ನವೀಕೃತಗೊಂಡ ಶಾಖಾ ವಿರಕ್ತ ಶಿಲಾಮಠ ಲೋಕಾರ್ಪಣೆ


ಸಂಜೆವಾಣಿ ವಾರ್ತೆ
ಕುರುಗೋಡು:ಮಾ.03: ಮಠ ಮಂದಿರಗಳು ಜನರ ಮಾನಸಿಕ ನೆಮ್ಮದಿಗೆ ಸಹಕಾರಿಯಾಗಿವೆ ಎಂದು ಹುಬ್ಬಳ್ಳಿ ಮೂರುಸಾವಿರ ಮಠದ ಶ್ರೀಮನ್ ಮಹಾರಾಜ ನಿರಂಜನ ಪೂಜ್ಯಶ್ರೀ ಜಗದ್ಗುರು ಡಾ. ಗುರುಸಿದ್ಧರಾಜಯೋಗೇಂದ್ರ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನಮಠದ ನವೀಕೃತಗೊಂಡ ಶಿಲಾಮಠ ಲೋಕಾರ್ಪಣೆ, ಕಲಸಾರೋಹಣ, ಮೂರ್ತಿಗಳ ಪ್ರತಿಷ್ಠಾಪನೆ, ಪ್ರವಚನ ಮಂಗಲೋತ್ಸವ ಮತ್ತು 1111 ಮುತ್ತೈದೆಯರಿಗೆ ಉಡಿತುಂಬುವ ಸಮಾರಂಭ ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.
ಶಾಲೆ ಕಾಲೇಜುಗಳ ಹಾಗೂ ವಿದ್ಯಾಭ್ಯಾಸಕ್ಕೆ ವೀರಶೈವ ಮಠಗಳು ಸ್ಫೂರ್ತಿಯಾಗಿವೆ. ಕೊಟ್ಟೂರು ಶ್ರೀಗಳ ಮಠಕ್ಕೆ 50 ರಿಂದ 60 ಶ್ರೀಗಳು ಪಟ್ಟದಿಕಾರ ಪಡೆದು ಆದ್ಯಾತ್ಮಕ್ಕೆ ಒಳಪಡಿಸಿದ್ದಾರೆ. ಕೊಟ್ಟೂರು ಸಂಗನಬಸವ ಶ್ರೀಗಳು ನಾಡಿನ ಉದ್ದಕ್ಕೂ ಭಕ್ತರ ಒಳಿತಿಗಾಗಿ ಸಂಚಾರ ಮಾಡಿ ಅನೇಕ ಮಠಗಳನ್ನು ಅಭಿವೃದ್ಧಿ ಪಡಿಸುವಲ್ಲಿ ಕ್ರಿಯಾಶೀಲರಾಗಿ ಧಾರ್ಮಿಕ ಮಠಗಳನ್ನು ಉಳಿಸಿ ಬೆಳಸುವಲ್ಲಿ ಪ್ರಮುಖರಾಗಿದ್ದಾರೆ. ಸಮಾಜದಲ್ಲಿ ನಾಡಿನ ಉದ್ದಗಲಕ್ಕೂ ಶಿಲಾಮಠಗಳು ಎದ್ದು ನಿಲ್ಲುವಂತೆ ಮಾಡಿ ಧಾರ್ಮಿಕ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರ,
ಪ್ರತಿಯೊಬ್ಬ ಮಹಿಳೆಯರು ದೇಶದ ಶಕ್ತಿ ಇದ್ದಂತೆ, ಮಕ್ಕಳಿಗೆ ಜನ್ಮ ಕೊಟ್ಟು ದೇಶಕ್ಕೆ ಬಲಪಡಿಸುವ ಮಹತ್ವ ಕಾರ್ಯಕ್ರಮ ಮಾಡುತ್ತಿದ್ದಾರೆ, ಮಹಿಳೆಯರ ವ್ಯಕ್ತಿತ್ವ ಪರಿಗಣಿಸಲು ಸಾಧ್ಯವಿಲ್ಲ ಆದ್ದರಿಂದ ಸ್ವಾಮಿಗಳು ಅವರನ್ನು ದೇವರ ಸಮಾನಕ್ಕೆ ಕೊಂಡೋಯ್ಯುತಿದ್ದಾರೆ ದೇಶಕ್ಕೆ ಸೈನಿಕರನ್ನು, ರೈತರನ್ನು, ರಾಜಕಾರಿಣಿಗಳನ್ನು, ಅಧಿಕಾರಿಗಳನ್ನು, ಶ್ರೀಗಳನ್ನು ಪರಿಚಯಿಸಿದವರೇ ಮಹಿಳೆಯರು ಎಂದರು.
ಪಟ್ಟಣದ ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನ ಮಠದ ಗುರುಪರಂಪರೆಯ ಶಾಖಾ ವಿರಕ್ತ ಮಠದಲ್ಲಿ ಹಂಪಿ ಹೇಮಕೂಟ ಶೂನ್ಯಸಿಂಹಾಸನಾಧೀಶ್ವರ ಶ್ರೀಮನ್ ಮಹಾರಾಜ ನಿರಂಜನ ಜಗದ್ಗುರು ಡಾ.ಸಂಗನಬಸವ ಮಹಾಸ್ವಾಮಿಗಳವರ ಪಟ್ಟಾಧಿಕಾರ ಸುವರ್ಣ ಮಹೋತ್ಸವದ ಸ್ಮರಣಾರ್ಥವಾಗಿ  ಶ್ರೀ ಮನ್ ಮಹಾರಾಜ ನಿರಂಜನ ಪೂಜ್ಯ ಶ್ರೀ ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳ ಸಾನಿಧ್ಯದಲ್ಲಿ  ಇಂದು ವಿರಕ್ತ ಮಠದ ಪಾವನ ಸನ್ನಿಧಾನ ಹಾಗೂ ದಕ್ಷಿಣ ದಿಕ್ಕಿನ ಮಹಾದ್ವಾರವನ್ನು ಶ್ರೀ ಮಾನ್ ಮಹಾರಾಜ ನಿರಂಜನ ಪೂಜ್ಯಶ್ರೀ ಜಗದ್ಗುರು ಡಾ. ಗುರುಸಿದ್ದರಾಜಯೋಗಿಇಂದ್ರ ಮಹಾಸ್ವಾಮಿಗಳು ಮೂರು ಸಾವಿರ ಮಠ ಇವರು ನೆರವೇರಿಸಿದರು. ನಾವೀಕೃತ ಗದ್ದುಗೆ ಶಿಲಾಮಂಟಪ ಉದ್ಘಾಟನೆ ಮತ್ತು ಕಲಸಾರೋಹಣ ಶ್ರೀಗಳು ನೆರವೇರಿಸಿದರು. ದಕ್ಷಿಣ ದಿಕ್ಕಿನ ಮಹಾದ್ವಾರ ಪಂಚಕಳಸಾರೋಹನ ನೆರವೇರಿಸಿದರು. ಮೂರ್ತಿಗಳ ಪ್ರಾಣಪ್ರತಿಷ್ಠಾಪನೆ ಮ.ಘ.ಚ. ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ನೆರವೇರಿಸಿದರು.1111 ಮುತ್ತೈದೆಯರಿಗೆ ಶ್ರೀಗಳ ಸಮ್ಮುಖದಲ್ಲಿ ಉಡಿತುಂಬಲಾಯಿತು.
ಪಂಡಿತ ಶ್ರೀ ಕುಮಾರ ಶಾಸ್ತ್ರಿಗಳು, ಕಲ್ಲೆದೇವರು ಇವರಿಂದ ಪ್ರವಚನ, ಶ್ರೀ ಶಂಕ್ರಯ್ಯ ಗುರುಮಠ, ಕಲ್ಲೂರು ಇವರಿಂದ ಸಂಗೀತ, ಶ್ರೀ ಬಸವರಾಜ ಹೊನ್ನಿಗನೂರು, ಗದಗ ಇವರಿಂದ ತಬಲಾ ನಿರ್ವಹಿಸಿ ಹನ್ನೊಂದು ದಿನಗಳ ಕಾಲ ಪ್ರವಚನ ಕಾರ್ಯಕ್ರಮ ಇಂದು ಮಹಾ ಮಂಗಲಗೊಂಡಿತು.
ಈ ಸಂದರ್ಭದಲ್ಲಿ  ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು, ಶಿವಲಿಂಗ ಮಹಾಸ್ವಾಮಿಗಳು, ಕೊಟ್ಟೂರು ಮಹಾಸ್ವಾಮಿಗಳು, ಕುರುಗೋಡು-ಗರಗನಾಗಲಾಪುರ ಶ್ರೀ ಕೊಟ್ಟೂರುಸ್ವಾಮಿ ಶಾಖಾ ವಿರಕ್ತಮಠದ ನಿಯೋಜಿತ ಉತ್ತರಾಧಿಕಾರಿಗಳು ಶ್ರೀ ನಿರಂಜನಪ್ರಭು ದೇವರು, ಎಮ್ಮಿಗನೂರು, ಹೆಚ್. ವೀರಾಪುರ ಜ್ಞಾನಜ್ಯೋತಿ ಜಡೇಶಿವಲಿಂಗ ಮಂದಿರದ ಶ್ರೀ ಜಡೇಶ್ವರ ತಾತನವರು,  ಕೊಟ್ಟೂರುಸ್ವಾಮಿ ಶಾಖಾ ವಿರಕ್ತಮಠ, ಸೋಮಸಮುದ್ರ ಸಿದ್ಧಲಿಂಗ ದೇವರು, ಶ್ರೀ ಕೊಟ್ಟೂರುಸ್ವಾಮಿ ಶಾಖಾ ವಿರಕ್ತಮಠ, ಶ್ರೀಧರಗಡ್ಡೆ ಶ್ರೀ ಮರಿಕೊಟ್ಟೂರು ದೇವರು, ಶ್ರೀ ಕೊಟ್ಟೂರುಸ್ವಾಮಿ ಶಾಖಾ ವಿರಕ್ತಮಠ, ಬೂದಗುಂಪ ಸಿದ್ಧೇಶ್ವರ ದೇವರು, ಕಲ್ಯಾಣ ಮಹಾಸ್ವಾಮಿಗಳು, ಅಭಿನವ ಕಾಡಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಶಿವಬಸವ ದೇವರು, ಜಡೇಶ್ವರ ತತನವರು, ಷಡಕ್ಷರಿ ಅವಧೂತರು ವ್ಯಾಕರನಾಳ ವಿಶ್ವೇಶ್ವರ ದೇವರು, ಕಂಪ್ಲಿ ಕ್ಷೇತ್ರದ ಶಾಸಕ ಜೆ.ಎನ್.ಗಣೆೇಶ್,  ಮತ್ತು ಪಟ್ಟಣದ ಭಕ್ತರು ಸುತ್ತಮುತ್ತಲಿನ ಸದ್ಭಕ್ತರು ಕಾರ್ಯಕ್ರಮದಲ್ಲಿ  ಪಾಲ್ಗೊಂಡಿದ್ದರು.