ನವೆಂಬರ್ 30ರವರೆಗೆ ಮಣಿಪಾಲ ಆರೋಗ್ಯಕಾರ್ಡ್ ನೋಂದಣಿ ವಿಸ್ತರಣೆ-ಡಾ.ಅವಿನಾಶ ಶೆಟ್ಟಿ

ಕೂಡ್ಲಿಗಿ.ನ.20:-ಸಾರ್ವಜನಿಕರ ಬೇಡಿಕೆಯ ಮೇರೆಗೆ ಮಣಿಪಾಲ ಆರೋಗ್ಯಕಾರ್ಡ್ ನೋಂದಾವಣೆಯನ್ನು ನವೆಂಬರ್ 30ರವರೆಗೆ ವಿಸ್ತರಿಸಲಾಗಿದೆ ಎಂದು ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ್ ಶೆಟ್ಟಿ ತಿಳಿಸಿದ್ದಾರೆ.
ಅವರು ಪಟ್ಟಣದ ಪ್ರವಾಸಿಮಂದಿರದಲ್ಲಿ ಮಣಿಪಾಲ ಆರೋಗ್ಯ ಕಾರ್ಡ್ ನೊಂದಣಿ ಕಾರ್ಯ ಕುರಿತಂತೆ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ 20ನೇ ವರ್ಷದ ಅಂಗವಾಗಿ, ಸರಳ ಹಾಗೂ ಪೂರ್ವ ಸಂಖ್ಯಾ ಮುದ್ರಿತ ಸ್ಮಾರ್ಟ್ ಕಾರ್ಡನ್ನು ಪರಿಚಯಿಸಿದ್ದೇವೆ ಮತ್ತು ಸಂಖ್ಯಾ ಮುದ್ರಿತ ಸ್ಮಾರ್ಟ್ ಕಾರ್ಡನ್ನು ಕಾರ್ಡುದಾರರಿಗೆ ಸ್ಥಳದಲ್ಲೇ ನೀಡಲಾಗುವುದು. ಒಂದು ವರ್ಷ ಮತ್ತು ಎರಡು ವರ್ಷದ ಯೋಜನೆಯ ಮಣಿಪಾಲ ಆರೋಗ್ಯ ಕಾರ್ಡ್ ಹೊಂದಿರುವವರು ಮಣಿಪಾಲ, ಉಡುಪಿ, ಕಾರ್ಕಳ, ಮಂಗಳೂರು, ಗೋವಾ ಮತ್ತು ಕಟೀಲಿನಲ್ಲಿರುವ ಆಸ್ಪತ್ರೆಗಳಲ್ಲಿ ವೈದ್ಯಕೀಯ ಮತ್ತು ದಂತ ಸೇವೆಗಳ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಕಾರ್ಡಿನ ಸದಸ್ಯತ್ವವು ಒಬ್ಬರಿಗೆ 250, ಕುಟುಂಬಕ್ಕೆ ಅಂದರೆ ಕಾರ್ಡುದಾರ, ಅವರ ಸಂಗಾತಿ, 25 ವರ್ಷದ ಒಳಗಿನ ಮಕ್ಕಳಿಗೆ 500 ಮತ್ತು ಕುಟುಂಬ ಪ್ಲಸ್ ಯೋಜನೆಗೆ ಅಂದರೆ ಕಾರ್ಡುದಾರ, ಅವರ ಸಂಗಾತಿ, 25 ವರ್ಷದ ಒಳಗಿನ ಮಕ್ಕಳು ಮತ್ತು 4 ಪೋಷಕರು (ತಂದೆ, ತಾಯಿ, ಅತ್ತೆ ಮತ್ತು ಮಾವ) 650/-. ಇದೊಂದು ಹೆಚ್ಚುವರಿ ಲಾಭವಾಗಿದೆ. 2 ವರ್ಷದ ಯೋಜನೆಯಲ್ಲಿ ಒಬ್ಬರಿಗೆ 400, ಕುಟುಂಬಕ್ಕೆ 700 ಮತ್ತು ಕುಟುಂಬ ಪ್ಲಸ್ ಯೋಜನೆಗೆ 850 ಇರುತ್ತದೆ. ಮಣಿಪಾಲ ಆರೋಗ್ಯ ಕಾರ್ಡ್ ನ್ನು ಒಂದು ಅಥವಾ ಎರಡು ವರ್ಷದ ಅವಧಿಗೆ ಎಷ್ಟು ಬಾರಿಯಾದರೂ ಉಪಯೋಗಿಸಬಹುದು ಎಂದು ತಿಳಿಸಿದರು.
ಮಣಿಪಾಲ ಆರೋಗ್ಯ ಕಾರ್ಡ್ ಉಪಯೋಗ ಮತ್ತು ಸೌಲಭ್ಯ :-ವೈದ್ಯರ ಸಮಾಲೋಚನೆ 50% ರಿಯಾಯಿತಿ. ಪ್ರಯೋಗಾಲಯ ಪರೀಕ್ಷೆ 30% ರಿಯಾಯಿತಿ.ಸಾಮಾನ್ಯ ವಾರ್ಡಿನಲ್ಲಿ ಒಳರೋಗಿಯಾದಲ್ಲಿ ಉಪಯೋಗವಾಗುವ ವಸ್ತುಗಳನ್ನು ಹೊರತುಪಡಿಸಿ 25% ರಿಯಾಯಿತಿ ಸಿ ಟಿ, ಎಂ ಆರ್ ಐ, ಅಲ್ಟ್ರಾಸೌಂಡ್, 20% ರಿಯಾಯಿತಿ ಹೊರರೋಗಿ ವಿಧಾನಗಳಲ್ಲಿ ಮತ್ತು ಮಧುಮೇಹ ಪಾದ ತಪಾಸಣೆಯಲ್ಲಿ 20% ರಿಯಾಯಿತಿ, ಔಷಧಾಲಯಗಳಲ್ಲಿ 12%ರವರೆಗೆ ರಿಯಾಯಿತಿ ಎಲ್ಲಾ ಹೊರ ರೋಗಿ ಸೇವೆಗಳು, ಒಳರೋಗಿ ಸೇವೆಗಳು, ಪುನರಾರಂಭ:
ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಈಗ ಈ ಹಿಂದೆ ಲಭ್ಯವಿದ್ದಂತೆ ಎಲ್ಲಾ ಹೊರ ರೋಗಿ ಸೇವೆಗಳು, ಒಳರೋಗಿ ಸೇವೆಗಳು, ಮತ್ತು ಶಸ್ತ್ರಚಿಕಿತ್ಸೆಗಳು ಪುನರಾರಂಭಗೊಂಡಿವೆ. ತುರ್ತು ಮತ್ತು ಅಪಘಾತ ಸೇವೆಗಳು ಸಹಾ ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಈ ಮೊದಲು ಕೋವಿಡ್-19 ರೋಗಿಗಳ ನಿರ್ವಹಣೆಯಲ್ಲಿ ಆಸ್ಪತ್ರೆಯು ಪ್ರಮುಖ ಪಾತ್ರ ವಹಿಸಿದ ಕಾರಣದಿಂದಾಗಿ ಇತರ ಸೇವೆಗಳಿಗೆ ಅಡಚಣೆಯಾಗಿತ್ತು. ಈಗ ಗರಿಷ್ಠ ನೈರ್ಮಲ್ಯ ಮತ್ತು ಸುರಕ್ಷತಾ ಕ್ರಮಗಳೊಂದಿಗೆ ನಮ್ಮ ಎಲ್ಲಾ ವಿಭಾಗದ ಅನುಭವಿ ವೈದ್ಯರಿಂದ ನೀವು ಉತ್ತಮ ವೈದ್ಯಕೀಯ ಆರೈಕೆಯನ್ನು ಪಡೆಯಬಹುದು. ಕೋವಿಡ್-19 ರೋಗದ ಲಕ್ಷಣಗಳು ಕಂಡುಬಂದರೆ ಮಾತ್ರ ವೈದ್ಯರ ಸಲಹೆಯ ಮೇರೆಗೆ ಸರಕಾರದ ಮಾನದಂಡದಂತೆ ಕೋವಿಡ್ ಪರೀಕ್ಷೆ ಮಾಡಲಾಗುತ್ತದೆ. ಪತ್ರಿಕಾಗೋಷ್ಟಿಯಲ್ಲಿ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಉಪ ವ್ಯವಸ್ಥಾಪಕರಾದ ಮೋಹನಶೆಟ್ಟಿ, ಮತ್ತು ಮಾರುಕಟ್ಟೆ ವಿಭಾಗದ ಪ್ರತಿನಿಧಿಯಾದ ಅನಿಲ್ ನಾಯ್ಕ ಹಾಗೂ ಈ ಭಾಗದ ಮಣಿಪಾಲ ಆರೋಗ್ಯಕಾರ್ಡಿನ ಮುಖ್ಯ ಸಂಯೋಜಕರಾದ ಕೆಂಚನಗೌಡ ಕೆ ಬಿ ಇವರೆಲ್ಲರೂ ಉಪಸ್ಥಿತರಿದ್ದರು.
ನೊಂದಣಿ ಸ್ಥಳ :-ಇಂದು ಹಾಗೂ ನಾಳೆ ಮಣಿಪಾಲ ಆರೋಗ್ಯಕಾರ್ಡಿನ ನೋಂದಾವಣಿಯು ಕೂಡ್ಲಿಗಿ ಮದಕರಿ ವೃತ್ತದ ಬಳಿಯ ಶಿವ ಜನರಲ್ ಅಂಡ್ ಬುಕ್ ಸ್ಟಾಲ್, ಹಳೆ ಬಸ್ ನಿಲ್ದಾಣ ಇಲ್ಲಿ ಓಡಾಡುವ ಜನರನ್ನು ಸಂಪರ್ಕಿಸಿ ಮಣಿಪಾಲ ಅರೋಗ್ಯ ಕಾರ್ಡ್ ನೊಂದಣಿ ಕಾರ್ಯದಲ್ಲಿ ತೊಡಗಿದ್ದರು ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಮೊಬೈಲ್ಗೆ : 9731709177 ಗೆ ಸಂಪರ್ಕಿಸುವಂತೆ ತಿಳಿಸಿದರು.
ಅರ್ಜಿಗಾಗಿ ಸಂಪರ್ಕಿಸಿ ನೋಂದಾವಣಿಗಾಗಿ ಅರ್ಜಿಗಳು ಕೆಳಕಂಡ ಅಧಿಕೃತ ಪ್ರತಿನಿಧಿಗಳ ಬಳಿ ಲಭ್ಯವಿದೆ.
ಕೂಡ್ಲಿಗಿ: ಕೆಂಚನಗೌಡ ಕೆ ಬಿ – 9731709177, ಬಸವನಗೌಡ – 9900731424, ಮಣಿಪಾಲ ಆರೋಗ್ಯ ಕಾರ್ಡಿನ ಹೆಚ್ಚಿನ ಮಾಹಿತಿಗಾಗಿ www.khmanipal.comಗೆ ಭೇಟಿ ನೀಡಿ ಎಂದು ತಿಳಿಸಿದರು