ನವಲ್ನಿ ಶ್ರದ್ದಾಂಜಲಿ ಹಲವರಿಗೆ ಜೈಲು

ಮಾಸ್ಕೋ, ಫೆ.೧೯- ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಕಟುಟೀಕಾಕಾರರಾಗಿದ್ದ ಅಲೆಕ್ಸಿ ನವಲ್ನಿ ನಿಗೂಢ ಸಾವಿನ ಬಳಿಕ ಸಂತಾಪ ಸೂಚಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ೧೫೦ಕ್ಕೂ ಹೆಚ್ಚಿನ ನಾಗರಿಕರಿಗೆ ಅಲ್ಲಿನ ನ್ಯಾಯಾಲಯ ಅಲ್ಪಾವಧಿಯ ಜೈಲುಶಿಕ್ಷೆ ವಿಧಿಸಿದೆ. ಇದಕ್ಕೆ ಸಂಬಂಧಿಸಿದಂತೆ ಅಧಿಕೃತ ನ್ಯಾಯಾಲಯದ ಪ್ರಕಟಣೆಗಳು ತೋರಿಸಿವೆ.
ಸೇಂಟ್ ಪೀಟರ್ಸ್‌ಬರ್ಗ್ ನಗರವೊಂದರಲ್ಲೇ ಶನಿವಾರ ಮತ್ತು ಭಾನುವಾರದಂದು ರಷ್ಯಾದ ಕಟ್ಟುನಿಟ್ಟಾದ ಪ್ರತಿಭಟನೆ-ವಿರೋಧಿ ಕಾನೂನುಗಳನ್ನು ಉಲ್ಲಂಘಿಸಿದ್ದಕ್ಕಾಗಿ ೧೫೪ ಜನರಿಗೆ ೧೪ ದಿನಗಳವರೆಗೆ ಜೈಲು ಸಮಯವನ್ನು ನೀಡಲಾಗಿದೆ ಎಂದು ನಗರದ ನ್ಯಾಯಾಲಯ ಸೇವೆ ಪ್ರಕಟಿಸಿದ ತೀರ್ಪುಗಳ ವಿವರಗಳಲ್ಲಿ ತೋರಿಸಿದೆ. ಪುಟಿನ್ ಅವರ ಕಟುಟೀಕಾಕಾರರಾಗಿದ್ದ ನವಲ್ನಿಗೆ ಹಲವು ದಶಕಗಳ ವರೆಗೆ ಜೈಲುಶಿಕ್ಷೆ ನೀಡಲಾಗಿತ್ತು. ಅವರು ಜೈಲುಕಾರಿಡಾರ್‌ಗಳಲ್ಲಿ ನಡೆದಾಡುತ್ತಿದ್ದ ವೇಳೆ ಕುಸಿದು ಮೃತಪಟ್ಟಿದ್ದರು ಎಂದು ಜೈಲು ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದರು. ಇನ್ನು ನವಲ್ನಿ ಸಾವಿನ ಹಿನ್ನೆಲೆಯಲ್ಲಿ ಹಲವೆಡೆ ಸಂತಾಪ ಸೂಚಕ ಸಭೆಗಳು ನಡೆದಿದ್ದವು.