ನವ್ಹೆಂಬರ್ ಮಹಾಕ್ರಾಂತಿಯ 103ನೇ ವರ್ಷಾಚರಣೆ

ವಾಡಿ:ನ.8: ಜಗತ್ತಿನಲ್ಲಿ ಬಂಡವಾಳಶಾಹಿ-ಸಾಮ್ರಾಜ್ಯಶಾಹಿ ಆಳ್ವಿಕರು ಲಾಭ ಗಳಿಸುವ ಹಿತಾಸಕ್ತಿ ಹೊಂದಿದ್ದು, ಕಾರ್ಮಿಕರನ್ನು ಶೋಷಣೆಗೆ ಒಳಪಡಿಸಲಾಗುತ್ತಿದೆ. ಇದರ ವಿರುದ್ದ ಕಾರ್ಮಿಕವರ್ಗ ಒಂದಾಗಿ ಪ್ರಸ್ತಕ ಬಂಡವಾಳಶಾಹಿ ವ್ಯವಸ್ಥೆಯನ್ನು ಕೊನೆಗಾಣಿಸಬೇಕಿದೆ ಎಂದು ಸ್ಥಳೀಯ ಎಸ್‍ಯುಸಿಐ ಪಕ್ಷದ ಕಾರ್ಯದರ್ಶಿ ಕಾ. ಆರ್.ಕೆ.ವೀರಭದ್ರಪ್ಪ ಹೇಳಿದರು.

ಪಟ್ಟಣದ ಎಸ್‍ಯುಸಿಐ ಕಮ್ಯೂನಿಷ್ಟ ಪಕ್ಷದ ಕಚೇರಿಯಲ್ಲಿ ರಷ್ಯಾದ ನವ್ಹೆಂಬರ್ ಮಹಾಕ್ರಾಂತಿಯ 103ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಲೇನಿನ್, ಸ್ಟಾಲಿನ್ ಭಾವಚಿತ್ರಕ್ಕೆ ಹುಗುಚ್ಛ ಅರ್ಪಿಸಿ ಅವರು ಮಾತನಾಡುತ್ತಾ, ಮಾಕ್ರ್ಸ್‍ವಾದ, ಲೇನಿನ್‍ವಾದದ ಆಧಾರದ ಮೇಲೆ 1917ರಲ್ಲಿ ನವ್ಹೆಂಬರ್ 7 ರಂದು ರಷ್ಯಾದಲ್ಲಿ ಸಮಾಜವಾದಿ ಕ್ರಾಂತಿಯನ್ನು ಉದಯಿಸಿ, ಸಮಾಜವಾದಿ ಸಮಾಜವು ಆರ್ಥಿಕವಾಗಿ, ರಾಜಕೀಯವಾಗಿ, ಸಾಂಸ್ಕøತಿಕವಾಗಿ ಏಷ್ಟರ ಮಟ್ಟಿಗೆ ಪ್ರಗತಿ ಸಾಧಿಸಿತೆಂದರೆ, ಜನತೆಗೆ ಉದ್ಯೋಗವನ್ನು ಒದಗಿಸಿತ್ತು. ಹಸಿವು-ಭಿಕ್ಷಾಟನೆ ನಿರುದ್ಯೋಗ, ಪುರುಷ-ಮಹಿಳೆ ಅಸಮಾನತೆ ನಿರ್ಮೂಲನೆ ಮಾಡಿತ್ತು. ದುಡಿಯುವ ಜನರಿಗೆ ಸ್ವಾತಂತ್ರ್ಯ ಮತ್ತು ಪ್ರಜಾತಾಂತ್ರಿಕ ಹಕ್ಕುಗಳನ್ನು ನೀಡಿದ ರಾಷ್ಟ್ರ ರಷ್ಯವಾಗಿದೆ. ಇಂತಹ ಕ್ರಾಂತಿಯು ದೇಶದಲ್ಲಿ ಅವಶ್ಯಕತೆ ಇದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಶರಣು ಹೇರೂರ್, ಗುಂಡಣ್ಣ ಎಮ್.ಕೆ, ಗೌತಮ ಪರತೂರಕರ್, ರಾಜು ಓಡೆಯರಾಜ, ಸಂಗು ಎಸ್.ರೆಡ್ಡಿ, ಅರುಣಕುಮಾರ ಹಿರೇಬಾನರ್ ಇದ್ದರು. ಬಂಡವಾಳಶಾಹಿ ವಿರೋಧಿ ಸಮಾಜವಾದಿ ಕ್ರಾಂತಿ ಚಿರಾಯುವಾಗಲು ಕಾರ್ಮಿಕರ ಐಕ್ಯತೆ ಚಿರಾಯುವಾಗಲಿ, ರಷ್ಯಾ ದೇಶದ ನವ್ಹೆಂಬರ್ ಕ್ರಾಂತಿಯ ಸಂದೇಶ ಎಲ್ಲೆಲ್ಲೂ ಹರಡಲಿ ಎನ್ನುವ ಘೋಷಣೆ ಕೂಗಿದರು.