ನವ ಕಲ್ಯಾಣ ಕರ್ನಾಟಕ ಕಟ್ವಡ ಕಾರ್ಮಿಕರ ಸಂಘದ ಗುತ್ತಿಗೆದಾರರ ಸಮಾಲೋಚನ ಸಭೆ

ಕಲಬುರಗಿ:ನ.15: ನವ ಕಲ್ಯಾಣ ಕರ್ನಾಟಕ ಕಟ್ವಡ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಗುತ್ತಿಗೆದಾರರ ಸಮಾಲೋಚನ ಸಭೆಯಲ್ಲಿ ಸಭೆ ನಡೆಯಿತು. ಈ ಸಭೆಯಲ್ಲಿ ಅಧ್ಯಕ್ಷ ಭೀಮರಾಯ ಎಂ ಕಂದಳ್ಳಿ ಮಾತನಾಡಿ ಗುತ್ತಿಗೆದಾರರ ತಾತ್ಕಾಲಿಕ ವೇಳಾಪಟ್ಟಿ ಸಂಘದ ಪದಾಧಿಕಾರಿಗಳು ಸದಸ್ಯರು ಬಿಡುಗಡೆ ಮಾಡಿದರು ಇದರ ಬಗ್ಗೆ ತಮ್ಮ ಅಭಿಪ್ರಾಯ ಏನೇ ಇದ್ದರೂ ಮುಂದಿನ ವಾರ (ರವಿವಾರ 21/11/2021) ನಡೆಯುವ ಅಂತಿಮ ಸಭೆಯಲ್ಲಿ ಗುತ್ತಿಗೆದಾರರ ಅಂತಿಮ ವೇಳಾಪಟ್ಟಿ ಅಂದ ಬಿಡುಗಡೆ ಮಾಡಲಾಗುವುದು ತಮ್ಮ ಅಭಿಪ್ರಾಯ ಏನೇ ಇದ್ದರೂ ಒಂದು ವಾರದ ಒಳಗೆ ತಿಳಿಸಬೇಕು ಹಾಗೂ ವಾರದ 6 ದಿನಗಳಲ್ಲಿ ಬಾನುವಾರದ ರಜೆ ಬದಲಾಗಿ ಸೋಮವಾರ ರಜೆ ನೀಡಬೇಕೆಂದು ಮನವಿ ಮಾಡಿದರು ಇದಕ್ಕೆ ರವಿವಾರದ ರಜೆಯಿಂದ ಕಾರ್ಮಿಕರಿಗೆ ಯಾವುದೆ ಸರಕಾರಿ ಕೆಲಸ ಕಾರ್ಯಗಳಿಗೆ ಅನುಕೂಲ ಇಲ್ಲದಿರುವುದರಿಂದ ಸೋಮವಾರ ರಜೆ ಉತ್ತಮವೆಂದು ಭೀಮರಾಯ ತಿಳಿ ಹೇಳಿದರು.
ಉಪಾಧ್ಯಕ್ಷ ಶಿವಕುಮಾರ ಬೆಳಗೆರಿ, ಕಾರ್ಯದರ್ಶಿ ಮರೆಪ್ಪ ರತ್ನಡಗಿ, ಸಹ ಕಾರ್ಯದರ್ಶಿ ಶರಣು ಬಳಿಚಕ್ರ, ಖಜಾಂಚಿ ದೇವಿಂದ್ರ ಬಳಿಚಕ್ರ, ಕಾರ್ಯಕರ್ತರಾದ ಶರಣು ಮಾಡಬೂಳ, ಭೀಮಾಶಂಕರ ಬೇಳಗೆರಿ, ಮಲ್ಲಿಕಾರ್ಜುನ ಹೀರಾಪುರ, ಮಹಾಂತೇಶ ಇಂದ್ರಾನಗರ, ಇಸ್ಮೈಲ್ ಗುತ್ತೇದಾರ ಇತರರಿದ್ದರು.