ನಶಾ ಮುಕ್ತ ದಾವಣಗೆರೆ ಅಭಿಯಾನ 

ದಾವಣಗೆರೆ.ಜ.೧೭; ಜನಸಾಮಾನ್ಯರಲ್ಲಿ ಅದರಲ್ಲೂ ಯುವಕರಲ್ಲಿ ಮಾದಕ ವಸ್ತುಗಳ ಸೇವನೆ ದುಶ್ಪರಿಣಾಮಗಳ ಬಗ್ಗೆ ತಿಳುವಳಿಕೆ ನೀಡಿ, ಮಾದಕ ವ್ಯಸನ ರಹಿತ ನಶಾ ಮುಕ್ತ, ಆರೋಗ್ಯಕರ ಸಮಾಜವನ್ನು ನಿರ್ಮಾಣ ಮಾಡುವುದು ನಮ್ಮೆಲ್ಲರ ಜವಬ್ದಾರಿಯಾಗಿದೆ ಎಂದು ಹಿರಿಯ ನ್ಯಾಯಾವಾದಿ ಎಲ್.ಹೆಚ್. ಅರುಣ್‌ಕುಮಾರ್ ಅಭಿಪ್ರಾಯಪಟ್ಟರು.ನಗರದ ಅಖ್ತರ್ ರಜಾ ವೃತ್ತದಲ್ಲಿ ಸಂಜರ್ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಹಮ್ಮಿಕೊಂಡಿದ್ದ ನಶಾ ಮುಕ್ತ ದಾವಣಗೆರೆ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಶಿಕ್ಷಣದಲ್ಲಿ ಮಾದಕ ವಸ್ತುಗಳ ದುಶ್ಪರಿಣಾಮ ಕುರಿತು ಅವುಗಳ ತಡೆಗಟ್ಟುವ ಕುರಿತು ಅರಿವು ಮೂಡಿಸಿದಲ್ಲಿ ಭವಿಷ್ಯದಲ್ಲಿ ಉಂಟಾಗುವ ಹಾನಿಯನ್ನು ತಡೆಗಟ್ಟಬಹುದು. ಸಂಘ ಸಂಸ್ಥೆಗಳು ಸರ್ಕಾರಿ ಇಲಾಖೆಗಳು ಮಾದಕ ವಸ್ತುಗಳನ್ನು ತಡೆಗಟ್ಟುವಲ್ಲಿ ಹೆಚ್ಚಿನ ಪಾತ್ರ ವಹಿಸಬೇಕು ಎಂದರು.ಹಲವಾರು ದೇಶಗಳು ಮಾದಕ ವಸ್ತುಗಳ ಉತ್ಪಾದನೆ, ಶೇಖರಣೆಯನ್ನು ಶಿಕಾರ್ಹ ಅಪರಾಧವೆಂದು ಕಾನೂನು ಜಾರಿಗೆ ತಂದಿದ್ದರೂ ಸಹ ಮಾದಕ ವಸ್ತುಗಳ ಉಪಯೋಗ ಪೆಡಂಭೂತವಾಗಿ ಬೆಳೆದು ಸಮಾಜವನ್ನು ಕಾಡುತ್ತಿದೆ. ಸಂಜರ್ ವೆಲ್ಫೇರ್ ಅಸೋಸಿಯೇಷನ್ ಸಮಾಜದಲ್ಲಿ ಉತ್ತಮ ಕಾರ್ಯಕ್ರಮಗನ್ನು ನಡೆಸಿಕೊಂಡು ಬರುತ್ತಿದ್ದು, ಅನಾಥ ಆಶ್ರಮ ಮತ್ತು ಬಡವರಿಗೆ ಸಹಾಯ ಮಾಡುವುದು. ಸಮಾಜ ಸೇವಕರನ್ನು ಗುರುತಿಸಿ ಸನ್ಮಾನ ಮಾಡುವುದು ಬಡ ಕುಟುಂಬದ ಮಕ್ಕಳಿಗೆ ಶಾಲಾ ಬ್ಯಾಗ್, ಪುಸ್ತ ವಿತರಣೆ ಮಾಡುವುದು, ಕ್ರೀಡಾ ಪಟುಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಹಲವಾರು ಕಾರ್ಯಕ್ರಮ ಮಾಡುವ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.