ನವ ಕಲಬುರಗಿ ನಿರ್ಮಾಣಕ್ಕಾಗಿ ಬಿಜೆಪಿ ಪ್ರಣಾಳಿಕೆಗೆ ಸಲಹಾ ಸಂಗ್ರಹ ಅಭಿಯಾನ: ನಮೋಶಿ

ಕಲಬುರಗಿ:ಮಾ.2: ನವ ಕಲಬುರ್ಗಿ ನಿರ್ಮಾಣ ಮಾಡುವ ಉದ್ದೇಶದಿಂದ ಜಿಲ್ಲೆಯಲ್ಲಿ ಭಾರತೀಯ ಜನತಾ ಪಾರ್ಟಿಯು ಕರ್ನಾಟಕದಲ್ಲಿ ಹಮ್ಮಿಕೊಂಡ ಪ್ರಣಾಳಿಕೆಗೆ ಸಲಹಾ ಸಂಗ್ರಹ ಅಭಿಯಾನವನ್ನು ಆರಂಭಿಸಲಾಗುತ್ತದೆ ಎಂದು ರಾಜ್ಯ ವಿಧಾನ ಪರಿಷತ್ ಸದಸ್ಯ ಹಾಗೂ ಅಭಿಯಾನದ ಸಂಚಾಲಕ ಶಶೀಲ್ ಜಿ. ನಮೋಶಿ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿಯಾನಕ್ಕಾಗಿ ಜಿಲ್ಲೆಯಲ್ಲಿ ತಂಡವನ್ನು ರಚಿಸಲಾಗಿದ್ದು. ನಾನು ಸಂಚಾಲಕನಾಗಿ ಕಾರ್ಯನಿರ್ವಹಿಸಲಿದ್ದೇನೆ ಎಂದರು.
ಸಹ ಸಂಚಾಲಕರಾಗಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ದಯಾಘನ್ ಧಾರವಾಡಕರ್, ಸುಂದರ್ ಕುಲಕರ್ಣಿ, ಶರಣು ಸಜ್ಜನ್, ಶ್ರೀಮತಿ ದಾನಮ್ಮ ಬಿರಾದಾರ್, ಜೀವನಲಾಲ್ ಜೈನ್, ವರದಾಶಂಕರ್, ಶಂಭುಲಿಂಗ್ ಬಳಬಟ್ಟಿ ಅವರು ಸಮಿತಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಅವರು ಹೇಳಿದರು.
ತಂಡವು ನವಭಾರತಕ್ಕಾಗಿ ನವಕರ್ನಾಟಕ ನವಕರ್ನಾಟಕ್ಕಾಗಿ ನವ ಕಲಬುರ್ಗಿಯ ಸಂಕ್ಪಲದೊಂದಿಗೆ ನಗರದಲ್ಲಿ ವಾಣಿಜ್ಯ ಮಂಡಳಿ ಸಂಘದ ಸದಸ್ಯರುಗಳಿಗೆ, ವಕೀಲಕರ ಬಾರ್ ಸಂಘದವರಿಗೆ, ವಿವಿಧ ಕ್ರೀಡಾ ಪಟುಗಳಿಗೆ, ಸ್ಲಂ ನಿವಾಸಿಗಳಿಗೆ, ವೈದ್ಯರ ಸಂಘದವರಿಗೆ ಹಾಗೂ ಎಲ್ಲರನ್ನೂ ಭೇಟಿ ಮಾಡಿ ಸಲಹೆಗಳನ್ನು ಸಂಗ್ರಹಿಸಲಾಗುವುದು ಎಂದು ಅವರು ತಿಳಿಸಿದರು.
ಅಭಿಯಾನವು ಆನ್‍ಲೈನ್ ಮೂಲಕ, ಕ್ಯೂಆರ್ ಕೋಡ್ ಹಾಗೂ ವಾಟ್ಸ್‍ಪ್ (8595158158) ಸೇರಿದಂತೆ ಮೂರು ಸಲಹಾ ಸಂವಹನ ವಿಧಾನಗಳ ಮೂಲಕ ಜರುಗಲಿದೆ.ನಗರದಾದ್ಯಂತಹ ಕ್ಯೂಆರ ಕೂಡ ಹಾಗೂ ಸಲಹಾ ಪಟ್ಟಿಗೆಗಳನ್ನು ಸ್ಥಾಪಿಸಲಿದ್ದೇವೆ. ಕಾರಣ ಹೊಸ ಕಲಬುರ್ಗಿಗೆ ಉತ್ತಮ ಪ್ರಣಾಳಿಕೆಯನ್ನು ತಯಾರಿಸಲು ನಮಗೆ ಸಹಾಯ ಮಾಡಲು ದಯವಿಟ್ಟು ನಿಮ್ಮ ಅಮೂಲ್ಯವಾದ ಸಲಹೆ ನೀಡಬೇಕೆಂದು ಅವರು ಕೋರಿದರು.
ಸುದ್ದಿಗೋಷ್ಠಿಯಲ್ಲಿ ಸಹ ಸಂಚಾಲಕರಾದ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ದಯಾಘನ್ ಧಾರವಾಡಕರ್, ಸುಂದರ್ ಕುಲಕರ್ಣಿ, ಶರಣು ಸಜ್ಜನ್, ಶ್ರೀಮತಿ ದಾನಮ್ಮ ಬಿರಾದಾರ್, ಜೀವನಲಾಲ್ ಜೈನ್, ವರದಾಶಂಕರ್, ಶಂಭುಲಿಂಗ್ ಬಳಬಟ್ಟಿ ಮುಂತಾದವರು ಉಪಸ್ಥಿತರಿದ್ದರು.