ನವರಾತ್ರಿಯ ಉತ್ಸವ, ಮುನ್ನೂರುಕಾಪು ಸಮಾಜ ಸೇವೆ ಶ್ಲಾಘನೆ

ರಾಯಚೂರು.ಅ.೨೦- ಸಾಮಾಜಿಕ ಚಟುವಟಿಕೆಗಳ ಮೂಲಕ ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮಹತ್ವದ ಜವಾಬ್ದಾರಿ ನಿರ್ವಹಿಸುವಲ್ಲಿ ಮುನ್ನೂರುಕಾವು ಸಮಾಜದ ಕಾರ್ಯ ಅತ್ಯಂತ ಶ್ಲಾಘನೀಯವಾಗಿದೆಂದು ಗಿರೀಜಾ ಶಂಕರ ಸಾಹುಕಾರ್ ಅವರು ಹೇಳಿದರು.
ನಗರದ ನಗರದ ಗದ್ವಾಲ್ ರಸ್ತೆಯಲ್ಲಿರುವ ಶ್ರೀಮಾತಾ ಲಕ್ಷ್ಮಮ್ಮ ದೇವಿ ಹಾಗೂ ಶ್ರೀಕಾಳಿಕಾದೇವಿಯ ದೇವಸ್ಥಾನದಲ್ಲಿ ಮುನ್ನೂರು ಕಾಪು ಸಮಾಜ ಹಮ್ಮಿಕೊಂಡಿರುವ ನವರಾತ್ರಿ ಉತ್ಸವಕ್ಕೆ ಅಂಗವಾಗಿ ಇಂದು ನಡೆದ ಐದನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮವನ್ನು ತಬಲ ಬಾರಿಸುವುದರ ಉದ್ಘಾಟಿಸಿ ಮಾತನಾಡುತ್ತಾ,
ಮುಂಗಾರು ನಂತರ ನವರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ ಈ ರೀತಿ ಹಬ್ಬಗಳನ್ನು ಬೇರೆ ಯಾವ ಜಿಲ್ಲೆಗಳಲ್ಲಿ ಕೂಡ ಜರುಗುವುದಿಲ್ಲ. ಸರ್ಕಾರದಿಂದ ಒಂದು ರೂ.ಕೂಡ ಪಡೆಯದೆ ಕೇವಲ ಸಮಾಜದ ವತಿಯಿಂದ ಇಷ್ಟೊಂದು ಅದ್ದೂರಿಯಾಗಿ ಮಾಡುತ್ತಿರುವುದು ಸಾಮಾನ್ಯದ ವಿಷಯವಲ್ಲ ಎಂದರು.ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ ರಾಜ್ಯಕ್ಕೆ ಮಾದರಿಯಾಗಿದೆ ಎಂದರು. ಸಾಂಸ್ಕೃತಿಕ ರೂವಾರಿ ಮಾಜಿ ಶಾಸಕ ಎ. ಪಾಪಾರೆಡ್ಡಿ ಅವರು ಮುನ್ನೂರು ಕಾಪು ಸಮಾಜವನ್ನು ಬಲಿಷ್ಠಗೊಳಿಸಿದರ ಜೊತೆಗೆ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬವನ್ನು ರಾಜ್ಯವೇ ಗುರುತಿಸುವಂತೆ ಅತ್ಯಂತ ಅದ್ದೂರಿ ಮತ್ತು ವೈಭವೀಕರಣದಿಂದ ಆಚರಣೆ ಮಾಡುತ್ತಿದ್ದಾರೆ ಎಂದರು. ಇತರ ಸಮಾಜಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಲವು ವರ್ಷಗಳು ಮಾತ್ರ ಆಚರಣೆ ಮಾಡಿ ಅರ್ದಕ್ಕೆ ಮೋಟಕು ಗೊಳಿಸುತ್ತಾರೆ. ಆದರೆ ಮಾಜಿ ಶಾಸಕ ಮತ್ತು ಸಾಂಸ್ಕೃತಿಕ ರೂವಾರಿ ಎ. ಪಾಪಾರೆಡ್ಡಿ ಅವರು ಸಮಾಜದ ಒಗ್ಗೂಡಿಸುವುದರ ಮೂಲಕ ನಿರಂತರ ಸಾಮಾಜಿಕ ಚಟುವಟಿಕೆಗಳನ್ನು ಆಚರಣೆ ಮಾಡುತ್ತಿದೆ ಎಂದರು.
ಈ ಕಾರ್ಯಕ್ರಮಕ್ಕೆ ಆಗಮಿಸಿದಂತಹ ಅಕ್ಕಮಹಾದೇವಿ ಉಪ್ಪಿ ಅವರು ನವದುರ್ಗೆಯರ ಬಗ್ಗೆ ವಿಜಯದಶಿಮಿ ಉದ್ದೇಶದ ಬಗ್ಗೆ ಸವಿಸ್ತಾರವಾಗಿ ಹೇಳಿದರು. ಈ ಕಾರ್ಯಕ್ರಮದಲ್ಲಿ ಹರವಿ ನಾಗಣ್ಣಗೌಡ ಮಾತನಾಡುತ್ತಾ,ಮಾಜಿ ಶಾಸಕ ಎ. ಪಾಪಾರೆಡ್ಡಿ ಅವರು ಸಾಮಾಜಿಕ ಚಟುವಟಿಕೆಗಳ ಮೂಲಕ ಶೈಕ್ಷಣಿಕ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ ಎಂದರು.
ಈ ಕಾರ್ಯಕ್ರಮದ ದಿವ್ಯಾ ಸನ್ನಿದ್ಯಾವನ್ನು ಮಲ್ಲಿಕಾರ್ಜುನ ಸ್ವಾಮಿಗಳು ವಹಿಸಿದ್ದರು. ಇಂದಿನ ಕಾರ್ಯಕ್ರಮದಲ್ಲಿ ಒಟ್ಟು ೭ ತಂಡಗಳು ಭಾಗವಹಿಸಿ ತಮ್ಮ ನೃತ್ಯ ಮೂಲಕ ನೋಡುಗರರನ್ನು ಕುಣಿದು ಕುಪ್ಪಲಿಸುವಂತೆ ಮಾಡಿ, ಜನರ ಮೆಚ್ಚುಗೆ ಪಾತ್ರರಾಗಿದ್ದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಸಾಂಸ್ಕೃತಿಕ ರೂವಾರಿ ಎ. ಪಾಪಾರೆಡ್ಡಿ, ಬಂಗಿ ನರಸರೆಡ್ಡಿ, ಆರ್. ಕೆ ಅಮರೇಶ, ಕೆ ಮಹಾನಂದಿ, ಯು. ಗೋವಿಂದರೆಡ್ಡಿ, ಸೂಗಣ್ಣಗಾರು ವೆಂಕಟರೆಡ್ಡಿ, ಮಹಿಂದ್ರಾರೆಡ್ಡಿ, ಬಂಗಿ ನರಸರೆಡ್ಡಿ, ಯು. ಉಪ್ಪರೆಡ್ಡಿ, ಗುಡ್ಸಿ ನರಸರೆಡ್ಡಿ, ಎನ್ ಬುಗ್ಗರೆಡ್ಡಿ, ರಾಮನಂದರಾವ್, ಬಿ. ಗೋವಿಂದ, ಗಾಧರ ಬೆಟ್ಟಪ್ಪ, ಮುನ್ನೂರು ಕಾಪು ಸಮಾಜದ ಮುಖಂಡರು ಸೇರಿದಂತೆ ಅನೇಕರು ಭಾಗವಹಿಸಿದ್ದರು.