ನವರಾತ್ರಿ ಉತ್ಸವಕ್ಕೆ ಮೆರುಗು ತಂದ ಮುನ್ನೂರು ಕಾಪು ಸಮಾಜ- ಶಾಂತಪ್ಪ

ಮುನ್ನೂರು ಕಾಪು ಸಮಾಜ: ೪ ನೇ ದಿನದ ನವರಾತ್ರೋತ್ಸವ ಸಾಂಸ್ಕೃತಿಕ ಸಡಗರ
ರಾಯಚೂರು,ಅ.೧೮- ಸಾಂಸ್ಕೃತಿಕ ಪರಂಪರೆ ರಕ್ಷಣೆಯೊಂದಿಗೆ ಮುನ್ನೂರು ಕಾಪು ಸಮಾಜ ಈ ಭಾಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವುದರ ಮೂಲಕ ನವರಾತ್ರಿ ಉತ್ಸವಕ್ಕೆ ಮೆರುಗು ನೀಡುತ್ತಿದೆ ಎಂದು ಹಿಂದುಳಿದ ವರ್ಗ ಒಕ್ಕೂಟದ ಅಧ್ಯಕ್ಷರಾದ ಕೆ. ಶಾಂತಪ್ಪ ಅವರು ಹೇಳಿದರು.
ನಗರದ ಗದ್ವಾಲ್ ರಸ್ತೆಯಲ್ಲಿರುವ ಶ್ರೀಮಾತಾ ಲಕ್ಷ್ಮಮ್ಮ ದೇವಿ ಹಾಗೂ ಶ್ರೀಕಾಳಿಕಾದೇವಿಯ ದೇವಸ್ಥಾನದಲ್ಲಿ ಹಮ್ಮಿಕೊಂಡಿರುವ ನವರಾತ್ರಿ ಉತ್ಸವಕ್ಕೆ ಅಂಗವಾಗಿ ಇಂದು ನಡೆದ ೪ನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಮುಂಗಾರು ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವುದು ಮುನ್ನೂರುಕಾಪು ಸಮಾಜ ಮಾದರಿಯಾಗಿರುವುದು ಈ ಸಮಾಜದ ಪ್ರಾಬಲ್ಯ ಪ್ರದರ್ಶಿಸುತ್ತದೆ. ಮೂಲತಃ ಕೃಷಿಯನ್ನು ಅವಲಂಬಿತ ಮುನ್ನೂರುಕಾಪು ಸಮಾಜ ತನ್ನ ಕಷ್ಟಾರ್ಜಿತ, ವಿಶ್ವಾರ್ಹತೆ ಮತ್ತು ಸ್ವಾವಲಂಬಿ ತನದಿಂದ ಇಂದು ಎಲ್ಲಾ ರಂಗಗಳಲ್ಲೂ ಪ್ರಬಲ ಸಮುದಾಯವಾಗಿ ಬೆಳೆದು ನಿಂತಿದೆ.
ಕಳೆದ ೫ ವರ್ಷಗಳಿಂದ ನವರಾತ್ರಿ ಉತ್ಸವದ ಅಂಗವಾಗಿ ೯ ದಿನಗಳ ಕಾಲ ಪ್ರತಿದಿನ ಸಂಜೆ ೬ ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಅತ್ಯಂತ ಅದ್ದೂರಿ ವೈಭವಕರಣದಿಂದ ಆಚರಣೆ ಮಾಡಲಾಗುತ್ತಿದೆ ಎಂದರು.
ಪ್ರೌಢಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಂದ ನೃತ್ಯ ಸ್ಪರ್ಧೆ ಮತ್ತು ವೃತ್ತಿ ನಿರತ ಕಲಾ ತಂಡಗಳಿಗೆ ಪ್ರತ್ಯೇಕ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ವಿದ್ಯಾರ್ಥಿಗಳು, ಕಲಾವಿದರ ಕಲಾ ಪ್ರದರ್ಶನಕ್ಕೆ ಮುನ್ನೂರುಕಾಪು ಸಮಾಜವು ಬೃಹತ್‌ವೇದಿಕೆ ಕಲ್ಪಿಸುತ್ತಿದೆ ಎಂದರು.
ಭರಪೂರ ಸಂಭ್ರಮ ಪಡುವುದಕ್ಕೆ ನವರೂಪ ಒಂದು ಉತ್ತಮ ಅವಕಾಶ ವಿದ್ಯಾರ್ಥಿಗಳಿಗೆ ಉತ್ತಮ ವೇದಿಕೆ ಕಲ್ಪಿಸುವುದರ ಮೂಲಕ ಸಾಂಸ್ಕೃತಿಕ ಪರಂಪರೆ ರಕ್ಷಣೆಯಲ್ಲಿ ಮುನ್ನೂರು ಕಾಪು ಸಮಾಜ ಮುಂಚೂಣಿಯಲ್ಲಿರುತ್ತದೆ ಎಂದರು.
ಮುಂಗಾರು ನಂತರ ನವರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ ಈ ರೀತಿ ಹಬ್ಬಗಳನ್ನು ಬೇರೆ ಯಾವ ಜಿಲ್ಲೆಗಳಲ್ಲಿ ಕೂಡ ಜರುಗುವುದಿಲ್ಲ. ಸರ್ಕಾರದಿಂದ ಒಂದು ರೂ.ಕೂಡ ಪಡೆಯದೆ ಕೇವಲ ಸಮಾಜದ ವತಿಯಿಂದ ಇಷ್ಟೊಂದು ಅದ್ದೂರಿಯಾಗಿ ಮಾಡುತ್ತಿರುವುದು ಸಾಮಾನ್ಯದ
ವಿಷಯವಲ್ಲ ಎಂದರು.ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ ರಾಜ್ಯಕ್ಕೆ ಮಾದರಿಯಾಗಿದೆ ಎಂದರು. ಸಾಂಸ್ಕೃತಿಕ ರೂವಾರಿ ಮಾಜಿ ಶಾಸಕ ಎ. ಪಾಪಾರೆಡ್ಡಿ ಅವರು ಮುನ್ನೂರು ಕಾಪು ಸಮಾಜವನ್ನು ಬಲಿಷ್ಠಗೊಳಿಸಿದರ ಜೊತೆಗೆ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬವನ್ನು ರಾಜ್ಯವೇ ಗುರುತಿಸುವಂತೆ ಅತ್ಯಂತ ಅದ್ದೂರಿ ಮತ್ತು ವೈಭವೀಕರಣದಿಂದ ಆಚರಣೆ ಮಾಡುತ್ತಿದ್ದಾರೆ ಎಂದರು. ಈ ಕಾರ್ಯಕ್ರಮದ ದಿವ್ಯಾ ಸಾನಿಧ್ಯವನ್ನು ಪಶ್ಚಿಮಾದ್ರಿ ಸಂಸ್ಥಾನ ವಿರಕ್ತಮಠ, ನೇರಡಗಂಬ ತೆಲಂಗಾಣ ಶ್ರೀ ಮ.ನಿ.ಪ್ರ ಪಂಚಮ ಸಿದ್ದಲಿಂಗ ಮಹಾಸ್ವಾಮಿಗಳು ವಹಿಸಿದ್ದರು. ವಿವಿಧ ಕಲಾ ತಂಡಗಳು ನೀಡಿದ ಪ್ರದರ್ಶನ ಆಮೋಘವಾಗಿತ್ತು. ಸಭೀಕರನ್ನು ಕುಣಿದು ಕುಪ್ಪಳಿಸುವಂತಹ ನೃತ್ಯಕ್ಕೆ ಜನ ಮಾನಸೋಲುವಂತೆ ಮಾಡಿತು.
ಈ ವೇದಿಕೆಯಲ್ಲಿ ಹಬ್ಬದ ರೂವಾರಿ ಮಾಜಿ ಶಾಸಕ ಎ. ಪಾಪಾರೆಡ್ಡಿ, ಬೆಲ್ಲಂ ನರಸರೆಡ್ಡಿ, ಬಂಗ್ಗಿ ನರಸರೆಡ್ಡಿ, ಆರ್. ಕೆ ಅಮರೇಶ, ಕೆ. ಶಾಂತಪ್ಪ, ಡಾ. ರಾಜೇಶ್ವರಿ, ಹನುಮಂತಪ್ಪ, ಗಾಧರ ಬೆಟ್ಟಪ್ಪ, ಜಿ.ಬಸವರಾಜ, ರಾಜುಕುಮಾರ, , ಬುಡತಪ್ಪಗಾರು ಆಂಜನೇಯ, ಜಯಂತರಾವ್ ಪತಂಗಿ, ವಿ ಕೃಷ್ಣಮೂರ್ತಿ, ಕೆ. ಹನುಮಂತಪ್ಪ, ಜಿ. ಶಿವಮೂರ್ತಿ, ಜಿ. ಟಿ ರೆಡ್ಡಿ, ಶೇಖರರೆಡ್ಡಿ, ಪಿ. ರಾಜುರೆಡ್ಡಿ, ಮುನ್ನೂರು ಕಾಪು ಸಮಾಜದ ಮುಖಂಡರು ಸೇರಿದಂತೆ ಅನೇಕರು ಭಾಗವಹಿಸಿದ್ದರು.