ನವೋದಯ: ೬೬ನೇ ಕರ್ನಾಟಕ ರಾಜ್ಯೋತ್ಸವದ ದಿನಾಚರಣೆ

ರಾಯಚೂರು.ನ.೨-ನಗರದ ಪ್ರತಿಷ್ಠಿತ ಸಿಬಿಎಸ್ಸಿ ಶಾಲೆಯಾದ ನವೋದಯ ಸೆಂಟ್ರಲ್ ಶಾಲೆ, ರಾಯಚೂರು. ಕರ್ನಾಟಕದ ರಾಜ್ಯೋತ್ಸವವನ್ನು ಶಾಲೆಯ ಮುಖ್ಯಸ್ಥರಾದ ಮಾನ್ಯ ಪ್ರಾಚಾರ್ಯರು ಇಲಿಯಾ ವೈಲೆಟ್ ಮತ್ತು ಉಪಪ್ರಾಚಾರ್ಯರಾದ ಸಾಯಿ ವಿಜಯಭಾರತಿ ಅವರ ಸಮ್ಮುಖದಲ್ಲಿ ೬೬ನೇ ಕರ್ನಾಟಕ ರಾಜ್ಯೋತ್ಸವ ತುಂಬಾ ವಿಜೃಂಭಣೆಯಿಂದ ಆಚರಿಸಲಾಯಿತು.
ಮೊದಲಿಗೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ತಾಯಿ ಭುವನೇಶ್ವರಿ ದೇವಿಗೆ ಪೂಜಾರ್ಪಣೆ ಮಾಡಲಾಯಿತು. ತದನಂತರ ಶಿಕ್ಷಕರು ಮತ್ತು ಮುಖ್ಯ ಅತಿಥಿಗಳು ಭಾಷಣವನ್ನು ನೀಡಿ ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಂಡು, ವಂದನಾರ್ಪಣೆಯನ್ನು ಮಾಡಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಲಾಯಿತು.