ಮಾನ್ವಿ ಜು ೨೭ :- ೧೯೯೯ ಮೇ ಯಿಂದ ಜುಲೈ ವರೆಗೆ ನಡೆದ ಈ ಯುದ್ಧ ಪಾಪಿ ಪಾಕಿಸ್ತಾನಕ್ಕೆ ತಕ್ಕಪಾಠ ಕಲಿಸಿದೆ ೫೨೭ ಯೋಧರು ವೀರಮರಣ ಹೊಂದಿ ಲಡಾಕ್, ಬಾರಮುಲ್ಲ, ಜೊಜಿಲ್ಲಪಾಸ್ ನ ಇಂಚು ಇಂಚು ಉಳಿಸುವ ಸಹಾಸ ಮಾಡಿದ ಅಪ್ರತಿಮ ಯೋಧರ ಕಾರ್ಯ ದೇಶದ ಜನರ ಪ್ರಾಣ ಕಾಪಾಡಿದಷ್ಟು ಗೌರವಯುತವಾದದ್ದು. ಸೈನಿಕರಿಗೆ ಗೌರವಿಸೋಣ, ಸೈನ್ಯಕ್ಕೆ ಸೇರೋಣ ಹಾಗೂ ದೇಶದ ಒಳಗೂ ನಾವು ಕಾವಲಾಗಿರೋಣ ಇದು ನಮ್ಮ ಕರ್ತವ್ಯವಾಗಿದೆ ಎಂದು ಮಾಜಿ ಸೈನಿಕ ಆಂಜನೇಯ ನೀರಮಾನವಿ ಹೇಳಿದರು.
ಪಟ್ಟಣದ ಸರಕಾರಿ ಬಾಲಕರ ಪ್ರೌಢ ಶಾಲೆಯಲ್ಲಿ ನವಸ್ಪೂರ್ತಿ ಸಂಸ್ಥೆ ವತಿಯಿಂದ ಅಮರ ಜವಾನ್‌ಗೆ ಖಾದಿಹಾರ ಪುಷ್ಪಾರ್ಚನೆ ಮಾಡಿ ಮೇಣದ ಬತ್ತಿ ಹಚ್ಚಿ ವೀರಮರಣ ಹೊಂದಿದ ಸೈನಿಕರಿಗಾಗಿ ಮೌನಾಚರಣೆ ಮಾಡಿ ಕಾರ್ಗಿಲ್ ವಿಜಯ್ ದಿವಸ್ ಆಚರಣೆ ಮಾಡಿದರು
ನಂತರ ಮಾತನಾಡಿದ ಅವರು ಮಂಜಿನ ಗುಡ್ಡ ಬೆಟ್ಟಗಳಲ್ಲಿ ಗುಡುಗು ಸಿಡಿಲಿನ ಮಧ್ಯೆ ಪಿರಂಗಿ, ಶೇರ್, ಬಾಂಬುಗಳ ಶಬ್ದ ಮೈನಸ್ ೪೩ಡಿಗ್ರಿ ಸೆಲ್ಸಿಯಸ್ ಚಳಿಯಲಿ ಎದುರಾಳಿಯನ್ನು ಬಗ್ಗು ಬಡಿಯುವ ಗುರಿಯೋಂದಿಗೆ ಸಾಗಿದ ನಮ್ಮ ಯೋಧರ ಪಡೆ ದೇಶವನ್ನು ರಕ್ಷಣೆ ಮಾಡಿ ಕಾರ್ಗಿಲ್‌ನಲ್ಲಿ ವಿಜಯವನ್ನು ಪಡೆದು ಇಂದಿಗೆ ೨೪ ವರ್ಷ ಗತಿಸಿದೆ ಹಾಗೂ ದೇಶ ರಕ್ಷಣೆಗಾಗಿ ತಮ್ಮ ಜೀವವನ್ನು ಭಾರತ ಮಾತೆಗೆ ಅರ್ಪಣೆ ಮಾಡಿದ ವೀರ ಯೋಧರನ್ನು ನಾವೇಲ್ಲರು ಸ್ಮಾರಿಸುವ ಅಗತ್ಯವಿದೆ ಅದರ ನೆನಪಿಗಾಗಿ ದೇಶವಾಸಿಗಳೆಲ್ಲ ಪ್ರತಿವರ್ಷ ಕಾರ್ಗಿಲ್ ವಿಜಯ್ ದಿವಸ್ ವನ್ನು ಆಚರಿಸುತ್ತಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಯುದ್ದದಲ್ಲಿ ಮರಣ ಹೊಂದಿದ ಯೋಧ ದಿ.ಅಮರೇಶ ಪತ್ನಿ ಪದ್ಮವತಿ, ಮಾಜಿ ಸೈನಿಕ ಬಸವರಾಜ್ ಮುಷ್ಟೂರು ಹಾಗೂ ಭಾರತ ಸೈನ್ಯದಲ್ಲಿ ಸೇವೆ ಸಲ್ಲಿಸಿದ ಮಾಜಿ ಸೈನಿಕರನ್ನು ಸನ್ಮಾನಿಸಿಗೌರವಿಸಲಾಯಿತು
ಮಹೆಬೂಬ್ ಮದ್ಲಾಪೂರು, ಡಾ. ಅಂಬಿಕ ಮದುಸುಧನ್, ಸಂತೋಷ ತೋಟದ್, ಮಹೆಬೂಬ್ ಪಾಷ, ಸಂಸ್ಥೆಯ ಅಧ್ಯಕ್ಷ ಸುನಿಲ್ ವಿ. ರೇಣುಕಾ , ರಾಮ ಬಂಡಿ, ಲಕ್ಷ?ಮಣ್, ಉದಯ್, ಮಹ್ಮದ್ ಬೇಗ್, ವೆಂಕಟೇಶ, ಅಬ್ದುಲ್ ರೋಷನ್ ಸೇರಿದಂತೆ ಇನ್ನಿತರರು ಇದ್ದರು.