ನವೆಂಬರ್ ಮಹಾಕ್ರಾಂತಿಯ 104ನೇ ವರ್ಷಾಚರಣೆ

ಕಲಬುರಗಿ,ನ.8-1917ರಲ್ಲಿ ವಿಶ್ವದ ಪ್ರಪ್ರಥಮ ಕಾರ್ಮಿಕ ಕ್ರಾಂತಿಯನ್ನು ನೆರವೇರಿಸಿದ ರಷ್ಯಾ ದೇಶದ ಕಾರ್ಮಿಕರಿಗೆ, ರೈತರಿಗೆ ಕೆಂಪು ನಮನಗಳನ್ನು ಸಲ್ಲಿಸಲು ಶಹಾಬಾದನ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಸ್ಟ್) ಪಕ್ಷದ ಕಛೇರಿಯಲ್ಲಿ ಸರಳ ಕಾರ್ಯಕ್ರವನ್ನು ಆಯೋಜಿಸಲಾಗಿತ್ತು.
ನವೆಂಬರ್ 7 ರಿಂದ ಪ್ರಾರಂಭವಾಗಿ 17 ರವರೆಗಿನ 10 ದಿನದ ರಷ್ಯಾ ಕಾರ್ಮಿಕರ ಕ್ರಾಂತಿಯು ಇಡೀ ವಿಶ್ವವನ್ನು ಆಕರ್ಷಿಸಿದೆ. ಯುರೋಪಿನ ರೋಗಗ್ರಸ್ಥ ರಾಷ್ಟ್ರವಾಗಿದ್ದ ರಷ್ಯಾವು ಕಾರ್ಲ್ ಮಾಕ್ರ್ಸ್ ರವರ ವಿಚಾರ ಧಾರೆಯ ಆಧಾರದ ಮೇಲೆ ಕ್ರಾಂತಿಯನ್ನು ನರೆವೇರಿಸಿ ಹೊಸ ಸಮಾಜಕ್ಕೆ ನಾಂದಿ ಹಾಡಿತ್ತು. ಈ ಮಹಾನ್ ಕ್ರಾಂತಿಯ ಶಿಲ್ಪಿಯಾದ ಕಾಮ್ರೇಡ್ ಲೆನಿನ್ ಹಾಗೂ ಕಾಮ್ರೇಡ್ ಸ್ಟಾಲಿನ್ ರವರ ಭಾವಚಿತ್ರಕ್ಕೆ ಎಸ್.ಯು. ಸಿ.ಐ (ಸಿ) ಪಕ್ಷದ ಸ್ಥಳೀಯ ಕಾರ್ಯದರ್ಶಿ ಗಣಪತ್ ರಾವ್ ಕೆ. ಮಾನೆ ರವರು ಮಾಲಾರ್ಪಣೆ ಮಾಡುವ ಮೂಲಕ ಗೌರವವನ್ನು ಸಲ್ಲಿಸಿದರು. ನಂತರ ಮಾತನಾಡುತ್ತಾ, ಕಾರ್ಲ್ ಮಾಕ್ರ್ಸ್ ರವರ ಸಮಾಜವಾದಿ ವಿಚಾರಧಾರೆಯನ್ನು ಸಂಪತ್ತ ಭರಿತ ಗೊಳಿಸಿ ಅದನ್ನು ತಮ್ಮ ದೇಶದಲ್ಲಿ ಸಮರ್ಪಕವಾಗಿ ಅಳವಡಿಸಿ ಕ್ರಾಂತಿಯನ್ನು ನೆರವೇಸಿದರು. ಅಲ್ಲದೆ ಝಾರ ಅರಸರ ಆಳ್ವಿಕೆಯನ್ನು ಕೊನೆಗೊಳಿಸಿದರು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಪಕ್ಷದ ಸ್ಥಳೀಯ ಸಮಿತಿ ಸದಸ್ಯರಾದ ರಾಘವೇಂದ್ರ ಎಂ.ಜಿ. ಮಾತನಾಡಿದರು. ಜಗನ್ನಾಥ ಎಸ್.ಎಚ್. ಗುಂಡಮ್ಮಾ ಮಡಿವಾಳ, ಸಿದ್ದು ಚೌಧರಿ, ತುಳಜಾರಾಮ ಎನ್.ಕೆ. ನೀಲಕಂಠ ಹುಲಿ, ತಿಮ್ಮಯ್ಯ ಬಿ. ಮಾನೆ, ರೇಣುಕಾ, ರಮೇಶ ಡಿ. ಕಾರ್ಯಕರ್ತರು ಭಾಗವಹಸಿದ್ದರು.