ನವಯುಗ ಪದವಿ ಪೂರ್ವ ಕಾಲೇಜು: ಖೋಖೋ ತಂಡ,ಚಕ್ರ ಎಸೆತ ಸ್ಪರ್ಧೇ ರಾಜ್ಯ ಮಟ್ಟಕ್ಕೆ ಆಯ್ಕೆ

ರಾಯಚೂರು.ನ.೦೬- ಕರ್ನಾಟಕ ಸರ್ಕಾರ ಪದವಿ ಪೂರ್ವ ಶಿಕ್ಷಣ ಇಲಾಖೆ, ರಾಯಚೂರು ಹಾಗೂ ಶಾಹೀನ್ ಪದವಿ ಪೂರ್ವ ಕಾಲೇಜು, ರಾಯಚೂರು ಇವರುಗಳ ಸಂಯುಕ್ತಾಶ್ರಯದಲ್ಲಿ ೨೦೨೨-೨೩ನೇ ಶೈಕ್ಷಣಿಕ ಸಾಲಿನ ರಾಯಚೂರು ಪದವಿ ಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ದಿ.೦೫-೧೧-೨೦೨೨ ಮತ್ತು ೦೬-೧೧-೨೦೨೨ ರಂದು ರಾಯಚೂರು ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ನಡೆದಿದ್ದು, ಈ ಕ್ರೀಡಾಕೂಟದಲ್ಲಿ ನವಯುಗ ಪದವಿ ಪೂರ್ವ ಕಾಲೇಜು ರಾಯಚೂರು ಖೋಖೋ ತಂಡವು ಸರಕಾರಿ ಪದವಿ ಪೂರ್ವ ಕಾಲೇಜು, ನಾಗರಹಾಳ, ಲಿಂಗಸೂಗೂರು ತಾಲ್ಲೂಕು ಖೋಖೋ ತಂಡವನ್ನು ಫೈನಲ್ ಖೋಖೋ ಪಂದ್ಯಾವಳಿಯಲ್ಲಿ ಕೇವಲ ೦೨ ಪಾಯಿಂಟ್‌ಗಳ ಅಂತರದಲ್ಲಿ ಅತ್ಯಂತ ರೋಚಕವಾಗಿ ಖೋಖೋ ಪಂದ್ಯವನ್ನು ಆಡಿ ಜಯಭೇರಿ ಬಾರಿಸಿ, ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತದೆ.
ಭಾಗ್ಯಶ್ರೀ ಚಕ್ರ ಎಸೆತ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಗಳಿಸುವುದರ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ, ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಕ್ಕಾಗಿ ಹಾಗೂ ಮುಂದಿನ ದಿನಗಳಲ್ಲಿ ಇನ್ನೂ ಎತ್ತರಕ್ಕೆ ಬೆಳೆಯಲಿ ಎನ್ನುವ ಆಶಯದೊಂದಿಗೆ ಎಂದು ನವಯುಗ ಶಿಕ್ಷಣ ಸಂಸ್ಥೆ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಎಲ್ಲಾ ಪದಾಧಿಕಾರಿಗಳು ಮತ್ತು ನವಯುಗ ಶಿಕ್ಷಣ ಸಂಸ್ಥೆ, ರಾಯಚೂರಿನ ವ್ಯವಸ್ಥಾಪಕ ನಿರ್ದೇಶಕರಾದ ವಿಘ್ನೇಶ್ವರನ್, ಸಂಸ್ಥೆಯ ಆಡಳಿತಾಧಿಕಾರಿಗಳಾದ ನರಸಿಂಹಲು ಎನ್., ನವಯುಗ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ರವಿರಾಜು.ಡಿ., ನವಯುಗ ಪದವಿ ಮಹಾವಿದ್ಯಾಲಯ ರಾಯಚೂರಿನ ಪ್ರಾಂಶುಪಾಲರಾದ ಈರಣ್ಣ ಪೂಜಾರಿ, ನವಯುಗ ಗ್ರಾಮೀಣ ಪದವಿ ಪೂರ್ವ ಮತ್ತು ಪದವಿ ಕಾಲೇಜು ಗಬ್ಬೂರಿನ ಪ್ರಾಚಾರ್ಯರು ಹಾಗೂ ಉಪನ್ಯಾಸಕರು, ನವಯುಗ ಮಹಿಳಾ ಪದವಿ ಮಹಾವಿದ್ಯಾಲಯ, ಮಾನವಿ ಕಾಲೇಜಿನ ಪ್ರಾಚಾರ್ಯರು ಹಾಗೂ ಸಿಬ್ಬಂದಿ ವರ್ಗ, ನವಯುಗ ಪದವಿ ಪೂರ್ವ ಕಾಲೇಜಿನ ಕಲಾ ಮತ್ತು ಶಿಕ್ಷಣ ವಿಭಾಗದ ಮುಖ್ಯಸ್ಥರಾದ ರಮೇಶ್ ಉಪ್ರಾಳ್, ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ರಿಜ್ವಾನಾ ಪರ್ವಿನಾ, ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಥಿಯೋಫಿಲಾಸ್ ದೀನ ದಯಾಳ್, ಕ್ರೀಡಾ ತಂಡದ ವ್ಯವಸ್ಥಾಪಕರಾದ ರವಿಕುಮಾರ ಹಾಗೂ ಉಪನ್ಯಾಸಕರು ಮತ್ತು ಸಿಬ್ಬಂಧಿಗಳು ಖೋಖೋ ತಂಡದ ನಾಯಕರಾದ ನರೇಶ್ ಹಾಗೂ ತಂಡಕ್ಕೆ ಮತ್ತು ಭಾಗ್ಯಶ್ರೀ ಅವರಿಗೆ ಹೃದಯಪೂರ್ವಕವಾಗಿ ಅಭಿನಂದನೆಗಳನ್ನು ಸಲ್ಲಿಸಿದರು.