ನವೀಕರಿಸಬಹುದಾದ ಇಂಧನ ಕ್ಷೇತ್ರದತ್ತ ಗಮನಹರಿಸುವ ಸಮಯ ಇದು: ಚಂದ್ರಕಾಂತ ಪಾಟೀಲ

ಕಲಬುರಗಿ,ಜು.22: ಭಾರತ ಸರಕಾರವು ಸೌರ ನೀತಿಯನ್ನು ಬಿಡುಗಡೆ ಮಾಡಿದೆ ಮತ್ತು ಕರ್ನಾಟಕ ಸರ್ಕಾರವು ನವೀಕರಿಸಬಹುದಾದ ಇಂಧನ ನೀತಿಯನ್ನು ಬಿಡುಗಡೆ ಮಾಡಿದೆ, ನವೀಕರಿಸಬಹುದಾದ ಇಂಧನ ಮೂಲಗಳ ಮೂಲಕ ವಿದ್ಯುತ್ ಉತ್ಪಾದನೆಗೆ ಮಾರ್ಗಸೂಚಿಗಳನ್ನು ನೀಡಲಾಗಿದೆ. ಇದರ ಭಾಗವಾಗಿ ಕೆಆರ್‍ಇಡಿಎಲ್ ವಿವಿಧ ಕಾಲೇಜುಗಳ ಸಹಯೋಗದಲ್ಲಿ ಸೆಮಿನಾರ್/ ಕಾನ್ಫರೆನ್ಸ್/ ಕಾರ್ಯಾಗಾರದ ರೂಪದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ನವೀಕರಿಸಬಹುದಾದ ಇಂಧನ ಕ್ಷೇತ್ರದತ್ತ ಗಮನಹರಿಸುವ ಸಮಯ ಇದು. ಈ ನೀತಿಗಳ ಆಧಾರದ ಮೇಲೆ ಅನೇಕ ಏಜೆನ್ಸಿಗಳು ಸೌರ ಮತ್ತು ಪವನ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಿವೆ ಎಂದು ಕೆಆರ್‍ಇಡಿಎಲ್ ಅಧ್ಯಕ್ಷ ಚಂದ್ರಕಾಂತ ಬಿ.ಪಾಟೀಲ ಹೇಳಿದರು.
ಶರಣಬಸವ ವಿಶ್ವವಿದ್ಯಾಲಯದ ದೊಡ್ಡಪ್ಪ ಅಪ್ಪ ಸಭಾಮಂಟಪದಲ್ಲಿ ಶುಕ್ರವಾರದಂದು ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ವಿಭಾಗ, ಗೋದುತಾಯಿ ಇಂಜಿನಿಯರಿಂಗ್ ಕಾಲೇಜ್‍ನ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಮತ್ತು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಲಿಮಿಟೆಡ್ (KREDL) ಬೆಂಗಳೂರು ಸಂಸ್ಥೆಗಳ ಸಹಯೋಗದೊಂದಿಗೆ ನಡೆದ ಒಂದು ದಿನದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಇಂದು ನಾವು ಶಕ್ತಿ ಸಂರಕ್ಷಣೆ, ಇಂಧನ ಉಳಿತಾಯ ಮತ್ತು ನವೀಕರಿಸಬಹುದಾದ ಇಂಧನ ಮೂಲಗಳ ಬಳಕೆ ಮತ್ತು ನಮ್ಮ ಪ್ರಕೃತಿಯನ್ನು ಉಳಿಸಲು ಅದು ಹೇಗೆ ಸಹಾಯಕವಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಮತ್ತು ಕೈಗಾರಿಕೀಕರಣದ ಬೆಳವಣಿಗೆಯೊಂದಿಗೆ, ವಿದ್ಯುತ್ ಅಗತ್ಯವು ಅತ್ಯಗತ್ಯವಾಗಿದೆ, ಬೇಡಿಕೆಯು ವೇಗವಾಗಿ ಹೆಚ್ಚುತ್ತಿದೆ ಮತ್ತು ಈ ಬೇಡಿಕೆಯನ್ನು ಪೂರೈಸಲು ನಾವು ಸನ್ನದ್ಧರಾಗಬೇಕು ಎಂದರು.
ನಮ್ಮ ಕರ್ನಾಟಕ ರಾಜ್ಯವು 15.5 GW ಸ್ಥಾಪಿತ ಸಾಮಥ್ರ್ಯದೊಂದಿಗೆ ನೆರೆಯ ಶ್ರೀಮಂತ ರಾಜ್ಯಗಳಲ್ಲಿ 4ನೇ ಸ್ಥಾನದಲ್ಲಿದೆ ಎಂದು ಹೇಳಲು ಹೆಮ್ಮೆಯೆನಿಸುತ್ತದೆ. ಮತ್ತು ಜಾಗತಿಕವಾಗಿ ನಮ್ಮ ಭಾರತ ದೇಶವು ನವೀಕರಿಸಬಹುದಾದ ಇಂಧನ ಸಾಮಥ್ರ್ಯದಲ್ಲಿ 4ನೇ ಸ್ಥಾನದಲ್ಲಿದೆ. ಮುಂಬರುವ ದಿನಗಳಲ್ಲಿ ಕಲಬುರಗಿಯಲ್ಲಿ 500mv ಸೋಲಾರ್ ಪಾರ್ಕ್ ಸ್ಥಾಪಿಸುವ ಯೋಜನೆ ಮಾತುಕತೆ ಹಂತದಲ್ಲಿದೆ ಎಂದು ತಿಳಿಸಿದರು. ನಮ್ಮ ರೈತರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಸೋಲಾರೈಸ್ ಮಿಲ್ ಪ್ರಾರಂಭಿಕ ಹಂತದಲ್ಲಿದೆ. ಇದರಿಂದ ನಾವು ಹೆಚ್ಚು ಹೆಚ್ಚಾಗಿ ಉದ್ಯೋಗ ಸೃಷ್ಟಿ ಮಾಡಬಹುದಾಗಿದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಶ್ರೀ ಬಸವರಾಜ ದೇಶಮುಖ ಮಾತನಾಡಿ ವಿದ್ಯಾರ್ಥಿಗಳಿಂದು ನವೀಕರಿಸಬಹುದಾದ ಇಂಧನಗಳ ಮೂಲ ಕುರಿತು ಹೆಚ್ಚು ಹೆಚ್ಚು ಸಂಶೋಧನೆ ಮಾಡಿ ಪ್ರಕೃತಿಗೆ ಮತ್ತು ದೇಶಕ್ಕೆ ಸಹಾಯವಾಗಬೇಕು. ಇಂದು ಬೇಡಿಕೆ ಹೆಚ್ಚಾಗಿದೆ ಅದರ ಜತೆಗೆ ಅವಕಾ±ಗÀಳು ಕೂಡ ಹೆಚ್ಚಾಗಿವೆ. ಈ ಜಾಗೃತಿ ಕಾರ್ಯಕ್ರಮದಲ್ಲಿ ಆಗಮಿಸಿರುವ ಸಂಪನ್ಮೂಲ ವ್ಯಕ್ತಿಗಳಿಂದ ಆದಷ್ಟು ಮಾಹಿತಿ ಪಡೆಯಿರಿ ಎಂದರು.
ಈ ಸಂಧರ್ಭದಲ್ಲಿ ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವ ಅನಿಲಕುಮಾರ ಬಿಡವೆ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ HIEE ಎಂಪವರಿಂಗ್ ಇಂಜಿನಿಯರ್ಸ್ ಪ್ರೈವೇಟ್ ಲಿಮಿಟೆಡ್, ಹೈದರಾಬಾದ್‍ನ ಶ್ರೀ ಮದನ್ ಮೋಹನ್ ಗೌಡ ಕೌಕುಂಟ್ಲ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಡೀನ್ ಡಾ.ಶಿವಕುಮಾರ್ ಜವಳಗಿ ಹಾಗೂ ಗೋಡುತಾಯಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ ಶಶಿಕಲಾ, ಭರತ, ಮಾಲಿನಿ ಶಿವಕುಮಾರ, ಉಮೇಶ ಪಾಟೀಲ, ಸುಷ್ಮಾ ಪಾಟೀಲ ವೇದಿಕೆ ಮೇಲಿದ್ದರು.
ಕಾರ್ಯಕ್ರಮವನ್ನು ಪ್ರೊ.ಶೃತಿ ಮತ್ತು ಪ್ರೊ.ಅಭಿಲಾಷಾ ನಿರೂಪಿಸಿದರು. ಪ್ರೊ.ಸಾವಿತ್ರಿ ಸ್ವಾಗತಿಸಿದರೆ, ಪ್ರೊ.ಗೀತಾ ವಂದಿಸಿದರು.