ನವಯುಗ ಶಿಕ್ಷಣ ಸಂಸ್ಥೆಯಲ್ಲಿ ೬೬ನೇ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ

ರಾಯಚೂರು.ನ.೦೧-ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾದ ನವಯುಗ ಶಿಕ್ಷಣ ಸಂಸ್ಥೆಯ ಸಂಚಾಲಿತ ನವಯುಗ ಪದವಿಪೂರ್ವ ಕಾಲೇಜು ರಾಯಚೂರು, ನವಯುಗ ಪದವಿ ಮಹಾವಿದ್ಯಾಲಯ ರಾಯಚೂರು ನವಯುಗ ಸ್ನಾತಕೋತ್ತರ ಅಧ್ಯಯನ ಕೇಂದ್ರ ರಾಯಚೂರು ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಇವರುಗಳ ಸಂಯುಕ್ತಾಶ್ರಯದಲ್ಲಿ ಇಂದು ಬೆಳಿಗ್ಗೆ ೮.೦೦ ಗಂಟೆಗೆ ಕಾಲೇಜಿನ ಆವರಣದಲ್ಲಿ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮವನ್ನು ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ರಮೇಶ ಉಪ್ರಾಳ್ ಕಲಾ ಮತ್ತು ಶಿಕ್ಷಣ ವಿಭಾಗದ ಮುಖ್ಯಸ್ಥರು ಇವರು ತಾಯಿ ಭುವನೇಶ್ವರಿದೇವಿಯ ಭಾವಚಿತ್ರಕ್ಕೆ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದರೆ, ನವಯುಗ ಪದವಿಪೂರ್ವ ಕಾಲೇಜಿನ ಉಪಪ್ರಾಚಾರ್ಯರಾದ ರಿಜ್ವಾನಾ ಪರ್ವಿನ್ ಅವರು ಕನ್ನಡ ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.
ಈ ಕಾರ್ಯಕ್ರಮದಲ್ಲಿ ನವಯುಗ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ವಿಘ್ನೇಶ್ವರನ್, ನರಸಿಂಹಲು.ಎನ್ ಆಡಳಿತಾಧಿಕಾರಿಗಳು ನವಯುಗ ಶಿಕ್ಷಣ ಸಂಸ್ಥೆ ರಾಯಚೂರು, ಆಡಳಿತ ಮಂಡಳಿಯ ಸದಸ್ಯರಾದ ನಾಯಿದ್ ಪಾಷಾ, ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಈರಣ್ಣ ಪೂಜಾರಿ ಉಪಸ್ಥಿತರಿದ್ದರು.
ನವಯುಗ ಪದವಿಪೂರ್ವ ಮತ್ತು ಪದವಿ ಮಹಾವಿದ್ಯಾಲಯದ ಉಪನ್ಯಾಸಕರುಗಳಾದ ಸುನೀತಾ ಪಿ, ಚೈತ್ರಾ, ರಶ್ಮಿ, ಲಕ್ಷ್ಮೀ, ಕು.ವರ್ಷಾ, ಕು.ಹಬೀಬಾ, ಕು.ಮಮತಾ, ಕು.ವರ್ಷಾ, ರವಿಕುಮಾರ, ಭೀಮಣ್ಣ ಭಂಡಾರಿ, ನಾಗೇಶ, ಗಾದಿಲಿಂಗಪ್ಪ, ನರಸರೆಡ್ಡಿ, ಲಾಲಪ್ಪ, ಗೋವಿಂದರಾಜ್, ಚಿನ್ನಪ್ಪ ಹಾಗೂ ಬೋಧಕೇತರ ಸಿಬ್ಬಂದಿಯಾದ ಹರಿವರ್ಧನ್, ಉದಯ್, ಗಾಯಿತ್ರಿ, ವೀರೇಶ ಮತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.