
ನವರಸಗಳನ್ನು ಆಧರಿಸಿ ತಯಾರು ಮಾಡಿರುವ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವ ಮಂಜುನಾಥ್ ಮುನಿಯಪ್ಪ.ಈ ಮೂಲಕ ಸುಳ್ಳು ಕಥೆಗಳನ್ನು ತೆರೆಯ ಮೇಲೆ ಕಟ್ಟಿಕೊಡಲು ಮುಂದಾಗಿದ್ದಾರೆ. ಟ್ರೇಲರ್ ಗೆ ಶಿವರಾಜಕುಮಾರ್ ಧ್ವನಿ ನೀಡಿದ್ದಾರೆ.
ಚಿತ್ರದ ಟ್ರೈಲರ್ ಬಿಡುಗಡೆಗೆ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ, ನಿರ್ದೇಶಕ ಇಂದ್ರಜಿತ್ ಲಂಕೇಶ್ ಮತ್ತಿತರರು ಆಗಮಿಸಿ ಚಿತ್ರಕ್ಕೆ ಮತ್ತು ತಂಡಕ್ಕೆ ಶುಭ ಹಾರೈಸಿದರು.
ಈ ವೇಳೆ ಮಾತಿಗಿಳಿದ ನಿರ್ದೇಶಕ ಮಂಜುನಾಥ್ ಮುನಿಯಪ್ಪ,ನೈಜ ಘಟನೆ ಆಧಾರಿತ ಚಿತ್ರ ನವರಸ ಆಧರಿಸಿ ಮಾಡಿದ ಕಥೆ. ಸ್ನೇಹಿತ ಸೂರ್ಯನಾರಾಯಣ್ ನಿರ್ಮಾಣಕ್ಕೆ ಚಿತ್ರಕ್ಕೆ ಚಾಲನೆ ನೀಡಿದರು. ನಂತರ ಸಾಕಷ್ಟು ಗೆಳೆಯರು ಜೊತೆಯಾದರು. ಚಿತ್ರದಲ್ಲಿ ಪ್ರಮೋದ್ ಶೆಟ್ಟಿ, ವಿನಾಯಕ ಜೋಶಿ, ಕರಿ ಸುಬ್ಬು, ಸುಕೃತ ವಾಗ್ಲೆ, ಲಕ್ಷ್ಮೀ ಚಂದ್ರಶೇಖರ್ ಸೇರಿದಂತೆ ನೂರಕ್ಕೂ ಅಧಿಕ ಕಲಾವಿದರು ಅಭಿನಯಿಸಿದ್ದಾರೆ ಎಂದರು.
ಸಂಗೀತ ನಿರ್ದೇಶಕರಾದ ಪ್ರವೀಣ್ – ಪ್ರದೀಪ್ ಸಂಗೀತದಲ್ಲಿ ಆರು ಹಾಡುಗಳಿವೆ.ಸಂತ ಶಿಶುನಾಳ ಶರೀಫರ ಗೀತೆ ಬಳಸಿಕೊಂಡಿದ್ದೇವೆ. ವಿಕ್ರಮ್ ವಸಿಷ್ಠ, ಸತೀಶ್ ಬೆಲ್ಲೂರು ಹಾಗೂ ಕಿರಣ್ ವಿಪ್ರ ಹಾಡುಗಳನ್ನು ಬರೆದಿದ್ದಾರೆ. ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್, ವಾರಿಜಾಶ್ರೀ, ಶಶಿಧರ್ ಕೋಟೆ, ಚಿಂತನ್ ವಿಕಾಸ್ ಸೇರಿದಂತೆ ಹಲವು ಗಾಯಕರು ಹಾಡಿದ್ದಾರೆ. ಜೊತೆಗೆ ನಟ ಹಾಗೂ ನಿರ್ದೇಶಕ ರಿಷಭ್ ಶೆಟ್ಟಿ ಇದೇ ಮೊದಲ ಬಾರಿಗೆ ಚಿತ್ರದ ಕನ್ನಡದ ಹಾಡೊಂದನ್ನು ಹಾಡಿದ್ದಾರೆ ಎಂದು ಮಾಹಿತಿ ನೀಡಿದರು.
ಹಿರಿಯ ನಟಿ ಲಕ್ಷ್ಮೀ ಚಂದ್ರಶೇಖರ್, ನಟ ವಿನಾಯಕ ಜೋಶಿ.ಪ್ರಮೋದ್ ಶೆಟ್ಟಿ . ಕರಿಸುಬ್ಬು ಮತ್ತು ಕೃಷ್ಣ ಹೆಬ್ಬಾಳೆ ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು. ಪರಮೇಶ್ ಛಾಯಾಗ್ರಹಣವಿದೆ.