ನವಾಜ್ ಮತ್ತೆ ಪ್ರಧಾನಿ ಶಹಬಾಜ್ ವಿಶ್ವಾಸ

ಇಸ್ಲಾಮಾಬಾದ್,ಅ.೧ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಪಕ್ಷ ಅಧಿಕಾರಕ್ಕೆ ಬಂದರೆ ಅದರ ನಾಯಕ ನವಾಜ್ ಷರೀಫ್ ಮುಂದಿನ ಪ್ರಧಾನಿಯಾಗಲಿದ್ದಾರೆ ಎಂದು ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಹೇಳಿದ್ದಾರೆ.
ವೈದ್ಯಕೀಯ ಕಾರಣಗಳಿಗಾಗಿ ಲಂಡನ್‌ನಲ್ಲಿ ತಂಗಿರುವ ಷರೀಫ್ ಮುಂದಿನ ದಿನಗಳಲ್ಲಿ ಪಾಕಿಸ್ತಾನಕ್ಕೆ ಮರಳಲಿದ್ದು, ದೇಶದ ಕಾನೂನನ್ನು ಎದುರಿಸಲಿದ್ದಾರೆ ಎಂದು ಅವರ ಸಹೋದರ ಶಹಬಾಜ್ ಷರೀಫ್ ಹೇಳಿದ್ದಾರೆ.
ಈ ಮಧ್ಯೆ, ಪ್ರಸ್ತುತ ರಾಷ್ಟ್ರೀಯ ಅಸೆಂಬ್ಲಿಯ ಅವಧಿಯು ಆಗಸ್ಟ್ ೧೨ ರ ಮಧ್ಯರಾತ್ರಿ ಕೊನೆಗೊಳ್ಳಲಿದೆ ಮತ್ತು ಕೆಲವು ದಿನಗಳ ಮೊದಲು ಸಂಸತ್ತನ್ನು ವಿಸರ್ಜಿಸುವ ಅಧಿಸೂಚನೆಯನ್ನು ಸ್ಪೀಕರ್ ಆರಿಫ್ ಅಲ್ವಿ ಅವರಿಗೆ ಕಳುಹಿಸಲಾಗುವುದು. ಪಿಎಂಎಲ್-ಎನ್ ಅಧ್ಯಕ್ಷ ಶಹಬಾಜ್ ಷರೀಫ್ ಅವರು ಸಾರ್ವತ್ರಿಕ ಚುನಾವಣೆಗೆ ಮಿತ್ರಪಕ್ಷಗಳೊಂದಿಗೆ ಸೀಟುಗಳನ್ನು ಹಂಚಿಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ
ಮೂರು ಬಾರಿ ಪ್ರಧಾನಿಯಾಗಿದ್ದ ಷರೀಫ್ ಅವರನ್ನು ಸುಪ್ರೀಂ ಕೋರ್ಟ್ ೨೦೧೭ರಲ್ಲಿ ಅನರ್ಹಗೊಳಿಸಿತ್ತು.
೨೦೧೮ ರಲ್ಲಿ ಪನಾಮ ಪೇಪರ್ಸ್ ಪ್ರಕರಣದಲ್ಲಿ
ಅವರು ಜೀವಿತಾವಧಿಯಲ್ಲಿ ಸಾರ್ವಜನಿಕ ಹುದ್ದೆಯನ್ನು ಹೊಂದಲು ಅನರ್ಹರಾಗಿದ್ದಾರೆ. ಅಲ್‌ಅಜೀಝಿಯ ಮಿಲ್ಸ್ ಭ್ರಷ್ಟಾಚಾರ ಪ್ರಕರಣದಲ್ಲಿ ಷರೀಫ್ ಅವರಿಗೆ ೭ ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಆದರೆ ಲಂಡನ್‌ನಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯಲು ಲಾಹೋರ್ ಹೈಕೋರ್ಟ್ ೪ ವಾರಗಳ ಜಾಮೀನು ನೀಡಿದೆ.