ನವಲಗುಂದದ ಅಮರಗೋಳದಲ್ಲಿ ಮರು ಮತದಾನಕ್ಕೆ ಆಗ್ರಹ


ನವಲಗುಂದ,ಡಿ.28- ತಾಲ್ಲೂಕಿನ 14 ಗ್ರಾಮ ಪಂಚಾಯ್ತಿಗೆ ನಡೆದ ಚುನಾವಣೆಯಲ್ಲಿ ಸಂಜೆ 7 ಗಂಟೆಯವರೆಗೆ ಶೇ.80 ರಷ್ಟು ಮತದಾನವಾಗಿದ್ದು ಇನ್ನು 30 ಬೂತ್‍ಗಳ ವರದಿ ಬರಬೇಕಾಗಿದೆ ಎಂದು ಚುನಾವಣಾಧಿಕಾರಿ ಜಿ.ಬಿ.ಜಕ್ಕನಗೌಡರ ಹೇಳಿದರು.
ಬೆಳಿಗ್ಗೆಯಿಂದ ಮತದಾನ ಮಂದಗತಿಯಲ್ಲಿ ಸಾಗಿತ್ತು, 11 ಗಂಟೆಯವರೆಗೆ ಶೇ.27 ರಷ್ಟು ಮತದಾನವಾಗಿತ್ತು, ನಂತರ ಹಂತ ಹಂತವಾಗಿ ಚುರುಕು ತೆಗೆದುಕೊಂಡು ಸಂಜೆ 7 ರ ಹೊತ್ತಿಗೆ ಶೇ.80 ರಷ್ಟು ಮತದಾನವಾಗಿದೆ.
ಬೆಳವಟಗಿ ಗ್ರಾಮದಲ್ಲಿ ಸರದಿ ಸಾಲಿನಲ್ಲಿ ನಿಲ್ಲುವ ಕುರಿತು ಹಾಗೂ ಮೊರಬ ಗ್ರಾಮದ ವಾರ್ಡವೊಂದರಲ್ಲಿ ಮತದಾರರ ಪಟ್ಟಿಯಲಿ ಲೋಪದೋಶ ಕಂಡು ಬಂದ ಕಾರಣ ಕೆಲಕಾಲ ಮತದಾನ ಸ್ಥಗಿತಗೊಂಡಿತ್ತು, ನಂತರ ಚುನಾವಣಾಧಿಕಾರಿಗಳು ಹಾಗೂ ಪೆÇಲೀಸರು ಮಧ್ಯ ಪ್ರವೇಶಿಸಿ ಮತದಾರರನ್ನು ಸಮಾಧಾನ ಪಡಿಸಿದ ನಂತರ ಮತದಾನ ಪ್ರಾರಂಭಗೊಂಡಿತು.
ಮರು ಮತದಾನಕ್ಕೆ ಆಗ್ರಹ:
ನವಲಗುಂದ ತಾಲ್ಲೂಕಿನ ಅಮರಗೋಳ ಗ್ರಾಮದಲ್ಲಿ ವಾರ್ಡ ವಿಂಗಡನೆಯಲ್ಲಿ ತಾರತಮ್ಯವಾಗಿದ್ದು ಮತದಾರರ ಪಟ್ಟಿಯಲ್ಲಿ ಲೋಪದೋಶ ಕಂಡುಬಂದಿರುವುದರಿಂದ ಮರು ಮತದಾನ ಮಾಡುವಂತೆ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಹಾಗೂ ಗ್ರಾಮಸ್ಥರು ಒತ್ತಾಯ ಮಾಡಿ ಯಾರು ಮತ ಹಾಕಲು ಮುಂದೆ ಬರಲಿಲ್ಲ. ಸಂಜೆ 5 ಗಂಟೆಯವರೆಗೆ ಮತದಾನ ನಡೆಯದ ಕಾರಣ ಚುನಾವಣಾಧಿಕಾರಿ ಜಿ.ಬಿ.ಜಕ್ಕನಗೌಡರ ನೋಟಿಪೀಕೆಶನ್ ಪ್ರಕಾರ ಚುನಾವಣೆ ನಡೆಸಲಾಗುತ್ತಿತ್ತು, ಆದರೆ ಗ್ರಾಮಸ್ಥರು ಯಾರು ಮತದಾನ ಮಾಡಲು ಬರದೇ ಇರುವ ಕಾರಣ ಸಮಸ್ಯೆ ಕುರಿತು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದ್ದು ಜಿಲ್ಲಾಧಿಕಾರಿಗಳು ಸೂಚಿಸಿದಂತೆಯೇ ಮುಂದಿನ ನಿರ್ಣಯ ಕೈಗೊಳ್ಳಲಾಗುವುದೆಂದು ತಿಳಿಸಿದರು.
ಶಾಸಕ ಶಂಕರ ಪಾಟೀಲ ಅವರ ಸ್ವಗ್ರಾಮವಾದ ಅಮರಗೋಳದಲ್ಲಿ ಈ ಘಟನೆ ನಡೆದಿದ್ದರಿಂದ ಶಾಸಕರು ಗ್ರಾಮಕ್ಕೆ ಭೇಟಿ ನೀಡಿ ವಸ್ತುಸ್ಥಿತಿ ಅರಿತುಕೊಂಡು ಚುನಾವಣಾಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ಮತದಾನವನ್ನು ಮುಂದೂಡಲಾಗಿದೆ. ಜಿಲ್ಲಾಧಿಕಾರಿಗಳ ನಿರ್ಣಯವೇ ಅಂತಿಮವಾಗಲಿದೆ.