ನವೆಂಬರ್ 1ಕ್ಕೆ ಕಾಣದ ಕಣ್ಣು ಯೂಟ್ಯೂಬ್ ಚಲನಚಿತ್ರ ಬಿಡುಗಡೆ

ಸಂಜೆವಾಣಿ ವಾರ್ತೆ

ದಾವಣಗೆರೆ.ಅ.27: ದಾವಣಗೆರೆ ಜಿಲ್ಲೆಯ ಪ್ರತಿಭೆಗಳಿಂದ ನಿರ್ಮಾಣ ಮಾಡಲಾಗಿರುವ, ವಿಚಿತ್ರ ಘಟನೆಗಳನ್ನು ಬೆನ್ನುಹತ್ತುವ ನಿರೂಪಕರ ಸಾಹಸದ ಕಥೆಯೇ ಕಾಣದ ಕಣ್ಣು ಯೂಟ್ಯೂಬ್ ಚಲನಚಿತ್ರ ಎಂದು ನಿರ್ದೇಶಕ, ನಾಯಕ ನಟ ಶಿವು ಶೆಟ್ಟಿಹಳ್ಳಿ ತಿಳಿಸಿದರು.ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನವೆಂಬರ್ 1ರಂದು ಮಧ್ಯಾಹ್ನ 12ಕ್ಕೆ ಯೂಟ್ಯೂಬ್ ವಾಹಿನಿ shivusb ಯಲ್ಲಿ ಪ್ರಸಾರ ಅಗಲಿದೆ. ಕನ್ನಡದ ಹೆಚ್ಚು ಪದಗಳನ್ನೇ ಬಳಕೆ ಮಾಡಿಕೊಂಡು ಸಿನಿಮಾ ನಿರ್ಮಾಣ ಮಾಡಲಾಗಿದೆ. ಟಿವಿ ಶೋ ಕಾರ್ಯಕ್ರಮದಲ್ಲಿ ನಡೆಯುವ ಕೌತುಕ, ವಿಚಿತ್ರ ಸನ್ನಿವೇಶ ಆಧಾರದಲ್ಲಿ ಸಿನಿಮಾ ಚಿತ್ರೀಕರಣ ಮಾಡಲಾಗಿದೆ ಎಂದು ಹೇಳಿದರು.ಇತ್ತೀಚಿಗೆ ಕಾಡುಗಳಲ್ಲಿ ನಡೆಯುವ ಕಳ್ಳಸಾಗಣೆ, ಇನ್ನಿತರೆ ಕಾನೂನು ಬಾಹಿರ ಚಟುವಟಿಕೆಗಳ ಕಥೆ ಇಟ್ಟುಕೊಂಡು ಗಂಭೀರ ವಿಷಯಗಳನ್ನು ಹಾಸ್ಯಮಯವಾಗಿ ನಿರ್ಮಿಸಲಾಗಿದೆ. ಹೊದಿಗೆರೆಯ ರಾಜ ಬಂಗಲೆ, ಶೆಟ್ಟಿಹಳ್ಳಿ ಗೋಮಾಳ, ಚನ್ನಗಿರಿಯ ಶಿವಲಿಂಗೇಶ್ವರ ಪದವಿ ಕಾಲೇಜು, ಅಂಜೀನಾಪುರ ಆಂಜಿನಿಗುಡ್ಡ ಗಳಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.ಶ್ರೀ ಶಿವ ಪ್ರೊಡಕ್ಷನ್ಸ್ ಹೌಸ್ ಸಿನಿಮಾ ನಿರ್ಮಿಸಿದ್ದು, ಬೆಂಕಿಕೆರೆಯ ಮಹೇಂದ್ರ ಶಿವುಪೂಜಾರ್ ನಿರ್ಮಾಪಕರಾಗಿದ್ದು, ಪೂಜಾ ರಾಯ್ ನಾಯಕ ನಟಿಯಾಗಿದ್ದು, ಇನ್ನಿತರ ಪಾತ್ರಗಳು ಇರಲಿವೆ. ಪಿ.ರುಚಿತಾ ಪ್ರೊಡಕ್ಷನ್ ಮ್ಯಾನೇಜರ್ ಅಗಿ ಕೆಲಸ ಮಾಡಿದ್ದು, ಎಲ್ಲಾ ಭಾಗದಲ್ಲಿ ಯುವಕರೇ ಕೆಲಸ ಮಾಡಿದ್ದಾರೆ ಎಂದು ಹೇಳಿದರು.ಸುದ್ದಿಗೋಷ್ಟಿಯಲ್ಲಿ ಪೂಜಾರಾಯ್, ಪಿ.ರುಚಿರಾ, ಮಹೇಂದ್ರ ಶಿವು ಪೂಜಾರ್ ಇದ್ದರು.