ನವೋದಯ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳು ದೊಣ್ಣೆಯಿಂದ ಹೊಡೆದಾಟ ಓರ್ವ ವಿದ್ಯಾರ್ಥಿ ಗಂಭೀರ ಗಾಯ

(ಸಂಜೆವಾಣಿ ವಾರ್ತೆ)
ರಾಯಚೂರು,ಮಾ.೩೧-
ನವೋದಯ ಮೆಡಿಕಲ್ ಕಾಲೇಜು ಎರಡು ಗುಂಪುಗಳ ವಿದ್ಯಾರ್ಥಿಗಳ ಮಾರಾಮರಿ ಜಗಳದಿಂದ ಓರ್ವ ವಿದ್ಯಾರ್ಥಿ ಗಂಭೀರ ಗಾಯಗೊಂಡ ಘಟನೆ ಮಂತ್ರಾಲಯ ರಸ್ತೆಯ ನವೋದಯ ಮೆಡಿಕಲ್ ಕಾಲೇಜು ಕ್ಯಾಂಪಸ್ ಬಳಿ ನಡೆದಿದೆ. ನವೋದಯ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಪರಸ್ಪರ ದೊಣ್ಣೆಗಳಿಂದ ಹೊಡೆದುಕೊಂಡಿರುವ ಘಟನೆ ಸಾರ್ವಜನಿಕರಲ್ಲಿ ಭಾರೀ ಆತಂಕಕ್ಕೆ ಕಾರಣವಾಗಿದೆ. ವೈದ್ಯಕೀಯ ಕ್ಷೇತ್ರದ ಅತ್ಯಂತ ಮಹತ್ವ. ಈ ಹಿನ್ನಲೆ ರೋಗಿಗಳಿಗೆ ಚಿಕಿತ್ಸೆ ನೀಡಿದ ಬೇಕಾದ ವೈದ್ಯಕೀಯ ವಿದ್ಯಾರ್ಥಿಗಳ ಜಗಳದಿಂದ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ರೋಗಿಗಳ ಜೀವ ಉಳಿಸುವ ವೈದ್ಯ ವಿದ್ಯಾರ್ಥಿಗಳು ಈ ರೀತಿಯ ದೊಣ್ಣೆಗಳಿಂದ ಹೊಡೆದುಕೊಂಡಿರುವ ಸಾರ್ವಜನಿಕರಲ್ಲಿ ಭಾರೀ ಆತಂಕ ಎದುರಾಗಿದೆ.
ವೈದ್ಯಕೀಯ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿರುವ ಮತ್ತು ಹೆಸರುವಾಸಿಯಾಗಿರುವ ನವೋದಯ ಸಂಸ್ಥೆಯ ವಿದ್ಯಾರ್ಥಿಗಳ ಮಾರಾಮರಿ ಜಗಳಕ್ಕೆ ನವೋದಯ ಸಂಸ್ಥೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.
ನವೋದಯ ಮೆಡಿಕಲ್ ಸಂಸ್ಥೆ ತೆಲಂಗಾಣದ ನಾರಾಯಣಪೇಟೆ ಮಾಜಿ ಶಾಸಕ ಎಸ್ ಆರ್ ರೆಡ್ಡಿಯ ಅವರು ನವೋದಯ ಮೆಡಿಕಲ್ ಹಾಗೂ ಸಂಶೋಧನಾ ಸಂಸ್ಥೆಯನ್ನು ಕಳೆದ ೩೦ ವರ್ಷಗಳಿಂದ ಸಂಸ್ಥೆಯನ್ನು ನಡೆಸುತ್ತಿದ್ದಾರೆ.
ನವೋದಯ ಮೆಡಿಕಲ್ ಕಾಲೇಜು ವಸತಿ ನಿಲಯ ೫ ರಲ್ಲಿ ಎರಡು ಗುಂಪಿನ ವಿದ್ಯಾರ್ಥಿಗಳು ರಾತ್ರಿ ವೇಳೆ ಪರಸ್ಪರ ದೊಣ್ಣೆಗಳನ್ನು ತೆಗೆದುಕೊಂಡು ಮನಬಂದಂತೆ ಹೊಡೆದುಕೊಂಡಿದ್ದಾರೆ.
ಕಳೆದ ದಿ ೨೮,೨೯,೩೦ ರಂದು ನಡೆದ ನವೋದಯ ಮೆಡಿಕಲ್ ಕಾಲೇಜ್ ರೀಗೇಲ್ ೨೪ ರ ಕಾರ್ಯಕ್ರಮ ಅತ್ಯಂತ ಅದ್ದೂರಿಯಾಗಿ ಆಯೋಜನೆ ಮಾಡಲಾಗಿತ್ತು. ಮೆಡಿಕಲ್ ಕಾಲೇಜಿನ ವಾರ್ಷಿಕೋತ್ಸವದ ಉತ್ಸವ ಸಂಭ್ರಮದ ವೇಳೆ ವಿದ್ಯಾರ್ಥಿಗಳು ಕಾಲೇಜುನಲ್ಲಿ ಪಾರ್ಟಿ ಆಯೋಜನೆ ಮಾಡಿಕೊಂಡಿದ್ದು, ಪಾರ್ಟಿ ಮುಗಿಸಿ ವಸತಿ ನಿಲಯ ಬಂದ ನಂತರ ಎರಡು ಗುಂಪುಗಳು ಜಗಳ ನಡೆದಿದೆ. ಈ ಕಾರ್ಯಕ್ರಮವೊಂದರ ನಾಯಕತ್ವ ವಿಷಯವಾಗಿ ಚಿಕ್ಕ ಜಗಳ ನಡೆದಿದೆ ಎನ್ನಲಾಗಿದೆ. ಅದನ್ನೇ ವೈಷಮ್ಯವಾಗಿ ಬೆಳೆಸಿಕೊಂಡು ನಿನ್ನೆ ತಡರಾತ್ರಿ ಕಾಲೇಜಿನ ಆವರಣದಲ್ಲಿ ಮತ್ತೆ ಮಾತಿನ ಕಲಹ ಪ್ರಾರಂಭವಾಗಿ ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು, ಎರಡೂ ಗುಂಪುಗಳವರು ಕಟ್ಟಿಗೆಯಿಂದ ಹೊಡೆದಾಡಿದ್ದಾರೆ. ಓರ್ವ ವಿದ್ಯಾರ್ಥಿ ತಲೆಗೆ ದೊಣ್ಣೆ ಏಟು ಬಿದ್ದು ತೀವ್ರ ರಕ್ತಸಾವ್ರದಿಂದ ಗಂಭೀರ ಗಾಯಗೊಂಡ ಘಟನೆ ನಡೆದಿದೆ.ಈ ಒಂದು ಘಟನೆಯಿಂದ ವಿದ್ಯಾರ್ಥಿ ಮತ್ತು ಸಾರ್ವಜನಿಕರಲ್ಲಿ ಭಾರೀ ಆತಂಕ ಸೃಷ್ಟಿಯಾಗಿದೆ.