ನಶಾ ಮುಕ್ತ ಭಾರತ ಯಾತ್ರೆ ವ್ಯಸನ ಮುಕ್ತ ಕೇಂದ್ರಕ್ಕೆ ಭೇಟಿ

ಚಿತ್ರದುರ್ಗ.ಫೆ.೨೨: ಚಿತ್ರದುರ್ಗ ನಗರದಲ್ಲಿರುವ ಮದ್ಯ ಮತ್ತು ಮಾದಕವಸ್ತು ವ್ಯಸನಿಗಳ ಪುನರ್ವಸತಿ ಕೇಂದ್ರಕ್ಕೆ  ನಶಾ ಮುಕ್ತ ಭಾರತ ಯಾತ್ರೆಯು ಭೇಟಿ ನೀಡಲಾಯಿತು.
 ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷರು ಹಾಗೂ ನಶಾ ಮುಕ್ತ ಭಾರತ ಯಾತ್ರೆಯ ಅಧ್ಯಕ್ಷ ಸುಮಿತ್ ಸಿಂಗ್ ಅಂಕೂರ್ ಅವರು ಮದ್ಯಪಾನದಿಂದ ಉಂಟಾಗುವ ದುಷ್ಪಾರಿಣಾಮಗಳು ಹಾಗೂ ಮದ್ಯಪಾನದಿಂದ ಮನೆಯ ಹೆಣ್ಣು ಮಕ್ಕಳು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ತಿಳಿಸಿದರು.ಮದ್ಯ ಮತ್ತು ಮಾದಕವಸ್ತು ವ್ಯಸನಿಗಳ ಪುನರ್ವಸತಿ ಕೇಂದ್ರ ಅಧ್ಯಕ್ಷ ಹೆಚ್.ಎಸ್.ಶಿವಣ್ಣ ಮಾತನಾಡಿ, ಇಂದಿನ ಯುವ ಪೀಳಿಗೆಯು ಮೋಜಿಗಾಗಿ ಮದ್ಯಪಾನ ಮತ್ತು ಮಾದಕ ವಸ್ತುಗಳ ದಾಸರಾಗುತ್ತಿದ್ದಾರೆ. ಮದ್ಯಪಾನ ಮತ್ತು ಮಾದಕ ವಸ್ತುಗಳ ವ್ಯಸನದಿಂದ ಹೊರ ಬರಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ನಶಾ ಮುಕ್ತ ಭಾರತ ಯಾತ್ರೆಯ ಎಲ್ಲಾ ಸಿಬ್ಬಂದಿ ವರ್ಗದವರು ಹಾಗೂ ವ್ಯಸನ ಮುಕ್ತ ಕೇಂದ್ರದ ಎಲ್ಲಾ ಸಿಬ್ಬಂದಿ ವರ್ಗದವರು ಇದ್ದರು. ವೈ.ಜಿ.ಗವಿಸಿದ್ದಪ್ಪ ಸ್ವಾಗತಿಸಿದರು. ಬಿ.ಪ್ರಹ್ಲಾದ್ ವಂದಿಸಿದರು. ಶುಶ್ರೂಷಕಿ ಟಿ.ಸುನಂದ ಇದ್ದರು