ನವೋದಯ ವೆಂಕಟೇಶ್ವರ ದೇವಸ್ಥಾನ : ೫ ನೇ ದಿನ ಪೂಜಾ ಕಾರ್ಯಕ್ರಮ

ರಾಯಚೂರು.ಆ.೦೫- ಕಳೆದ ನಾಲ್ಕು ದಿನಗಳ ಸುಧೀರ್ಘ ಶ್ರೀವಾರಿ ಕುಂಭಾಭಿಷೇಕ ಮತ್ತು ಪವಿತ್ರೋತ್ಸವ ಕಾರ್ಯಕ್ರಮ ಇಂದು ರಾತ್ರಿ ಏಕಾಂತ ಸೇವೆ ಮೂಲಕ ಮುಕ್ತಾಯಗೊಳ್ಳಲಿದೆ.
ಕೊನೆ ದಿನವಾದ ಇಂದು ಮುಂಜಾನೆ ೬ ಘಂಟೆಯಿಂದ ಸುಪ್ರಭಾತ ನಿತ್ಯ ಪೂಜೆ, ನೈವೇದ್ಯ ಕಾರ್ಯಕ್ರಮ ನಡೆಸಲಾಯಿತು. ಮುಂಜಾನೆ ೮ ಘಂಟೆಗೆ ಶ್ರೀವಾರಿ ಮೂಲ ಮೂರ್ತಿ ಅಭಿಷೇಕ ಕಾರ್ಯಕ್ರಮ ನಡೆಸಲಾಯಿತು. ಮುಂಜಾನೆ ೧೦ ಘಂಟೆಗೆ ಸ್ನಪನ ತಿರುಮಂಜನಂ ಹಾಗೂ ೧೨ ಘಂಟೆಗೆ ಪವಿತ್ರ ಸಮರ್ಪಣೆ ಕಾರ್ಯಕ್ರಮ ನಡೆಯಲಿದೆ. ಸಂಜೆ ೪ ಘಂಟೆಗೆ ಗ್ರಾಮೋತ್ಸವ ಹಾಗೂ ಧ್ವಜಾರೋಹಣ ಕಾರ್ಯಕ್ರಮಗಳೊಂದಿಗೆ ಸಂಜೆ ೬ ಘಂಟೆಗೆ ಮಹಾಪೂರ್ಣಾಹುತಿ ಮತ್ತು ಪವಿತ್ರ ವಿಸರ್ಜನೆ ಕಾರ್ಯಕ್ರಮ ನಡೆಯಲಿದೆ.
ಕಳೆದ ಐದು ದಿನಗಳಿಂದ ತಿರುಪತಿಯ ಅರ್ಚಕವೃಂದದವರು ಶ್ರೀವಾರಿ ಪೂಜಾ ಕೈಂಕರ್ಯವನ್ನು ಅತ್ಯಂತ ನಿಯಮ ಬದ್ಧವಾಗಿ ನಿರ್ವಹಿಸಿದರು. ಭಕ್ತಾದಿಗಳು ಈ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಪ್ರತಿನಿತ್ಯ ಪ್ರಸಾದದೊಂದಿಗೆ ಕಾರ್ಯಕ್ರಮವನ್ನು ನಿರ್ವಹಿಸಲಾಯಿತು. ಇಂದು ಸಂಜೆ ಪವಿತ್ರ ವಿಸರ್ಜನೆಯೊಂದಿಗೆ ಶ್ರೀವಾರಿ ಕುಂಭಾಭಿಷೇಕ ಮತ್ತು ಪವಿತ್ರೋತ್ಸವ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಳ್ಳಲಿದೆ. ಈ ಕಾರ್ಯಕ್ರಮದಲ್ಲಿ ನವೋದಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಸ್.ಆರ್. ರೆಡ್ಡಿ, ಧರ್ಮಪತ್ನಿ ಹಾಗೂ ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು.