ನವೋದಯ ಶಿಕ್ಷಣ ಸಂಸ್ಥೆ : ಅನ್ನ ಸಂತರ್ಪಣಾ ಕಾರ್ಯಕ್ರಮ

ರಾಯಚೂರು.ಆ.೦೪- ನವೋದಯ ಶಿಕ್ಷಣ ಸಂಸ್ಥೆಯ ಆವರಣದಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ಅವರ ದೇವಸ್ಥಾನದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಶ್ರೀವಾರಿ ಕುಂಭಾಭಿಷೇಕ ಮತ್ತು ಪವಿತ್ರೋತ್ಸವ ಕಾರ್ಯಕ್ರಮದ ನಾಲ್ಕನೆ ದಿನದ ಪೂಜಾ ಕೈಂಕರ್ಯ ಇಂದು ನಡೆಸಲಾಯಿತು.
ಬೆಳಗಿನ ಜಾವ ೬ ಘಂಟೆಯಿಂದ ತೋಮಲ ಸೇವೆ, ಅರ್ಚನ ನೈವೇದ್ಯಗಳ ನಂತರ ಮುಂಜಾನೆ ೯.೩೦ ಕ್ಕೆ ಯಾಗಶಾಲ ಪೂರ್ಣಾಹುತಿ, ಕಳಾವಾಹನಂ, ಸಂಪ್ರೋಕ್ಷಣಂ. ಮುಂಜಾನೆ ೧೧.೩೦ ಕ್ಕೆ ತಿರುಪ್ಪಾವಡ ಸೇವಾ ಮತ್ತು ಸ್ವಾಮಿವಾರಿ ದರ್ಶನ ಕಾರ್ಯಕ್ರಮ ನಡೆಸಲಾಯಿತು. ೧೨.೩೦ ಕ್ಕೆ ಧ್ವಜಾರೋಹಣ ಕಾರ್ಯಕ್ರಮವೂ ನಡೆಸಲಾಯಿತು.
ಮಧ್ಯಾಹ್ನ ಭಕ್ತರಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಸಲಾಯಿತು. ಅನೇಕ ಭಕ್ತಾದಿಗಳು ಸ್ವಾಮಿವಾರಿ ದರ್ಶನದ ನಂತರ ಪ್ರಸಾದ ಸ್ವೀಕರಿಸಿದರು. ಇಂದಿನ ಪೂಜಾ ಕಾರ್ಯಕ್ರಮದಲ್ಲಿ ನವೋದಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಸ್.ಆರ್. ರೆಡ್ಡಿ ಹಾಗೂ ಧರ್ಮಪತ್ನಿ ಅವರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸಂಜೆ ಯಾಗಶಾಲ ಪ್ರವೇಶ, ಪವಿತ್ರ ಪ್ರತಿಷ್ಠ ಕಾರ್ಯಕ್ರಮಗಳು ನಡೆಯಲಿವೆ.