ನವಲಗುಂದದಲ್ಲಿ ಕೈ-ಕಮಲ ಮೈತ್ರಿ – ಜೆಡಿಎಸ್ ಗೆ ಸೋಲು

ನವಲಗುಂದ ನ 5 : ನವಲಗುಂದ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಬದ್ಧ ವೈರಿಯಾದ ಬಿಜೆಪಿ ಬೆಂಬಲ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದು ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ.
ಕುತೂಹಲ ಕೆರಳಿಸಿದ್ದ ನವಲಗುಂದ ಪುರಸಭೆ ಚುನಾವಣೆಯು ಅಚ್ಚರಿಯ ಫಲಿತಾಂಶಕ್ಕೆ ಸಾಕ್ಷಿಯಾಗಿದೆ. ಜೆಡಿ ಎಸ್ ಅಧಿಕಾರದಿಂದ ಹೊರಗಿಡುವ ಉದ್ದೇಶದಿಂದ ಪುರಸಭೆಯ ಬಿಜೆಪಿ-ಕಾಂಗ್ರೇಸ್ ಸದಸ್ಯರು ಕೈ ಜೋಡಿಸಿರುವುದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಪುರಸಭೆಯಲ್ಲಿ ಒಟ್ಟು 23 ಸದಸ್ಯರು ಇದ್ದಾರೆ. ಈ ಪೈಕಿ 7 ಕಾಂಗ್ರೆಸ್, 6 ಬಿಜೆಪಿ, 9 ಜೆಡಿಎಸ್ ಮತ್ತು ಒಬ್ಬ ಪಕ್ಷೇತರ ಸದಸ್ಯರಿದ್ದಾರೆ.
ಈ ಬಹುಮತ ಸಾಧಿಸಲು 13 ಸದಸ್ಯರ ಬೆಂಬಲ ಅಗತ್ಯವಿತ್ತು. ಜಾತ್ಯತೀತ ಎಂದು ಹೇಳಿಕೊಳ್ಳುವ ಪಕ್ಷಗಳು ಒಂದಾಗುತ್ತವೆ ಎಂದು ಭಾವಿಸಲಾಗಿತ್ತು. ಜೆಡಿಎಸ್ ಅತಿದೊಡ್ಡ ಪಕ್ಷ ವಾಗಿದ್ದು ಒಬ್ಬ ಪಕ್ಷೇತರ ಒಲವನ್ನೂ ಸಂಪಾದಿಸಿಕೊಂಡಿದೆ. ಕಾಂಗ್ರೆಸ್ ಜೊತೆ ಅಧಿಕಾರ ಹಂಚಿಕೆ ಸೇರಿದಂತೆ ಸಂದರ್ಭೋಚಿತ ಹೊಂದಾಣಿಕೆಗೆ ಜೆಡಿ ಎಸ್ ಸಿದ್ದವಿತ್ತು. ಮಾಜಿ ಶಾಸಕ. ಎ.ಎಚ್. ಕೋನರಡ್ಡಿ ಬಹಿರಂಗವಾಗಿಯೇ ಇದನ್ನು ಹೇಳಿಕೊಂಡಿದ್ದರು. ಆದರೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ದಿನವಾದ ಬುಧವಾರ ಅಚ್ಚರಿ ಬೆಳವಣಿಗೆ ನಡೆಯಿತು.
ಬಿಜೆಪಿ 6 ಸದಸ್ಯರ ಬೆಂಬಲದಿಂದ ಕಾಂಗ್ರೆಸ್ ಪುರಸಭೆಯ ಅಧಿಕಾರದ ಗದ್ದುಗ ಏರಿದೆ. ಕಾಂಗ್ರೆಸ್ ನ ಮಂಜುನಾಥ ಜಾಧವ್ ಅಧ್ಯಕ್ಷರಾಗಿ ಮತ್ತು ಉಪಾಧ್ಯಕ್ಷರಾಗಿ ಖೈರುನ್ನಬಿ ನಾಶಪುಡಿ ಚುನಾಯಿರಾಗಿದ್ದಾರೆ. ಕಾಂಗ್ರೆಸ್-ಬಿಜೆಪಿ ಮೈತ್ರಿ ಮಾತು ಕೆಲ ದಿನಗಳಿಂದ ಕೇಳಿ ಬಂದಿತ್ತು. ಆದರೆ ಪಕ್ಷದ ರಾಜ್ಯ ಮುಖಂಡರ ಸೂಚನೆಯಂತೆ ನಡೆದುಕೊಳ್ಳಬೇಕು. ಬಿಜೆಪಿಯೊಂದಿಗೆ ಯಾವುದೇ ಕಾರಣಕ್ಕೂ ಕೈಜೋಡಿಸಬಾರದು ಎಂದು ಪುರಸಭೆ ಸದಸ್ಯರು ಹಾಗೂ ನವಲಗುಂದದ ಪ್ರಮುಖರಿಗೆ ಜಿಲ್ಲಾ ಕಾಂಗ್ರೆಸ್ ಮುಖಂಡರು ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಅಧ್ಯಕ್ಷ – ಉಪಾಧ್ಯಕ್ಷರ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಸದಸ್ಯರಿಗೆ ವಿಪ್ ಸಹ ನೀಡಲಾಗಿತ್ತು. ಅದರೆ ಬಯಸದೇ ಬಂದ ಭಾಗ್ಯದಂತೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಸಮಯದಲ್ಲಿ ಬಿಜೆಪಿಯ 6 ಸದಸ್ಯರು ಕೈ ಎತ್ತುವ ಮೂಲಕ ಕಾಂಗ್ರೆಸ್ ಗೆ ಬೆಂಬಲ ವ್ಯಕ್ತಪಡಿಸಿದರು.
ಪುರಸಭೆ ಕಾಂಗ್ರೆಸ್ ಸದಸ್ಯರು ಜೆಡಿ ಎಸ್ ನೊಂದಿಗೆ ಹೊಂದಾಣಿಕೆಗೆ ಹಿಂದೇಟು ಹಾಕಿದ್ದರಿಂದ ಕಾಂಗ್ರೆಸ್ ಗೆ ಪ್ರತಿಪಕ್ಷ ಸ್ಥಾನ ಖಚಿತ ಎಂದೇ ವಿಶ್ಲೇಷಿಸಲಾಗಿತ್ತು.
ಆದ್ರೆ ಕಾಂಗ್ರೆಸ್ – ಬಿಜೆಪಿ ಗುಪ್ತ ತಂತ್ರಗಾರಿಕೆಗಳು ತಲೆಕೆಳಗಾದವು.

ನವಲಗುಂದ ಪುರಸಭೆ ಚುನಾವಣೆಯಲ್ಲಿ ನಾವು ಬಿಜೆಪಿ ಬೆಂಬಲ ಕೇಳಿಲ್ಲ. ಆ ಪಕ್ಷದ ಸದಸ್ಯರು ಯಾವ ಕಾರಣಕ್ಕೆ ಬೆಂಬಲ ಸೂಚಿಸಿದರೆಂದು ಗೊತ್ತಿಲ್ಲ. ಆದರೆ ಸಂಪೂರ್ಣ ಅವಧಿಯವರೆಗೆ ಪುರಸಭೆಯಲ್ಲಿ ಕಾಂಗ್ರೆಸ್ ಅಧಿಕಾರ ನಡೆಸಲಿದೆ.
ಅಲ್ಲದೇ ಚುನಾವಣೆಗೆ ಸಂಬಂಧಿಸಿದ ಮಾತನಾಡಿದ ಅವರು ಪುರಸಭೆಯಲ್ಲಿ ನಡೆದ ರಾಜಕೀಯ ಜಿಲ್ಲಾ ಮಟ್ಟದ ಕಾಂಗ್ರೆಸ್ ಮುಖಂಡರಲ್ಲಿ ಅಸಮಾಧಾನ ಮೂಡಿಸಿದೆ. ಮೈತ್ರಿಗೆ ಕಾರಣರಾದವರನ್ನು ಕಂಡುಹಿಡಿದು ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಕೆಪಿಸಿಸಿ ಗೆ ಪತ್ರ ಬರೆಯುವುದಾಗಿ ಎಚ್ಚರಿಕೆ ನೀಡಲಾಗಿದೆ.
ಧಾರವಾಡ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅನಿಲಕುಮಾರ್ ಪಾಟೀಲ್.