ನವ ಜಗತ್ತಿನ ನಿರ್ಮಾಣಕ್ಕೆ ವಿವೇಕಾನಂದರ ಆದರ್ಶಗಳು ಅವಶ್ಯಕ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜ.15: ಸ್ವಾಮಿ ವಿವೇಕಾನಂದರು ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯಲ್ಲಿ ಪರಿಗಣಿತರಾಗಿದ್ದರು. ಇವರ ಆದರ್ಶಗಳು ನವ ಜಗತ್ತಿನ ನಿರ್ಮಾಣಕ್ಕೆ ಅವಶ್ಯಕವಾಗಿದೆಂದು ಶಿಕ್ಷಕ ವೆಂಕಟರೆಡ್ಡಿ ಅಭಿಪ್ರಾಯ ಪಟ್ಟರು.
 ತಾಲ್ಲೂಕಿನ ಸಮೀಪದ ಕೊತ್ತಲಚಿಂತ ಸ.ಹಿ.ಪ್ರಾ.ಶಾಲೆಯಲ್ಲಿ ಶುಕ್ರವಾರ ನಡೆದ ಕಾರಂತರಂಗ ಲೋಕಕಲಾತ್ಮಕ ಮನಸ್ಸುಗಳ ತಾಣ ಸಂಸ್ಥೆ ಭೈರಗಾಮದಿನ್ನೆ ಇವರ ಸಹಯೋಗದಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನದ ಅಂಗವಾಗಿ ರಾಷ್ಟ್ರೀಯ ಯುವ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಾಲಾ ವಿದ್ಯಾರ್ಥಿಗಳಿಂದ ಸ್ವಾಮಿ ವಿವೇಕಾನಂದರ ಜೀವನ ಆಧಾರಿತ ಡಾ.ಅಣ್ಣಾಜಿ ಕೃಷ್ಣಾರೆಡ್ಡಿ ರಚನೆ ಮತ್ತು ರಂಗ ಪದವೀಧರ ಆರ್.ಪಿ.ಈಶಪ್ಪ ನಿರ್ದೇಶನದ “ಧ್ಯಾನ ಸಿದ್ದ” ನಾಟಕವನ್ನು ಪ್ರದರ್ಶಿ‍ಸಿದರು.
ಶಿಕ್ಷಕರಾದ ಅಯ್ಯಣ್ಣ, ಶ್ವೇತಾ ಮಂಜುನಾಥ ಇದ್ದರು.