ನವೀನ್ ಗೌಡ ಹುಟ್ಟುಹಬ್ಬ: ಅಲೆಮಾರಿ ಜನಾಂಗಕ್ಕೆ ಕಿಟ್ ವಿತರಣೆ

ಮಾನ್ವಿ,ಜೂ.೦೫-ಬಿಜೆಪಿ ಯುವ ಮೋರ್ಚಾ ತಾಲೂಕು ಅಧ್ಯಕ್ಷ ನವೀನ್ ನಾಡಗೌಡ ಪೋತ್ನಾಳ ತಮ್ಮ ಹುಟ್ಟುಹಬ್ಬದ ಅಂಗವಾಗಿ ಅಲೆಮಾರಿ ಜನಾಂಗಕ್ಕೆ ಕಿಟ್ ವಿತರಣೆ ಮಾಡುವ ಮೂಲಕ ಅರ್ಥ ಪೂರ್ಣವಾಗಿ ಹುಟ್ಟು ಹಬ್ಬ ಆಚರಿಸಿಕೊಂಡರು.
ನಂತರ ಮಾತಾಡಿದ ನವೀನ್ ನಾಡಗೌಡ ಅವರು, ಕೋವಿಡ್ ಮಹಾಮಾರಿಯಿಂದ ಬಡವರು ಶ್ರಮಿಕರು, ಕೂಲಿ ಕಾರ್ಮಿಕರು ಅನೇಕ ರೀತಿಯ ತೊಂದರೆ ಅನುಭವಿಸಿಸುತ್ತಿದ್ದಾರೆ. ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ನಾವೆಲ್ಲರೂ ಪರಸ್ಪರ ಸಹಕಾರ ಮಾಡುತ್ತಾ ಬಡವರ ಕೈಹಿಡಿಯಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಚಂದ್ರು ಟೈಲರ್, ರಾಜು ತಾಳಿಕೋಟಿ, ಶ್ರೀಕಾಂತ್, ಮಲ್ಲಯ್ಯ ಸಾಹುಕಾರ್, ನಬಿ, ಟಿಪ್ಪು, ಪರಮೇಶ್, ಅಜ್ಮಿರ್, ಮೌನೇಶ್ ಕುರುಬ ಗೌಡ, ರಫಿ, ಇರ್ಷಾದ್, ಬಶೀರ್, ಮಹಿಬೂಬ್ ದುಮುತಿ, ಹನುಮೇಶ, ಹೀರಾ, ಖಾಸಿಂ ಅಲಿ, ಸಿದ್ದು, ಚಾಂದ್, ಲಿಂಗ ಬಸವ ಉಪಸ್ಥಿತರಿದ್ದರು.