ನವೋದಯ ಆಸ್ಪತ್ರೆ:ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ

ರಾಯಚೂರು.ಅ.೩೧-ನವೋದಯ ಮೆಡಿಕಲ್ ಕಾಲೇಜ್ ಆಸ್ಪತ್ರೆ ಮತ್ತು ಸಂಶೊಧನ ಕೇಂದ್ರ ರಾಯಚೂರು ಹಾಗೂ ನವೋದಯ ವೈದ್ಯಕೀಯ ಮಹಾವಿದ್ಯಾಲಯದ ನಗರ ಆರೋಗ್ಯ ತರಬೇತಿ ಕೇಂದ್ರ ರಾಯಚೂರು ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ -೨೦೨೧ ಕಾರ್ಯಕ್ರಮವನ್ನು ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸಮುದಾಯ ವೈದ್ಯಕಿಯ ವಿಭಾಗದ ಪ್ರಾದ್ಯಾಪಕರದ ಡಾ.ಮಹಮದ್ ಇಲಿಯಾಜ್ ಹಾಗೂ ಸಹಾಯಕ ಪ್ರಾದ್ಯಾಪಕರದ ಡಾ.ಮಹಮದ್ ಮುಂತಾಜೀಮ್ ಅವರುಮಾನಸಿಕ ರೋಗಗಳ ಕಾರಣಗಳು. ಹಾಗೂ ಅದನ್ನು ತಡೆಗಟ್ಟುವ ಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಸಮುದಾಯ ವೈದ್ಯಕಿಯ ವಿಭಾಗದ ಪ್ರಾದ್ಯಾಪಕರದ ಡಾ.ನರೇಂದ್ರ ಮಾದೇಕರ್, ಡಾ. ಮಹಮದ್ ಇಲಿಯಜ್ ಹಾಗೂ ಸಹಾಯಕ ಪ್ರಾದ್ಯಾಪಕರದ ಡಾ.ಅರ್ಶಿಯ, ಡಾ.ಸುಜಾತ, ಡಾ.ಲಕ್ಮೀ, ಡಾ.ಮಹಮದ್, ಮುಂತಾಜೀಮ್, ಕಿರಿಯ ವೈದ್ಯರು ಹಾಗೂ ವೈದ್ಯಕೀಯ ವಿಧ್ಯಾರ್ಥಿಗಳು ಹಾಗೂ ಎಲ್ಲಾ ಸಿಬ್ಬಂಧಿ ವರ್ಗದವರು ಉಪಸ್ಥಿತರಿದ್ದರು.