ನವೀನ್‌ಗೆ ಮೊದಲ ಪ್ರಾಶಸ್ತ್ಯದ ಮತ ನೀಡಿ, ಮೊದಲ ಸುತ್ತಿನಲ್ಲಿ ಗೆಲ್ಲಿಸಿ


ದಾವಣಗೆರೆ,ಡಿ.04: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಎಸ್.ನವೀನ್ ಅವರಿಗೆ ಮೊದಲ ಪ್ರಾಸ್ತö್ಯದ ಮತ ನೀಡಿ, ಮೊದ ಸುತ್ತಿನಲ್ಲಿ ಆಯ್ಕೆ ಮಾಡಬೇಕೆಂದು ಮಾಜಿ ಸಿಎಂ ಯಡಿಯೂರಪ್ಪ ಮನವಿ ಮಾಡಿದರು.ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ತಾಲ್ಲೂಕಿನ ಆನಗೋಡು ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಎಸ್ ನವೀನ್ ಅವರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಅವಧಿಯಲ್ಲಿ ನಿಮ್ಮ ಗ್ರಾಮಗಳಲ್ಲಿ ಸಿಸಿ ರಸ್ತೆ, ಚರಂಡಿ ಮಾಡಿಸಿದ್ದೇವೆ. ಅಲ್ಲದೆ, ನಿಮ್ಮ ಗೌರವಧನವನ್ನು ಹೆಚ್ಚಿಸಿದ್ದೇವೆ. ಮುಂದಿನ ದಿನಗಳಲ್ಲಿ ಪ್ರತಿ ಪಂಚಾಯಿತಿಗೆ 30ರಿಂದ 40 ಲಕ್ಷ ರೂ. ಅನುದಾನ ಬರಲಿದೆ ಎಂದು ಹೇಳಿದರು.ನಮ್ಮ ಕಾಂಗ್ರೆಸ್ ಸ್ನೇಹಿತರು ಹೇಗಿದ್ದಾರೆಂಬುದು ನಿಮಗೆ ಗೊತ್ತಿದೆ. ಕಳೆದ ಚುನಾವಣೆಯಲ್ಲಿ ಹಣ ಬಲದಿಂದ ಗೆದ್ದು ಹೋದವರು ಮತ್ತು ತಿರುಗಿ ನಿಮ್ಮತ್ತ ನೋಡಲಿಲ್ಲ. ನಿಮ್ಮ ಸಮಸ್ಯೆ ಆಲಿಸಲಿಲ್ಲ. ಆದರೆ, ನಮ್ಮ ಅಭ್ಯರ್ಥಿ ಸ್ಥಳೀಯವಾಗಿ ನಿಮಗೆ ಸಿಗುತ್ತಾರೆ. ಇವರನ್ನು ಗೆಲ್ಲಿಸಿದರೆ ವಿಧಾನ ಪರಿಷತ್‌ನಲ್ಲಿ ನಿಮ್ಮ ಧ್ವನಿಯಾಗಿ ಕೆಲಸ ಮಾಡಲಿದ್ದಾರೆ. ಆದ್ದರಿಂದ ಇಲ್ಲಿರುವ ಗ್ರಾಮ ಪಂಚಾಯಿತಿ ಸದಸ್ಯರು ಕಳೆದ ಎರಡು ಚುನಾವಣೆಯಲ್ಲಿ ಸೋತಿರುವ ನವೀನ್‌ಗೆ ಮೊದಲ ಪ್ರಾಶಸ್ತö್ಯದ ಮತ ನೀಡುವುದಲ್ಲದೆ, ಬಿಜೆಪಿಗೆ ವೋಟು ಕೊಡಲ್ಲ ಎನ್ನುವವರ ಮನವೋಲಿಸಿ ನವೀನ್‌ಗೆ ಮತ ಹಾಕಿಸಬೇಕು ಎಂದರು.ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ಬಿ.ಎಸ್.ಯಡಿಯೂರಪ್ಪನವರು ನಿಮಗಿದ್ದ (ಗ್ರಾಪಂ ಸದಸ್ಯರಿಗಿದ್ದ) 250 ರೂ. ಗೌರವಧನವನ್ನು ಒಂದು ಸಾವಿರ ರೂ.ಗೆ ಹೆಚ್ಚಿಸಿದ್ದಾರೆ. ಮಹಿಳೆಯರಿಗೆ ಶೇ.50 ರಷ್ಟು ಮೀಸಲಾತಿ ನೀಡಿದ್ದಾರೆ. ನಿಮ್ಮ ಇನ್ನಿರುವ ಸಮಸ್ಯೆಗಳಿಗೆ ಬಿಜೆಪಿ ಅಭ್ಯರ್ಥಿ ಕೆ.ಎಸ್.ನವೀನ್ ವಿಧಾನ ಪರಿಷತ್‌ನಲ್ಲಿ ಧ್ವನಿ ಎತ್ತಲಿದ್ದಾರೆ. ಹೀಗಾಗಿ ಅವರಿಗೆ ಮೊದಲ ಪ್ರಾಶಸ್ತö್ಯದ ಮತ ನೀಡಬೇಕು ಎಂದು ಮನವಿ ಮಾಡಿದರು.ಚಿತ್ರದುರ್ಗದ ಮಗ, ದಾವಣಗೆರೆಯ ಮೊಮ್ಮಗನಾಗಿರುವ ನವೀನ್ ಕಳೆದ ಚುನಾವಣೆಯಲ್ಲಿ ಅತ್ಯಲ್ಪ ಮತದಿಂದ ಸೋತಿದ್ದರು. ಆಗ ಬಿಜೆಪಿ ಬಲಿಷ್ಠವಾಗಿರಲಲಿಲ್ಲ. ಆದರೆ, ಈಗ ಎರಡು ಜಿಲ್ಲೆಗಳಿಂದ 8 ಜನ ಶಾಸಕರಿದ್ದಾರೆ. ಇಬ್ಬರು ಎಂ.ಪಿ.ಗಳಿದ್ದೇವೆ. ಅಲ್ಲದೆ, ಗ್ರಾಮ ಪಂಚಾಯಿತಿಗಳಲ್ಲಿ ಬಿಜೆಪಿ ಬೆಂಬಲಿತ ಸದಸ್ಯರಿದ್ದಾರೆ. ಹೀಗಾಗಿ, ಈ ಚುನಾವಣೆಯಲ್ಲಿ ನವೀನ್ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ ಸಿದ್ದೇಶ್ವರ, ಗಾಂಧಿ ಕನಸು ಕಂಡಿದ್ದ ಗ್ರಾಮ ಸ್ವರಾಜ್ಯದ ಕನಸು ನನಸು ಮಾಡಲು ಅಟಲ್ ಬಿಹಾರಿ ವಾಜಪೇಯಿ ಗ್ರಾಪಂಗಳಿಗೆ ನೇರವಾಗಿ ಅನುದಾನ ಬರುವಂತೆ ಮಾಡಿದರು. ಪ್ರಧಾನಿ ಮೋದಿ ಅವರು ಗ್ರಾಪಂಗೆ ಬರುವ ಅನುದಾನದ ಮೊತ್ತವನ್ನು ಹೆಚ್ಚಿಸಿದ್ದಾರೆ. ಆದ್ದರಿಂದ ಗ್ರಾಪಂ ಸದಸ್ಯರು ನವೀನ್‌ಗೆ ಮತ ನೀಡಬೇಕು ಎಂದರು.ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಮಾತನಾಡಿ, ಹಿಂದೆ ಆಚಾರ್ ಎಕ್ಸ್ಪ್ರೆಸ್ ಎಂಬುವರು ಇಲ್ಲಿಂದ ಗೆದ್ದಿದ್ದರು. ಆದರೆ, ಗೆದ್ದ ಮೇಲೆ ಅವರು ಇತ್ತ ಬರಲೇ ಇಲ್ಲ. ಈಗ ಅವರಿಗಿಂತ ಸೂಪರ್ ಏಕ್ಸ್ಪ್ರೆಸ್ ಆಗಿರುವವರು ಕಾಂಗ್ರೆಸ್‌ನಿAದ ಬಂದಿದ್ದಾರೆ. ಇವರಿಗೆ ನೀವು ಮತ ನೀಡಿದರೆ ಇವರು ಸಹ ನಿಮ್ಮ ಕೈಗೆ ಸಿಗುವುದಿಲ್ಲ. ಆದ್ದರಿಂದ ನಿಮ್ಮ ಪಕ್ಕದಲ್ಲಿಯೇ ಚಿತ್ರದುರ್ಗದ ಬಂಡೆಯAತಿರುವ ನವೀನ್ ಅವರಿಗೆ ಒಂದೇ ಒಂದು ಮತ ನೀಡಿ, ನಿಮ್ಮಗಳ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ಶಾಸಕರಾದ ಎಸ್.ಎ.ರವೀಂದ್ರನಾಥ್, ಪ್ರೊ.ಎನ್.ಲಿಂಗಣ್ಣ, ಜಿಲ್ಲಾ ಬಿಜೆಪಿ ಅಧ್ಯಕ್ಷ ವೀರೇಶ್ ಹನಗವಾಡಿ, ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ಬಿಜೆಪಿ ಅಭ್ಯರ್ಥಿ ಕೆ.ಎಸ್.ನವೀನ್, ಮೇಯರ್ ಎಸ್.ಟಿ.ವೀರೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು