ನವೆಂಬರ ಕನ್ನಡಿಗರಾಗದೇ ನಿತ್ಯೋತ್ಸವ ಕನ್ನಡಿಗರಾಗಬೇಕಾಗಿದೆ :ಮಂಜುನಾಥ ಜುನಗೊಂಡ

ವಿಜಯಪುರ:ನ.3: ನವೆಂಬರ್ ಒಂದರಂದು ಮಾತ್ರ ಕನ್ನಡ ಭಾಷಾಭಿಮಾನ ಸೀಮಿತವಾಗದೆ ಪ್ರತಿನಿತ್ಯ ಹೃದಯದಲ್ಲಿ ಭಾಷೆಯನ್ನು ಪೂಜಿಸುವಂತಾಗಬೇಕು ಲೇಖಕ, ಚಿಂತಕ ಮಂಜುನಾಥ ಜುನಗೊಂಡ ಹೇಳಿದರು.

ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ. ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ 67 ನೇ ಕರ್ನಾಟಕ ರಾಜ್ಯೋತ್ಸವದಲ್ಲಿ ಮಾತನಾಡಿದ ಅವರು, ಅನ್ಯ ಭಾಷೆಗೆ ದಾಸರಾಗದೆ ನಮ್ಮ ಭಾಷೆಯ ಮೇಲೆ ಗೌರವವಿರಬೇಕು. ಭಾಷೆ ಎಂಬುದು ಮಾಧ್ಯಮವಾಗಿದೆ ಹೊರತು ಅದು ಜೀವನ ಕ್ರಮವಲ್ಲ. ಆಧುನೀಕರಣವಾದಂತೆ ಇಂಗ್ಲೀಷ ಭಾಷೆ ಬಲ್ಲವರು ಮಾತ್ರ ಶ್ರೇಷ್ಠರು ಎಂಬ ಮನೋಭಾವ ಮೂಡುತ್ತಿದೆ. ಅನ್ಯ ಭಾಷೆಗೆ ದಾಸರಾಗದೆ ನಮ್ಮ ಭಾಷೆಗೆ ಹೆಚ್ಚಿನ ಒತ್ತು ಕೊಡುವುದು ಅವಶ್ಯಕತೆ ಇದೆ ಎಂದರು. ನಾವು ಕನ್ನಡಕ್ಕಾಗಿ, ಕನ್ನಡ ನಾಡಿಗಾಗಿ ಶ್ರಮಿಸುವುದು ಅತ್ಯವಶ್ಯಕವಾಗಿದೆ. ಬೇರೆ ಭಾಷೆಯೊಂದಿಗೆ ನಮ್ಮ ಕನ್ನಡ ಭಾಷೆಯು ಉತ್ತುಂಗಕ್ಕೆರಬೇಕಾಗಿದೆ. ಅದಕ್ಕಾಗಿ ಕನ್ನಡ ಭಾಷೆಯ ಏಳಿಗೆಗಾಗಿ ನಾವೆಲ್ಲರೂ ಒಗ್ಗೂಡಿ ಶ್ರಮಿಸಬೇಕಾಗಿದೆ. ಕರ್ನಾಟಕದ ಪರಂಪರೆ ಸಂಸ್ಕøತಿ ಬಿಂಬಿಸುತ್ತಿದ್ದ ಕನ್ನಡದ ಉಳಿವಿಗಾಗಿ ಪ್ರತಿಯೊರ್ವ ಕನ್ನಡಿಗನೂ ಹೋರಾಟ ಮಾಡಬೇಕಾಗಿದೆ. ಇಂದಿನ ಯುವಕರು ಕನ್ನಡ ನಾಡು, ನುಡಿಯ ಪ್ರೀತಿ ಹೃದಯದಲ್ಲಿ ಇಮ್ಮಡಿಗೊಳಿಸಿಕೊಳ್ಳಬೇಕು. ಕನ್ನಡ ಭಾಷೆ ಮತ್ತು ಅಸ್ಮಿತೆಗೆ ಶ್ರಮಿಸಬೇಕಾಗಿದೆ. ಕನ್ನಡ ಭಾಷೆಯ ಏಳಿಗೆಗಾಗಿ ಶ್ರಮಿಸಿದ ಮಹಾನ್ ವ್ಯಕ್ತಿಗಳು ಸ್ಮರಿಸಿ, ಅವರ ಆಚಾರ ವಿಚಾರಗಳನ್ನು ನಾವುಗಳೆಲ್ಲರೂ ಮೈಗೊಡಿಸಕೊಳ್ಳಬೇಕಾಗಿದೆ. ಕನ್ನಡ ನಾಡು, ನೆಲ, ಜಲಗಳ ಅಸ್ಮಿತೆಗೆ ನಾವೆಲ್ಲರೂ ಕೈಜೊಡಿಸಿ ಕನ್ನಡ ಭಾಷೆಯ ಅಭಿವೃದ್ಧಿಗೆ ಶ್ರಮಿಸಬೇಕಾಗಿದೆ ಎಂದು ಹೇಳಿದರು.

ಪ್ರಾಚಾರ್ಯ ಡಾ.ಯು.ಎಸ್.ಪೂಜೇರಿ ಮಾತನಾಡಿ, ಕನ್ನಡ ಎರಡು ಸಾವಿರ ವರ್ಷಗಳ ಇತಿಹಾಸವುಳ್ಳ ಭಾಷೆ. ಕನ್ನಡಕ್ಕೆ ಕೊಡಬೇಕಾದ ಮಹತ್ವವನ್ನು ನಾವು ಕೊಡುತ್ತಿಲ್ಲ; ಅದಕ್ಕೆ ಮಹತ್ವ ನಾವು ಕೊಡಬೇಕಾಗಿದೆ. ಭಾಷಾವಾರು ಪ್ರಾಂತ್ಯಗಳನ್ನು ಮಾಡಲಾಯಿತು. ಅದರಂತೆ ಭಾಷೆಯನ್ನೂ ಬೆಳಸಬೇಕಾಗಿದೆ. ಅನ್ಯಭಾಷೆಗೆ ದಾಸರಾಗದೆ ನಮ್ಮ ಭಾಷೆಯನ್ನು ಗೌರವಿಸಿ, ಬೆಳೆಸೆಬೇಕಾಗಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.

ಈ ಸಂದರ್ಭದಲ್ಲಿ ಉಪಪ್ರಾಚಾರ್ಯ ಬಿ.ಎಸ್. ಬಗಲಿ, ಪಿಯು ಪ್ರಾಚಾರ್ಯ ಸಿ.ಬಿ.ಪಾಟೀಲ, ಐಕ್ಯೂಎಸಿ ನಿರ್ದೇಶಕ ಡಾ.ಪಿ.ಎಸ್.ಪಾಟೀಲ, ನ್ಯಾಕ್ ಸಂಯೋಜಕ ಡಾ.ಕೆ.ಮಹೇಶಕುಮಾರ, ಕನ್ನಡ ವಿಭಾಗ ಮುಖ್ಯಸ್ಥ ಡಾ.ಶ್ರೀನಿವಾಸ ದೊಡ್ಡಮನಿ, ದೈಹಿಕ ನಿರ್ದೇಶಕ ಎಸ್.ಕೆ.ಪಾಟೀಲ, ಉಪನ್ಯಾಸಕರಾದ ಬಿ ಎಸ್ ಬೆಳಗಲಿ, ವೈ ತಮ್ಮಣ್ಣ, ವಿದ್ಯಾ ಪಾಟೀಲ, ರಶ್ಮಿ ಪಾಟೀಲ, ವೈ.ಎಸ್.ಅಂಗಡಿ, ಚೇತನ ಸಂಕೊಂಡ, ಜಯಶ್ರೀ ಬಿರಾದಾರ, ಡಾ.ಅನೀಲ ನಾಯಕ, ಆರ್.ಡಿ.ಜೋಷಿ ಸೇರಿದಂತೆ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಡಾ.ಉಷಾದೇವಿ ಹಿರೇಮಠ ನಿರೂಪಿಸಿದರು.