ನವೋದಯ ಕಾಲದ ಕಾವ್ಯ ಮಹತ್ವದ್ದು : ಡಾ.ಚನ್ನಪ್ಪ

ಇಂಡಿ:ಜೂ.26: ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ನವೋದಯ ಕಾಲ ಘಟ್ಟದ ಕಾವ್ಯಕ್ಕೆ ಅತ್ಯಂತ ಮಹತ್ವದ ಸ್ಥಾನವಿದೆ. ಹಲವಾರು ಜನ ಮಹತ್ವದ ಕವಿಗಳು ನವೋದಯ ಕಾಲದ ಕಾವ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಅದರಲ್ಲಿ ಕುವೆಂಪು, ಬೇಂದ್ರೆ, ಬಿ.ಎಂ. ಶ್ರೀ ಮತ್ತು ಹಲಸಂಗಿಯ ಮಧುರಚೆನ್ನರು ಅತ್ಯಂತ ಪ್ರಮುಖರು ಎಂದು ಕೇಂದ್ರ ಸಾಹಿತ್ಯ ಅಕಾಡಮಿಯ ಕನ್ನಡ ಸಲಹಾ ಸಮಿತಿ ಸದಸ್ಯ ಸಿಂದಗಿಯ ಕಥೆಗಾರ ಡಾ. ಚನ್ನಪ್ಪ ಕಟ್ಟಿ ಹೇಳಿದರು.

ಕೇಂದ್ರ ಸಾಹಿತ್ಯ ಅಕಾದೆಮಿ ನವದೆಹಲಿ ಹಾಗೂ ಸರಕಾರಿ ಪ್ರೌಢಶಾಲೆ ನಾದ ಕೆ.ಡಿ. ಅವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ ‘ಗ್ರಾಮಲೋಕ’ ಕಾರ್ಯಕ್ರಮದಲ್ಲಿ ಆಯೋಜಿಸಿದ್ದ ನವೋದಯ ಕಾಲದ ಕಾವ್ಯಗಳ ಓದು ಹಾಗೂ ವಿಶ್ಲೇಷಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಕೇಂದ್ರ ಸಾಹಿತ್ಯ ಅಕಾದೆಮಿಯ ಹಲವಾರು ಚಟುವಟಿಕೆಗಳು ಕರ್ನಾಟಕದಲ್ಲಿ ವರ್ಷವೀಡಿ ನಡೆಯಲಿದ್ದು, ಅದರ ಮೊದಲ ಕಾರ್ಯಕ್ರಮ ಗ್ರಾಮ ಲೋಕ ನಾದ ಕೆ.ಡಿ ಯಲ್ಲಿ ಅನಾವರನಗೊಂಡಿದೆ ಎಂದ ಅವರು ಕುವೆಂಪು ಅವರ ಸಾಹಿತ್ಯ ಸೇರಿದಂತೆ ನವೋದಯ ಕಾಲದ ಕಾವ್ಯ ಓದುವುದು ಇಂದಿನ ಪೀಳಿಗೆಗೆ ಅತೀ ಅವಶ್ಯ ಎಂದರು.

ಕಾರ್ಯಕ್ರಮದಲ್ಲಿ ಶಹಾಪುರದ ವಿಮರ್ಶಕ ಸಿ.ಎಸ್. ಭೀಮರಾಯ , ಆಲಮೇಲದ ಸಾಹಿತಿ ಡಾ. ರಮೇಶ ಕತ್ತಿ, ಸಾಲೋಟಗಿಯ ಕವಿ ಗೀತಯೋಗಿ, ಸಿಂದಗಿಯ ಯುವ ಕವಿ ದೇವು ಮಾಕೊಂಡ ಕವನ ವಾಚಿಸಿ ವಿಶ್ಲೇಷಣೆ ಮಾಡಿದರು.

ಹಿರಿಯ ಸಂಶೋಧಕ ಡಿ.ಎನ್ ಅಕ್ಕಿ , ವಿದ್ಯಾರ್ಥಿನಿ ಸಂಧ್ಯಾರಾಣಿ ಮಠಪತಿ, ಮುಖ್ಯೋಪಾಧ್ಯಾಯ ಸಿ.ಎಂ. ಬಂಡಗರ, ಸಂಗನಗೌಡ ಹಚಡದ, ರಾಮಚಂದ್ರ ಬಿರಾದಾರ ಮಾತನಾಡಿದರು.

ರಾಮಪ್ಪ ಮೇತ್ರಿ, ಬಸವರಾಜ ಗೊರನಾಳ, ಶಿವಾನಂದ ಹಿಪ್ಪಳಿ, ಅಲ್ಲಾಭಕ್ಷ ಚೌದರಿ, ಎಸ್.ಕೆ. ಇಂಗಳೆ, ಶ್ರೀಧರ ಹಿಪ್ಪರಗಿ, ವಾಯ್.ಜಿ. ಬಿರಾದಾರ, ಜಹಾಂಗೀರ ಗಬಸಾವಳಗಿ, ಶಿವಾನಂದ ಡಬ್ಬಿಗಾರ, ಎಸ್.ಕೆ. ಬೆಕಿನಾಳ, ಸಿದ್ದು ಹೊಸಪೇಟಿ, ಆಂಜನೇಯ ಹೊಸಮನಿ, ಅಣ್ಣಾರಾಯ ಗುಗದಡ್ಡಿ, ಮಲ್ಲಿನಾಥ ಬಿರಾದಾರ, ಸಂತೋಷ ಬಂಡೆ ಚಂದ್ರಕಾಂತ ಜಮಾದಾರ, ಗುರುನಾಥ ಅರಳಗುಂಡಗಿ, ರೇಖಾ ನಾಗಠಾಣ, ಅನಿತಾ ಅಳಗುಂಡಗಿ, ಶಶಿಕಲಾ ಬಡಿಗೇರ ಮತ್ತಿತರಿದ್ದರು.