ನವೆಂಬರ್ ೨೨ರಿಂದ ೨೯ ರವರೆಗೆ ’ತುಳು ಯಕ್ಷಜಾತ್ರೆ

ಮಂಗಳೂರು, ನ.೫-ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಯಕ್ಷಬೊಳ್ಳಿ ಅಭಿಮಾನಿ ಬಳಗ ಮತ್ತು ದೈಜಿವರ್ಲ್ಡ್ ಸಹಯೋಗದೊಂದಿಗೆ ’ತುಳು ಯಕ್ಷಜಾತ್ರೆ ” ನವೆಂಬರ್ ೨೨ರಿಂದ ೨೯ ರವರೆಗೆ ತುಳು ಸಾಹಿತ್ಯ ಅಕಾಡೆಮಿಯ ತುಳು ಭವನದ ಸಿರಿ ಚಾವಡಿಯಲ್ಲಿ ಪ್ರತಿ ದಿನ ಮಧ್ಯಾಹ್ನ ೨.೦೦ ಗಂಟೆಯಿಂದ ನಡೆಯಲಿದೆ ಎಂದು ಅಕಾಡೆಮಿಯ ಅಧ್ಯಕ್ಷರಾದ ದಯಾನಂದ ಜಿ.ಕತ್ತಲ್‌ಸಾರ್ ಹೇಳಿದರು.
ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ನಮ್ಮ ಕುಡ್ಲ ಚಾನೆಲ್‌ನ ನಿರೂಪಕಿ ಡಾ.ಪ್ರಿಯಾ ಹರೀಶ್, ಯಕ್ಷಗಾನ, ನಾಟಕ, ಸಿನಿಮಾ, ರಚನೆಕಾರರಾದ ಜಿ.ಕೆ ಶ್ರೀನಿವಾಸ ಸಾಲ್ಯಾನ್ ಬೊಂದೆಲ್, ಯಕ್ಷಗಾನ ಭಾಗವತರಾದ ದಯಾನಂದ ಕೋಡಿಕಲ್, ಅಕಾಡೆಮಿಯ ಸದಸ್ಯರಾದ ನಾಗೇಶ್ ಕುಲಾಲ್, ಯಕ್ಷಬೊಳ್ಳಿ ಕಡಬ ದಿನೇಶ್ ರೈ, ಚೇತಕ್ ಪೂಜಾರಿ, ಯಕ್ಷಗಾನ ,ರಂಗಭೂಮಿ ಕಲಾವಿದ, ಸಿನಿಮಾ ನಿರ್ದೇಶಕ ರಂಗೋದ ಬಿರ್ಸೆ ಪ್ರಶಾಂತ್ ಸಿ.ಕೆ ಉಪಸ್ಥಿತರಿದ್ದರು.
೦೮ ದಿನಗಳ ಕಾಲ ನಡೆಯುವ ಈ ತುಳು ಯಕ್ಷಜಾತ್ರೆಯಲ್ಲಿ ಬೇರೆ ಬೇರೆ ಯಕ್ಷ ಕಲಾ ತಂಡಗಳು ಭಾಗವಹಿಸಲಿವೆ. ನವೆಂಬರ್ ೨೨ ರಂದು ಯಕ್ಷರಂಗ ಬೆಳ್ಳಾರೆ ಅವರಿಂದ ಪ್ರಸಂಗ ’ರಾಣಿ ಶಶಿಪ್ರಭೆ’ ನ.೨೩ರಂದು ಶ್ರೀ ದುರ್ಗಾಪರಮೇಶ್ವರಿ ಯಕ್ಷಮಿತ್ರ ಬಳಗ ಪದವು, ಪ್ರಸಂಗ: ಬೂಡುದ ಭಂಡಾರ, ನ.೨೪ ರಂದು ಅಂಬುರಹ ಯಕ್ಷಕಲಾ ಕೇಂದ್ರ ಮಾಲೆಮಾರ್-ಮಂಗಳೂರು, ಪ್ರಸಂಗ: ಮಹಿಮೆದ ಬಬ್ಬುಸ್ವಾಮಿ, ನ.೨೫ ರಂದು ಯಕ್ಷ ಸಂಗಮ ಉಪ್ಪಿನಂಗಡಿ, ಪ್ರಸಂಗ: ಸುದರ್ಶನ ವಿಜಯ, ನ.೨೬ ರಂದು ಶ್ರೀ ದುರ್ಗಾಪರಮೇಶ್ವರಿ ಕೃಪಾಶ್ರಿತ ಯಕ್ಷಗಾನ ಕಲಾ ಸಂಪದ ಕೇಶವ ಶಿಶುಮಂದಿರ ಕಿನ್ಯ-ತಲಪಾಡಿ, ಪ್ರಸಂಗ: ಮಹಿಮೆದ ಬಾಲೆ ಸಿರಿಕೃಷ್ಣೆ, ನ.೨೭ ರಂದು ಶ್ರೀ ಮೂಕಾಂಬಿಕ ಯಕ್ಷಗಾನ ತರಬೇತಿ ಕೇಂದ್ರ -ಮಂಗಳಾದೇವಿ, ಪ್ರಸಂಗ: ಕುಡಿಯನ ಕೊಂಬಿರೆಲ್, ನ.೨೮ ರಂದು ಶ್ರೀದೇವಿ ಯಕ್ಷವೃಂದ ಕೋಟೆ ಸೂರಿಂಜೆ, ಪ್ರಸಂಗ: ಮಹಿಮೆದ ಅಪ್ಪೆ , ನ.೨೯ ರಂದು ಸಮಾರೋಪ ಸಮಾರಂಭ ನಡೆಯಲಿದೆ. ರಂಗೊದ ಬಿರ್ಸೆ ಪ್ರಶಾಂತ್ ಸಿ.ಕೆ ಸಂಯೋಜನೆಯಲ್ಲಿ ಅತಿಥಿ ಕಲಾವಿದರಿಂದ ಯಕ್ಷಗಾನ ಪ್ರಸಂಗ : ಜಾಂಬವತಿ ಮದ್ಮೆ.