ನವರಾತ್ರಿ ಮಹೋತ್ಸವ: ದುರ್ಗಾದೌಡ್‍ಗೆ ಚಾಲನೆ

(ಸಂಜೆವಾಣಿ ವಾರ್ತೆ)
ಲಕ್ಷ್ಮೇಶ್ವರ,ಅ16: ಪಟ್ಟಣದ ಗ್ರಾಮದೇವಿ ಶ್ರೀ ದ್ಯಾಮವ್ವದೇವಿ ದೇವಸ್ಥಾನದಿಂದ ನವರಾತ್ರಿ ಮಹೋತ್ಸವದ ಅಂಗವಾಗಿ ಸಂಭ್ರಮದ ದುರ್ಗಾ ದೌಡ್ ಗೆ ಭಕ್ತಿ ಪೂರ್ವಕ ಚಾಲನೆಯನ್ನು ಕರೆವಾಡಿ ಮಠದ ಶ್ರೀ ಮಳೆ ಮಲ್ಲಿಕಾರ್ಜುನ ಶ್ರೀಗಳು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಅವರು ಒಂಬತ್ತು ದಿನಗಳ ಕಾಲ ನವರಾತ್ರಿ ಮಹೋತ್ಸವ ನಮ್ಮೆಲ್ಲರಿಗೂ ಅತ್ಯಂತ ಭಕ್ತಿ ಪೂರ್ವಕವಾದ ಮತ್ತು ಶ್ರದ್ಧಾ ಹಬ್ಬವಾಗಿದೆ. ಪ್ರತಿದಿನ ಶಕ್ತಿ ದೇವತೆಗಳ ಆರಾಧನೆ ಪುರಾಣ ಮತ್ತು ಪ್ರವಚನಗಳು ಜರುಗುವುದರಿಂದ ಈ ಒಂಬತ್ತು ದಿನಗಳ ಕಾಲವೂ ಭಕ್ತಿಯಿಂದ ಕಾಲ ಕಳೆಯುತ್ತೇವೆ. ಪ್ರತಿದಿನವೂ ಉಪವಾಸ ಮತ್ತು ಆರಾಧನೆಗಳು ಜರುಗುತ್ತವೆ. ಇದರಿಂದಾಗಿ ನಾವೆಲ್ಲರೂ ಪುಣ್ಯವಂತರಾಗಿ ಬಾಳಲು ಸನ್ಮಾರ್ಗವಾಗುತ್ತದೆ ಎಂದರು.
ದುರ್ಗಾ ದೌಡ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಕ್ತರು ಶುಭ್ರವಾದ ಬಿಳಿ ಬಟ್ಟೆಗಳನ್ನು ಧರಿಸಿ ಕೇಸರಿ ಶಾಲುಗಳನ್ನು ಹೊತ್ತಿದ್ದರಲ್ಲದೇ ದುರ್ಗಾದೇವಿಯ ಭಾವಚಿತ್ರಗಳನ್ನು ಹಿಡಿದುಕೊಂಡು ಮೆರವಣಿಗೆಯಲ್ಲಿ ಸಾಗಿದರು.
ಮೆರವಣಿಗೆ ನೇತೃತ್ವವನ್ನು ಗುರುನಾಥ ದಾನಪ್ಪನವರ ಬಸವರಾಜ ಅರಳಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಹೇಶ ಹೊಗೆ ಸೊಪ್ಪಿನ ಭರಮಗೌಡ್ರು ಪಾಟೀಲ ಶಿವನಗೌಡರು ಪಾಟೀಲ ವೆಂಕನಗೌಡ ಗಿರಡ್ಡಿ ರಾಜಶೇಖರ ಶಿಗ್ಲಿ ಮಠ ಮಲ್ಲನಗೌಡರು ಪಾಟೀಲ ಬೊಮ್ಲೆ ಲೆ ಬಸವರಾಜ ದಾನಿ ಮುದುಕಪ್ಪ ಮುಳಗುಂದ ಶಿವಪ್ಪ ಡಂಬಳ ಎಲ್ಲಪ್ಪ ಕೊರದಾಳ ಹನುಮಂತಪ್ಪ ಗಡದ ಮಂಜು ಬಳಿಗಾರ ಮಾತೆಯರಾದ ರಾಜೇಶ್ವರಿ ದಾನಪ್ಪನವರ ಸುಜಾತಾ ಅತ್ತಿಗೇರಿ ಪುಷ್ಪ ಅರಳಿ ರವಿ ಲಿಂಗ್ ಶೆಟ್ಟಿ ಬಸವರಾಜ ಹೊಗೆ ಸೊಪ್ಪಿನ ಸೇರಿದಂತೆ ಅನೇಕರು ಭಾಗವಹಿಸಿದ್ದರು.