ನವಲಕಲ್- ಚಿಂಚರಕಿ ರಸ್ತೆ ನಿರ್ಮಾಣಕ್ಕೆ ಮನವಿ

ಸಿರವಾರ.ಡಿ೬- ಮಾನ್ವಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಜಾಗೀರ್ ಪನ್ನೂರು-ಚಿಕಲಪರ್ವಿ ಹಾಗೂ ನವಲಕಲ್ ಚಿಂಚರಕಿ ರಸ್ತೆ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡುವಂತೆ ಬೆಂಗಳೂರಿನಲ್ಲಿ ಲೋಕೋಪಯೋಗಿ ಸಚಿವರಾದ ಸಿ.ಸಿ ಪಾಟೇಲ ಇವರನ್ನು ರಾಜ್ಯ ಜೆಡಿಎಸ್ ಯುವ ಘಟಕದ ಉಪಾಧ್ಯಕ್ಷರಾದ ರಾಜಾ ರಾಮಚಂದ್ರ ನಾಯಕ ಭೇಟಿ ಮಾಡಿ ಮಾನ್ವಿ ವಿಧಾನಸಭಾ ಕ್ಷೇತ್ರದಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗೋಪಾಲ ನಾಯಕ ಹರವಿ, ಅತೀಕ್ ರಾಯಚೂರು, ಅಮರೇಶ ನಾಯಕ ಆಲ್ದಾಳ, ಉಪಸ್ಥಿತರಿದ್ದರು.