ನವಲಕಲ್ ಶ್ರೀ ಶಾಂಭವಿದೇವಿಯ ದರ್ಶನ ಪಡೆದ ಬಿ.ವಿ.ನಾಯಕ

ಸಿರವಾರ,ಏ.೨೧- ಕೇಂದ್ರ- ರಾಜ್ಯ ಸರ್ಕಾರದ ಅಭಿವೃದ್ದಿ ಕಾರ್ಯಗಳೆ ನನಗೆ ಶ್ರೀರಕ್ಷೆಯಾಗಿದೆ, ಆಕಸ್ಮಿಕವಾಗಿ ಅಭ್ಯರ್ಥಿಯಾಗಿರುವೆ. ಕ್ಷೇತ್ರದಲ್ಲಿ ಬಿಜೆಪಿ ಬಲಿಷ್ಟವಾಗಿದೆ ಎಲ್ಲಾರೂ ಸೇರಿ ಕಾರ್ಯನಿರ್ವಹಿಸಿ ಮೊದಲ ಬಾರಿಗೆ ಕ್ಷೇತ್ರದಲ್ಲಿ ಬಿಜೆಪಿ ಭಾವುಟ ಹಾರಿಸೊಣ ಎಂದು ಬಿಜೆಪಿ ನಿಯೋಜಿತ ಅಭ್ಯರ್ಥಿ ಬಿ.ವಿ.ನಾಯಕ ಹೇಳಿದರು.
ತಾಲೂಕಿನ ನವಲಕಲ್ ಬೃಹನ್ಮಠದ ಶ್ರೀ ಶಾಂಭವಿ ದೇವಿಯ ದರ್ಶನ ಪಡೆದು, ಅಭಿನವ ಶ್ರೀ ಸೋಮನಾಥ ಶಿವಾಚಾರ್ಯರಿಗೆ ಸನ್ಮಾನಿಸಿ ಆಶೀರ್ವಾದ ಪಡೆದರು. ನಂತರ ಕಾರ್ಯಕರ್ತರನ್ನು ಉದೇಶಿಸಿ ಮಾತನಾಡಿ ಬಿಜೆಪಿ ಪಕ್ಷ ನನಗೆ ಟಿಕೆಟ್ ನೀಡಿದೆ, ಎಲ್ಲಾರ ಆಶಿರ್ವಾದ ಕೇಳುತ್ತಿರುವೆ, ಬೆಂಬಲಿಸಿ ಆಶೀರ್ವಾದ ಮಾಡಿ, ಕಾಂಗ್ರೆಸ್‌ನಲ್ಲಿ ಬಣ ರಾಜಕೀಯದಿಂದ ಬೆಸತು ಆ ಪಕ್ಷದಿಂದ ಹೊರ ಬಂದಿರುವೆ.
ನಾನು ಕಾಂಗ್ರೆಸ್ ಅಭ್ಯರ್ಥಿಯಲ್ಲ, ಬಿಜೆಪಿ ಅಭ್ಯರ್ಥಿಯಾಗಿರುವೆ, ಕೇಂದ್ರ- ರಾಜ್ಯ ಸರ್ಕಾರದ ಸಾಧನೆಗಳೆ ನಮಗೆ ಶ್ರೀರಕ್ಷೆಯಾಗಿದೆ ಎಲ್ಲಾರೂ ಆಶೀರ್ವಾದ ಮಾಡಿ ಎಂದರು. ಮಾಜಿ ಶಾಸಕ ಗಂಗಾಧರ ನಾಯಕ ಮಾತನಾಡಿದರು.
ಈ ಸಂದರ್ಭದಲ್ಲಿ ಜೆ.ಶರಣಪ್ಪಗೌಡ, ಅಮರೇಶಪ್ಪ ವೈ,ಜೆ.ದೇವರಾಜಗೌಡ, ಉದಯಕುಮಾರ್ ಚಾಗಭಾವಿ, ಶಿವಶರಣ ಗೌಡ ಲಕ್ಕಂದಿನ್ನಿ, ತಾ.ಪಂ ಮಾಜಿ ಅದ್ಯಕ್ಷ ದೇವರಾಜ ನಾಯಕ, ಶೇಷಗಿರಿ ರೆಡ್ಡಿ ಕವಿತಾಳ, ತಾ.ಪಂ ಮಾಜಿ ಅದ್ಯಕ್ಷ ಸಿದ್ದಲಿಂಗಪ್ಪ ಸಾಹುಕಾರ, ರಾಜಗೋಪಾಲ, ದೇವಣ್ಣ ನವಲಕಲ್, ಸುರೇಶ ನವಲಕಲ್ ಸೇರಿದಂತೆ ಇನ್ನಿತರು ಇದ್ದರು.