
ಸಿರವಾರ,ಏ.೦೯- ೨೦೨೩ ರ ವಿಧಾನಸಭೆ ಚುನಾವಣೆಯಲ್ಲಿಯೂ ಸಹ ಮತದಾರ ಪ್ರಭುವಿನ ಆಶೀರ್ವಾದ ನನಗೆ ಇದೇ, ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳೆ ನನಗೆ ಶ್ರೀರಕ್ಷೆ, ಕಾರ್ಯಕರ್ತರೆ ಪಕ್ಷದ ಜೀವಾಳವಾಗಿದ್ದಾರೆ ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು.
ತಾಲೂಕಿನ ನವಲಕಲ್ ಶ್ರೀ ಶಾಂಭವಿ ದೇವಿ, ನಂತರ ವಡವಟಿ ರಂಗನಾಥ ಸ್ವಾಮಿ, ಕುರಕುಂದಾ ಯಲ್ಲಮ್ಮದೇವಿ, ಸೇರಿದಂತೆ ಇನ್ನಿತರ ದೇವಸ್ಥಾನದಲ್ಲಿ ಪಂಚರತ್ನ ಯೊಜನೆ ಕರಪತ್ರವನ್ನು ಪೂಜೆ ಸಲ್ಲಿಸಿ ನಂತರ ಕಾರ್ಯಕರ್ತರು ಉದೇಶ ಮಾತನಾಡಿದ ಅವರು ಮಾತನಾಡಿದ ಶಾಸಕರು ಕಳೆದ ಐದು ವರ್ಷಗಳಲ್ಲಿ ಸಿರವಾರ ಪಟ್ಟಣದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಡಿವೈಡರ್, ಹೈ ಮಾಸ್ಟ್ ಲೈಟ್, ಬಸ್ ನಿಲ್ದಾಣ ಕಾಮಗಾರಿ, ವಿವಿಧ ವಾರ್ಡ್‌ಗಳಲ್ಲಿ ಸಿಸಿ ರಸ್ತೆ ನಿರ್ಮಾಣ, ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ನನ್ನ ಅಧಿಕಾರ ಅವಧಿಯಲ್ಲಿ ಮಾಡಿದ್ದೇನೆ.
ಕ್ರೀಡಾಂಗಣ, ಮಿನಿ ವಿಧಾನಸೌಧ ನಿರ್ಮಾಣಕ್ಕೆ ಬದ್ದನಾಗಿದ್ದೇ ನಿವೇಶ ನೀರಾವರಿ ಇಲಾಖೆಯಿಂದ ವರ್ಗಾವಣೆ ಆಗಬೇಕಿದ್ದರಿಂದ ವಿಳಂಭವಾಗಿದೆ. ಮುಂಬರುವ ದಿನಗಳಲ್ಲಿ ಮತ್ತೆ ಶಾಸಕನಾದರೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಮಿನಿವಿಧಾನಸೌಧ, ಕ್ರೀಡಾಂಗಣ ನಿರ್ಮಾಣ, ಎಲ್ಲಾ ಧಾರ್ಮಿಕ ದೇವಸ್ಥಾನಗಳಿಗೆ ನನ್ನ ಅವಧಿಯಲ್ಲಿ ಹೆಚ್ಚಿನ ಅನುದಾನವನ್ನು ನೀಡಿದ್ದೇನೆ. ಇನ್ನು ಹಲವಾರು ಮೂಲಭೂತ ಸೌಕರ್ಯಗಳನ್ನ ಒದಗಿಸಿ ಕೊಡುತ್ತೆನೆ. ಪಂಚರತ್ನ ಯೋಜನೆ ಬಗ್ಗೆ, ರೈತರಿಗೆ ೧೦ ಎಕರೆ ವರೆಗೂ ೧೦ ಸಾವಿರ, ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಲ ಸಾಲಮನ್ನಾ, ಅಂಗವಿಕಲರ, ವಿಧವೆಯರ, ವೃದ್ಯಾಪ್ಯ ವೇತನ ೫ ಸಾವಿರದ ವರೆಗೂ ಹೆಚ್ಚಳ ಮಾಡುತ್ತಾರೆ. ಇವುಗಳನ್ನು ಮತದಾರರಿಗೆ ತಿಳಿ ಹೇಳಿ, ಕ್ಷೇತ್ರದ ಪ್ರತಿಯೊಂದು ಗ್ರಾಮವನ್ನು ನಾನು ಅಭಿವೃದ್ಧಿ ಮಾಡಬೇಕು ಮತ್ತು ಪ್ರತಿಯೊಂದು ಹಳ್ಳಿಗೂ ಸರ್ಕಾರದ ಸೌಲಭ್ಯಗಳನ್ನು ಕೊಡಿಸಬೇಕು ಮತ್ತು ಪ್ರತಿಯೊಬ್ಬರಿಗೂ ಸರ್ಕಾರದ ಸೌಲಭ್ಯಗಳು ದೊರೆಯಬೇಕು ಎನ್ನುವುದೇ ನನ್ನ ಮುಖ್ಯ ಉದ್ದೇಶವಾಗಿದೆ ಅದರಂತೆ ನವಲಕಲ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹಲವು ಯೋಜನೆಗಳಲ್ಲಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕಾಂಪೌಂಡ್ ನಿರ್ಮಾಣ ೧೦ ಲಕ್ಷ ರುಪಾಯಿಗಳಲ್ಲಿ ನಿರ್ಮಿಸಲಾಗಿದೆ, ಮಸೀದಿಗೆ ಕಾಂಪೌಂಡ್ ನಿರ್ಮಾಣಕ್ಕೆ ೫ ಲಕ್ಷ , ಹೈಮಾಸ್ ಲೈಟ್ ಅಳವಡಿಸಲಾಗಿದೆ.
ದೇವಿ ಕ್ಯಾಂಪ್‌ನಲ್ಲಿ ಮೋಟಾರು ಅಳವಡಿಸುವುದು ಮತ್ತು ನವಲಕಲ್ ಗ್ರಾಮದ ಶ್ರೀ ಮಾರಿಕಾಂಬ ದೇವಸ್ಥಾನಕ್ಕೆ ಗೋಪುರ ನಿರ್ಮಾಣ, ನವಲಕಲ್ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕುಡಿಯುವ ನೀರಿನ ಶುದ್ದೀಕರಣ ಘಟಕ ನಿರ್ಮಾಣ: ದೇವಿ ಕ್ಯಾಂಪ್‌ನಲ್ಲಿ ಮನೆ-ಮನೆಗೆ ಕುಡಿಯುವ ನೀರಿನ ಕಾಮಗಾರಿ ನಿರ್ಮಾಣ.
ನವಲಕಲ್ ಗ್ರಾಮದ ಮಠಕ್ಕೆ ಹೋಗುವ ದಾರಿಗೆ ಸಿ.ಸಿ., ರಸ್ತೆ ನಿರ್ಮಾಣ, ನವಲಕಲ್-ಮರಾಠ ಗ್ರಾಮಗಳ ಮಧ್ಯೆ ಸೇತುವೆ ನಿರ್ಮಾಣ, ನವಲಕಲ್ ಗ್ರಾಮದ ಪ್ರೌಢ ಶಾಲೆಗಳಲ್ಲಿ ಶುದ್ಧವಾದ ಕುಡಿಯುವ ನೀರಿನ ಘಟಕಗಳನ್ನು ಅಳವಡಿಸುವುದು ಇದೇ ರೀತಿಯಾಗಿ ಅನೇಕ ಯೋಜನೆಗಳನ್ನು ಪ್ರತಿಯೊಂದು ಗ್ರಾಮ ಪಂಚಾಯಿತಿಗೆ ನೀಡುತ್ತೇನೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷರಾದ ರಾಜಾ ರಾಮಚಂದ್ರ ನಾಯಕ, ಜೆಡಿಎಸ್ ತಾಲೂಕ ಅಧ್ಯಕ್ಷ ಮಲ್ಲಿಕಾರ್ಜುನ ಬಲ್ಲಟಗಿ, ಜಂಬುನಾಥ ಯಾದವ, ರಾಜಾ ಆದರ್ಶ ನಾಯಕ, ಪಿ.ರವಿಕುಮಾರ, ಶಶಿಧರಗೌಡ ನೀರಮಾನ್ವಿ, ಚನ್ನಬಸ್ಸಯ್ಯ ಸ್ವಾಮಿ, ಪರಮೇಶ ನಾಯ್ಕ, ಬಸವರಾಜಯ್ಯ ಶಟ್ಟಿ, ಹನುಮಂತ ಭೋವಿ, ರಾಜೇಶ ನಾಯಕ ವಕೀಲ, ಸೂಗುರೇಶ ಸ್ವಾಮಿ ಗಣದಿನ್ನಿ, ರವಿ ಕುಮಾರ್ ವಕೀಲ, ಪಂಪನಗೌಡ ನೀರಮಾನ್ವಿ ಯಂಕೋಬ ಹರವಿ, ಮಲ್ಲಯ್ಯ, ರಾಚಯ್ಯ ಸೇರಿದಂತೆ ಇನ್ನೀತರರು ಇದ್ದರು.