ನವೋದಯ ಆಸ್ಪತ್ರೆ : ಉಚಿತ ಆರೋಗ್ಯ ಶಿಬಿರ

ರಾಯಚೂರು.ನ.೨೫-ನವೋದಯ ಮೇಡಿಕಲ್ ಕಾಲೇಜ್ ಆಸ್ಪತ್ರೆ ಮತ್ತು ಸಂಶೊಧನ ಕೇಂದ್ರ ರಾಯಚೂರು ಇವರ ಸಂಯುಕ್ತಶ್ರಯದಲ್ಲಿ ರಾಯಚೂರು ತಾಲೂಕಿನ ಆಲ್ಕೂರು ಗ್ರಾಮದಲ್ಲಿ ನವೋದಯ ಆಸ್ಪತ್ರೆ ವತಿಯಿಂದ ಗ್ರಾಮದ ಜನರಿಗೆ ಉಚಿತ ಆರೋಗ್ಯ ಶಿಬಿರವನ್ನು ಹಮ್ಮಿಕೋಳಲಾಯಿತ್ತು.
ಈ ಸಂದರ್ಭದಲ್ಲಿ ಆಲ್ಕೂರು ಗ್ರಾಮದ ಸಾರ್ವಜನಿಕರಿಗೆ ಉಚಿತ ಚಿಕಿತ್ಸೆ ಮತ್ತು ಉಚಿತ ಔಷದಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ೩೨೧ ಜನರಿಗೆ ಚಿಕಿತ್ಸೆಯನ್ನು ಹಾಗೂ ಉಚಿತ ದಂತ ಚಿಕಿತ್ಸೆಯನ್ನು ನೀಡಲಾಯಿತು. ಈ ಸಂದರ್ಭದಲಿ ಶಾಲೆಯ ಮುಖ್ಯೆ ಗುರುಗಳು, ಶಿಕ್ಷಕರು, ಮತ್ತು ಗ್ರಾ.ಪಂ.ಸದಸ್ಯರು, ಗ್ರಾಮದ ಸಮಾಜ ಸೇವಕರು ಹಾಗೂ ನವೋದಯ ಆಸ್ಪತ್ರೆಯ ನುರಿತ ತಜ್ಙ ವೈದ್ಯರು, ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.