ಸಂಜೆವಾಣಿ ವಾರ್ತೆ
ಹಿರಿಯೂರು ಜು.29- : ತಾಲೂಕಿನ ಉಡು ವಳ್ಳಿ ಯಲ್ಲಿರುವ ಜವಹರ್ ನವೋದಯ ಶಾಲೆಯಲ್ಲಿ ಹೈದರಾಬಾದ್ ವಲಯದ ಅಂತರ ಜಿಲ್ಲಾ ವಿಭಾಗೀಯ ಕ್ರೀಡಾ ಕೂಟವನ್ನು ಏರ್ಪಡಿಸಲಾಗಿತ್ತು ಈ ಕ್ರೀಡಾಕೂಟದಲ್ಲಿ ಹತ್ತು ಜಿಲ್ಲೆಗಳ ನವೋದಯ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಕಬ್ಬಡಿ, ಖೋಖೋ, ಯೋಗ, ಚೆಸ್, ಬ್ಯಾಟ್ಮಿಟನ್ ಮತ್ತು ಟೇಬಲ್ ಟೆನ್ನಿಸ್ ಪಂದ್ಯಾವಳಿಗಳನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಪವರ್ ಗ್ರೀಡ್ ಮ್ಯಾನೇಜರ್ ಹರೀಶ್ ಕುಮಾರ್ ನಾಯರ್ ಉದ್ಘಾಟಿಸಿದರು. ಪ್ರಾಚಾರ್ಯರಾದ ಡ್ಯಾನಿಯಲ್ ರತನ್ ಕುಮಾರ್ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು