದ್ರ ಡಾಕುಳಗಿ ನಿರೂಪಿಸಿದರು. ಜಾನಪದ ಪರಿಷತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಜಲಿಂಗಪ್ಪ ತಗಾರೆ ವಂದಿಸಿದರು.