ನವೆಂಬರ್ ಗೆ ಪಾಲಿಕೆ ಚುನಾವಣೆ: ಶಿವಕುಮಾರ್

ಮೈಸೂರು: ಜೂ.02:- ಮುಂಬರುವ ನವೆಂಬರ್ ಗೆ ನಮ್ಮ ಅವಧಿ ಮುಗಿಯಲ್ಲಿದ್ದು, ಆ ವೇಳೆಗೆ ಮಹಾನಗರಪಾಲಿಕೆ ಚುನಾವಣೆ ನಡೆಯಲಿದೆ ಎಂದು ಮಹಾಪೌರ ಶಿವಕುಮಾರ್ ಹೇಳಿದರು.
ಮೈಸೂರಿನಲ್ಲಿ ಸಿಎಸ್ ಆರ್ ನಿಧಿಯಲ್ಲಿ 15 ವಿದ್ಯುತ್ ಚಾಲಿತ ಆಟೋಗಳಿಗೆ ಹಸಿರು ನಿಶಾನೆ ತೋರಿ ಬಳಿಕ ಮಾತನಾಡಿದ ಅವರು, ಬಿಜೆಪಿ ಸೋಲಿನ ಕುರಿತು ಪ್ರತಿಕ್ರಯಿಸಿದರು. ಪಾಲಿಕೆ ಚುನಾವಣೆಯಲ್ಲಿ ಇದಾವುದು ಪರಿಣಾಮ ಬೀರುವುದಿಲ್ಲ. ಮೈಸೂರಿನ ಇತಿಹಾಸದಲ್ಲಿ ಹೊಸ ಇತಿಹಾಸವನ್ನು ಬಿಜೆಪಿ ಸೃಷ್ಠಿಸಲಿದೆ. ಮುಂದಿನ ನಗರಪಾಲಿಕೆ ಅಧಿಕಾರವನ್ನು ಬಿಜೆಪಿ ಬಹುಮತದೊಂದಿಗೆ ಹಿಡಿಯಲಿದೆ ಎಂದು ಹೇಳಿದರು.
ಚಾಮರಾಜ ಕ್ಷೇತ್ರದ ಇತಿಹಾಸದಲ್ಲಿ ಒಬ್ಬ ಶಾಸಕರಾಗಿ 950 ಕೋಟಿ ರೂ. ಅಭಿವೃದ್ಧಿ ಕೆಲಸ ತಂದಿದ್ದಾರೆ. ಆದರೂ ಅಂತಿಮ ಮತದಾರರು ನೀಡಿರುವ ತೀರ್ಪಿಗೆ ತಲೆಬಾಗಬೇಕಿದೆ.
ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳಿಸಿದೆ. ಕಾಂಗ್ರೆಸ್ ಐದು ಉಚಿತ ಗ್ಯಾರಂಟಿಗಳನ್ನು ನೀಡಿದ್ದಾರೆ. ಅದನ್ನು ಎಷ್ಟರಮಟ್ಟಿಗೆ ಕೊಡಲಿಕ್ಕೆ ಸಾಧ್ಯ ಎಂಬುದು ಗೊತ್ತಿದೆ. ಮುಂದೆ ಚುನಾವಣೆಗಳಿವೆ ಆ ದೃಷ್ಟಿಯಿಂದ ನಾವು ಕೊಡುತ್ತೇವೆಂಬ ದೃಷ್ಟಿಯಿಂದ ಮಾಡುತ್ತಿದ್ದಾರೆ. ಇವತ್ತು10 ಕೆಜಿ ಅಕ್ಕಿಕೊಡುವುದಾಗಿ ಹೇಳುತ್ತಿದ್ದಾರೆ. ಇದರಲ್ಲಿ ಕೇಂದ್ರವೇ 5 ಕೆಜಿ ಕೊಡುತ್ತಿದ್ದು, ಇದಕ್ಕೆ ಇನ್ ಐದು ಕೆಜಿ ಸೇರಿಸಿಕೊಡಲಿದ್ದಾರೆ. ಉಚಿತ ಬಸ್, ಮನೆ ಯಾಜಮಾನಿಯಾಗಿ ಯಾರಿಗೆ ಹಣ ಕೊಡಬೇಕೆಂಬುದನ್ನು ತೀರ್ಮಾನಿಸಲು ಆಗಿಲ್ಲ. ಹೀಗೆ ಅವರ ಗ್ಯಾರಂಟಿ ಎಲ್ಲವೂ ಹುಸಿಯಾಗಿ ಕಾಂಗ್ರೆಸ್ ಎನೂ ಎಂಬುದು ಗೊತ್ತಾಗಲಿದೆ. ಹೀಗಾಗಿ ಮುಂದಿನ ಎಲ್ಲಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದರು.
ಮೈಸೂರು ಐಸಿಐಸಿ ಫೌಂಡೇಶನ್, ಐಸಿಐಸಿಐ ಬ್ಯಾಂಕ್ ನ ಸಂಯುಕ್ತಾಶ್ರಯದಲ್ಲಿ 15 ಆಟೋಗಳನ್ನು ಉಚಿತವಾಗಿ ಕೊಡುಗೆಯಾಗಿ ನೀಡಿದ್ದಾರೆ. ಹೀಗೆ ಸಿಎಸ್ ಆರ್ ಫಂಢ್ ನಲ್ಲಿ ನೀಡಿದ್ದಾರೆ. ಡಿಸೇಲ್ ಹೊರೆ ತಗ್ಗಿಸುವ ನಿಟ್ಟಿನಲ್ಲಿ ಇಂತಹ ವಿದ್ಯುತ್ ಚಾಲಿತ ಹಾಗೂ ಪರಿಸರ ಪೂರಕ ವಾಹನಗಳನ್ನು ಬಳಸಬೇಕೆಂಬ ಚಿಂತನೆಗೆ ಪೂರಕವಾಗಿ ಬ್ಯಾಂಕ್ ನವರು ಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಧನ್ಯವಾದಗಳನ್ನು ತಿಳಿಸುತ್ತಾ, ಇಂತಹ ಕಾರ್ಯಗಳಿಗೆ ಮತ್ತಷ್ಟು ಸಂಘ ಸಂಸ್ಥೆ ಮುಂದಾಗಲಿ ಎಂದು ಹೇಳಿದರು.
ಹಿಂದಿನ ಸರ್ಕಾರದಲ್ಲಿ ನುರಿತ ತಜ್ಞರೊಂದಿಗೆ ಚರ್ಚಿಸಿ ಇಂದು ಅನೇಕ ಕಟ್ಟಡಗಳು ದುಸ್ಥಿತಿಯಲ್ಲಿವೆ. ದೇವರಾಜ ಮಾರುಕಟ್ಟೆ, ವಾಣಿವಿಲಾಸ ಮಾರು ಕಟ್ಟೆ ಸೇರಿ ಅನೇಕ ಕಟ್ಟಡಗಳು ಭೀಳುತ್ತಿರುವುದನ್ನು ನೋಡಿದ್ದೇವೆ. ಅದರಂತೆ ನಮ್ಮ ಮನವಿಗೆ ಬೊಮ್ಮಾಯಿ ಅವರು ಬಜೆಟ್ ನಲ್ಲಿಯೂ ಘೋಷಣೆ ಮಾಡಿದ್ದರು. ಅದರಂತೆ ಈಗ ಜಿಲ್ಲೆಯವರೇ ಈಗ ಮುಖ್ಯಮಂತ್ರಿ ಆಗಿರುವುದರಿಂದ ಕಾಂಗ್ರೆಸ್ ಸದಸ್ಯರನ್ನು ಒಳಗೊಂಡ ನಿಯೋಗ ಅನುದಾನಕ್ಕೆ ಮನವಿ ಮಾಡುವ ಕೆಲಸ ಮಾಡುತ್ತೇನೆಂದರು.
ಜೂನ 5 ಕ್ಕೆ ಪಾಲಿಕೆಯ ಬಜೆಟ್ ಮಂಡಿಸುತ್ತಿದ್ದೇವೆ. ಅಭಿವೃದ್ಧಿ ದೃಷ್ಟಿಯಿಂದ ಏನೆಲ್ಲಾ ಕಾಮಗಾರಿ ಕೈಗೊಳ್ಳಲಾಗಿದೆ ಅದನ್ನು ಮುಂದುವರೆಸುವುದು. ಆಡಳಿತದ ಸುಧಾರಣೆ ಮಾಡುವ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡಿಸುತ್ತೇವೆ. ಕಳೆದ ಬಾರಿ 1029 ಕೋಟಿ ರೂ. ಬಜೆಟ್ ಮಂಡಿಸಿದ್ದು ಮತ್ತಷ್ಟು ಹೆಚ್ಚಳ ಆಗಲಿದೆ ಎಂದರು.
ಗುಂಡಿ ಮುಚ್ಚುವ ಯಂತ್ರವನ್ನು ತಂದು ಪ್ರಾಯೋಗಿಕವಾಗಿ ನೋಡಿದ ಸಂದರ್ಭದಲ್ಲಿ ತಂತ್ರಜ್ಞಾನ ಅಷ್ಟು ಸುಲಭ ಹಾಗೂ ಸುಸೂತ್ರವಾಗಿ ಇರಲಿಲ್ಲ. ಹೀಗಾಗಿ ಅದನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದರು.
ಮಳೆಗೆ ಸಂಬಂಧಿಸಿದಂತೆ ಎಲ್ಲಾ ಚರಂಡಿ, ನಾಲೆಗಳ ಸ್ವಚ್ಛಗೊಳಿಸಲು ಚಾಲನೆ ನೀಡಿದ್ದೇವೆ. ಪ್ರತಿ ವಾರ್ಡಿಗೂ ಒಂದೊಂದು ಲಕ್ಷವನ್ನು ಇದೇ ಉದ್ದೇಶದಿಂದ ಬಿಡುಗಡೆಗೊಳಿಸಿದ್ದೇವೆ. ಅವಶ್ಯಕತೆ ಬಿದ್ದರೆ ಇನ್ನೂ ಹೆಚ್ಚಿನ ಹಣ ಕೊಡುವುದಕ್ಕೂ ಪಾಲಿಕೆ ಸಿದ್ಧವಿದೆ. ಇನ್ನೂ ಬೆಂಗಳೂರು ಅಂಡರ್ ಪಾಸ್ ದುರ್ಘಟನೆ ಗಮನದಲ್ಲಿಟ್ಟುಕೊಂಡು ಮೈಸೂರಿನ ಸರಸ್ವತಿ ಪುರಂನಲ್ಲಿರುವ ಅಂಡರದ ಪಾಸ್ ನಲ್ಲಿ ಕಳೆದ ಒಂದು ವಾರದಲ್ಲಿ ಆ ಲೈನ್ ಕ್ಲಿಯರ್ ಮಾಡಿ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ಕೈಗೊಂಡಿದ್ದೇವೆ ಎಂದರು.
ಇನ್ನೂ ಒಂದು ಸಣ್ಣ ಮಳೆಯಾದರೂ ಕೂಡ 30 ರಿಂದ 40 ಮರಗಳು ಬೀಳುತ್ತಿವೆ. ಇದಕ್ಕಾಗಿ ಪ್ರತಿ ಮರಗಳ ಸುತ್ತ ಕನಿಷ್ಠ ಮೂರು ಅಡಿ ಕಾಂಕ್ರೀಟ್, ಡಾಂಬರ್ ಅಥವಾ ಇಂಟರ್ ಲಾಕ್ ಹಾಕಿರುವುದನ್ನು ತೆರವುಗೊಳಿಸಿ ಬೇರುಗಳಿಗೆ ನೀರು ಹೋಗುವ ಹಾಗೇ ಕ್ರಮ ಕೈಗೊಳ್ಳುವಂತೆ ಇಂಜಿನಿಯರ್ ಗಳಿಗೆ ಸೂಚಿಸಿದ್ದೇನೆ. ಅತಿ ಜರೂರಾಗಿ ಒಣಗಿದ ಹಾಗೂ ಅತಿ ಶಿಥಿಲಾವಸ್ಥೆ ತಲುಪಿದ ಮರಗಳ ತೆರವಿಗೆ ಎಲ್ಲಾ ವಲಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.