ನವಲಗುಂದ ಸಂಪೂರ್ಣ ಲಾಕ್‍ಡೌನ್

ನವಲಗುಂದ, ಮೇ21: ಕೋವಿಡ್ ಸೋಂಕು ಹರಡದಂತೆ ಮುನ್ನೆಚ್ಚರಿಕೆಯಾಗಿ ಎಲ್ಲ ವ್ಯಾಪಾರಸ್ಥರು ಸ್ವಯಂಪ್ರೇರಿತರಾಗಿ ಒಂದು ವಾರ ಅಂಗಡಿಗಳನ್ನು ಬಂದ್ ಮಾಡಿದ್ದರಿಂದ ಸದಾ ಜನಜಂಗುಳಿಯಿಂದ ಕೂಡಿರುತ್ತಿದ್ದ ಗಾಂಧಿ ಮಾರುಕಟ್ಟೆ ಗುರುವಾರ ಜನರಿಲ್ಲದೇ ಬೀಕೊ ಎನ್ನುವಂತಾಗಿತ್ತು.
ಕೃಷಿ ಚಟುವಟಿಕೆ ಹೋಗುವವರು, ಔಷಧಿ ಅಂಗಡಿಗಳಿಗೆ, ಆಸ್ಪತ್ರೆಗೆ ಹೋಗುವವರನ್ನು ಮಾತ್ರ ಗುರುತುಪಡಿಸಿಕೊಂಡು ಪೆÇಲೀಸರು ತಪಾಸಣೆ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಪ್ರತಿದಿನ ಬೆಳಿಗ್ಗೆ ಅಗತ್ಯವಸ್ತುಗಳ ಖರೀದಿಗೆಂದು ಜನ ಹೊರ ಬರುತ್ತಿದ್ದರು, ಆದರೆ ಗುರುವಾರ ಸಂಪೂರ್ಣ ಲಾಕ್‍ಡೌನ್ ಹಿನ್ನಲೆಯಲ್ಲಿ ಜನರು ಹೊರಬರಲಿಲ್ಲ. ರೈತರು ಕೃಷಿ ಚಟುವಟಿಕೆಗಳಿಗೆ ಕೂಲಿಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿದ್ದರು. ಅನಗತ್ಯವಾಗಿ ತಿರುಗಾಡುತ್ತಿದ್ದ ಸುಮಾರು 20 ಕ್ಕೂ ಹೆಚ್ಚು ಬೈಕ್‍ಗಳನ್ನು ಪೆÇಲೀಸರು ವಶಕ್ಕೆ ಪಡೆದುಕೊಂಡರು. ಬಸ್ ನಿಲ್ದಾಣ, ಲಿಂಗರಾಜ ಸರ್ಕಲ್, ಗಾಂಧಿ ಮಾರುಕಟ್ಟೆಯಲ್ಲಿ ಜನರಿಲ್ಲದೇ ಸಂಪೂರ್ಣವಾಗಿ ಸ್ಥಬ್ದವಾಗಿದ್ದು ಕಂಡುಬಂತು.
800 ಜನರಿಗೆ ಕೋವಿಡ್ ದೃಢಪಟ್ಟಿದೆ :
ಮೇ.20 ರ ವರೆಗೆ ನವಲಗುಂದ ಹಾಗೂ ಅಣ್ಣಿಗೇರಿ ತಾಲ್ಲೂಕಿನಲ್ಲಿ ಒಟ್ಟು 800 ಜನರಿಗೆ ಕೋವಿಡ್ ದೃಡಪಟ್ಟಿದ್ದು ಅದರಲ್ಲಿ 488 ಜನರು ಗುಣಮುಖರಾದರೆ, 284 ಜನರು ಮನೆಯಲ್ಲಿ ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರೆ, 28 ಜನರು ಸಾವನ್ನಪ್ಪಿದ್ದಾರೆ. ನವಲಗುಂದ ಪಟ್ಟಣದಲ್ಲಿ ಅತೀ ಹೆಚ್ಚು 180, ಅಣ್ಣಿಗೇರಿ ಪಟ್ಟಣದಲ್ಲಿ 130 ಜನರಿಗೆ ಸೋಂಕು ದೃಡಪಟ್ಟಿದೆ ಎಂದು ತಾಲ್ಲೂಕಾ ಹಿರಿಯ ಆರೋಗ್ಯ ಸಹಾಯಕ ಸುಭಾಸ ಮಂಗಳಿ ತಿಳಿಸಿದ್ದಾರೆ.