ಸಿರವಾರ.ಅ.೨೪- ಪಟ್ಟಣದ ಶ್ರೀಶಾಂಭವಿ ಮಠದಲ್ಲಿ ನವರಾತ್ರಿ ಹಬ್ಬದ ಅಂಗವಾಗಿ ಮುತ್ತೈದೆಯರಿಗೆ ’ಅಕ್ಕನ ಬಳಗ ಸಿರವಾರ’ ತಂಡದ ವತಿಯಿಂದ ಭಾನುವಾರ ಉಡಿ ತುಂಬುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ನೂರಾರು ಮಹಿಳೆಯರಿಗೆ ಉಡಿತುಂಬಲಾಯಿತು.
೫೨ ವರ್ಷಗಳಿಂದಲೂ ಪ್ರತಿ ವರ್ಷ ಜರುಗುವ ಶ್ರೀ ಶಾಂಭವಿಯ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ದೇವಿಗೆ ದಿನನಿತ್ಯ ವಿವಿಧ ಅಲಂಕಾರ, ಕುಂಕುಮಾರ್ಚನೆ, ಪುಷ್ಪಾರ್ಚನೆ, ಸೇರಿದಂತೆ ಹಲವು ಧಾರ್ಮಿಕ ಕೈಂಕರ್ಯಗಳನ್ನು ಜರುಗಿಸಲಾಗುತ್ತದೆ. ಶ್ರೀದೇವಿ ಮಹಾತ್ಮೆ ಪುರಾಣ ಪ್ರವಚನ ಜರುಗುತ್ತದೆ. ನೆರೆದ ನೂರಾರು ಭಕ್ತರಿಗೆ ಪ್ರತಿದಿನ ಅನ್ನ ಸಂತರ್ಪಣೆ ನಡೆಯುತ್ತದೆ.