ನವರತ್ನ ಯುವಕರ ಸಂಘ:ಮೇ.೧ ವಿದ್ಯಾರ್ಥಿಗಳಿಗೆ ಸನ್ಮಾನ

ರಾಯಚೂರು.ಏ.೧೬-ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಗೈದ ಪ್ರತಿಭಾವಂತ ಮಾದಿಗ ಸಮಾಜದ ವಿದ್ಯಾರ್ಥಿಗಳಿಗೆ ನವರತ್ನ ಯುವಕ ಸಂಘದ ವತಿಯಿಂದ ಪುರಸ್ಕಾರ ಸಮಾರಂಭವನ್ನು ಮೇ.೧ರಂದು ಅಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷರಾದ ಕೆ.ಪಿ. ಅನಿಲ್ ಕುಮಾರ ಅವರು ಹೇಳಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ನಮ್ಮ ನವರತ್ನ ಸಂಘವು ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡಿಕೊಂಡು ಕಳೆದ ೨೦ ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ಮಾದಿಗ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಸಮಾರಂಭವನ್ನು ಅಮ್ಮಿಕೊಳ್ಳಲಾಗಿದ್ದು,
ಮೇ.೧ರಂದು ನಗರದ ಹರಿಜನವಾಡ ಸಮುದಾಯ ಭವನದಲ್ಲಿ ೨೦೧೯-೨೦ನೇ ಸಾಲಿನ ನಗರ ವ್ಯಾಪ್ತಿಯ ಎಸ್ ಎಸ್ ಎಲ್ ಸಿ ಯಿಂದ ಮೇಲ್ಪಟ್ಟ ಪದವಿ ಮತ್ತು ಸ್ನಾತಕೋತ್ತರ ಪದವಿಗಳಲ್ಲಿ ಪ್ರಥಮ ಬಾರಿಗೆ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದ ನಮ್ಮ ಸಮಾಜದ ವಿದ್ಯಾರ್ಥಿಳಿಗೆ ಪುರಸ್ಕಾರವನ್ನು ಮಾಡಲಾಗುತ್ತದೆ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗೆ ಬೆಳ್ಳಿ ಪದಕವನ್ನು ನೀಡಲಾಗುತ್ತದೆ.
ವಿದ್ಯಾರ್ಥಿಗಳು ಏ.೨೪ರ ಒಳಗಾಗಿ ಹರಿಜನವಾಡದ ಸಮುದಾಯ ಭವನದ ಆವರಣದಲ್ಲಿ ಅಂಕಪಟ್ಟಿ, ಜಾತಿ ಪ್ರಮಾಣ ಪತ್ರ, ಸ್ವ ಪರಿಚಯ ಪತ್ರ,ಎರಡು ಬಾವಚಿತ್ರವನ್ನು ಅರ್ಜಿ ಸಲ್ಲುಸಬೇಕು ಹಾಗೂ ಹೆಚ್ಚಿನ ಮಾಹಿತಿಗಾಗಿ ೭೯೭೫೩೨೨೧೩೫,೯೯೧೬೫೬೮೮೧೫ ಸಂಖ್ಯೆಗೆ ಕರೆಮಾಡಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿವಪ್ಪ ಮಣಿಗೇರಿ,ಆರ್.ಆಂಜನೇಯ, ಚಂದ್ರು ಬಂಡಾರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.