ನವಭಾಗದಲ್ಲಿ ಕೋವಿಡ-19 ಉಚಿತ ಲಸಿಕೆ ನೀಡುವ ಅಭಿಯಾನ

ವಿಜಯಪುರ, ಏ.6-ನಗರದ ಜೋರಾಪುರ ಪೇಠ ಅಥಣಿ ರಸ್ತೆಯಲ್ಲಿರುವ ಶ್ರೀ ಶಂಕರಲಿಂಗ ದೇವಸ್ಥಾನದ ಸಮುದಾಯ ಭವನದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಾಥಮಿಕ ಆರೋಗ್ಯ ಕೇಂದ್ರ (ನವಭಾಗ) ಶ್ರೀ ಶಂಕರಲಿಂಗ ಬಣಗಾರ ಸಮಾಜ ಸೇವಾ ಸಂಘದ ಸಹಯೋಗದೊಂದಿಗೆ ಕೋವಿಡ 19 ಉಚಿತ ಲಸಿಕೆ ನೀಡುವ ಕಾರ್ಯಕ್ರಮ ಜರುಗಿತು.
ಈ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಬಣಗಾರ ಸಮಾಜದ ಅಧ್ಯಕ್ಷರಾದ ಶ್ರೀ ಮಹೇಶ ಹೇರಲಗಿ ಮಾತನಾಡಿ ಕರೋನಾ ಮುಕ್ತ ರಾಷ್ಟ್ರವನ್ನಾಗಿಸಲು ಪ್ರತಿಯೊಬ್ಬ ನಾಗರಿಕರು ಲಸಿಕೆಯನ್ನು ಪಡೆದುಕೊಳ್ಳಬೇಕು ಕರೋನಾ ಮುಕ್ತ ವಾಗಿಸಲು ಕೇವಲ ಸರ್ಕಾರ ದಿಂದ ಮಾತ್ರ ಸಾಧ್ಯವಿಲ್ಲ ಆರೋಗ್ಯ ಇಲಾಖೆ ಸಿಬ್ಬಂದಿಯ ಜೊತೆಗೆ ಎಲ್ಲಾ ಸಂಘ ಸಂಸ್ಥೆಗಳು ಯುವಕ ಸಂಘಗಳು ಕೈಜೋಡಿಸ ಬೇಕೆಂದು ತಿಳಿಸಿದರು.
ಯುವ ಮುಖಂಡ ಶಿವರುದ್ರ ಬಾಗಲಕೋಟ ಮಾತನಾಡಿ ನಮ್ಮ ದೇಶದ ಹೆಮ್ಮೆಯ ವಿಜ್ಞಾನಿಗಳು ತಯಾರಿಸಿದ ಕೋವಿಡ ಲಸಿಕೆಯ ಉಪಯೋಗ ಕೇವಲ ಭಾರತದ ದೇಶಕ್ಕೆ ಮಾತ್ರವಲ್ಲದೆ ಐವತ್ತಕ್ಕೂ ಹೆಚ್ಚು ರಾಷ್ಟ್ರಗಳಿಗೆ ಈ ಲಸಿಕೆಯನ್ನು ಕೊಟ್ಟಂಥ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರಿಗೆ ಧನ್ಯವಾದ ತಿಳಿಸಿದರು ವಸುದೈವ ಕುಟುಂಬಕಂ” ನ ನಿಜವಾದ ಆಶಯ ಈ ಮೂಲಕ ಈಡೇರಿದೆ ಎಂದು ಹೇಳಿದರು.
ಪ್ರಾಥಮಿಕ ಆರೋಗ್ಯ ಕೇಂದ್ರ (ನವಭಾಗ) ಆರೋಗ್ಯಾಧಿಕಾರಿಗಳಾದ ಡಾ. ಜೀನತ್ ಮುಶ್ರಿಫ್ ಮಾತನಾಡಿ ಲಸಿಕೆಯ ಬಗ್ಗೆ ಕೆಲವೊಬ್ಬರಿಗೆ ಗೊಂದಲಗಳಿವೆ ಲಸಿಕೆ ಪಡೆಯುವ ದರಿಂದ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ ಅನಾರೋಗ್ಯ ಹೊಂದಿದವರು ಬಿ,ಪಿ ಶುಗರ್ ಕಾಯಿಲೆಯಿಂದ ಬಳಲುತ್ತಿರುವವರು ಮೊದಲು ಲಸಿಕೆ ಪಡೆದುಕೊಳ್ಳಬೇಕೆಂದು ವಿನಂತಿಸಿದರು ಈ ಅಭಿಯಾನದಲ್ಲಿ ಕೈಜೋಡಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು
ಈ ಸಂದರ್ಭದಲ್ಲಿ 350 ಕ್ಕೂ ಹೆಚ್ಚು ಜನರಿಗೆ ಲಸಿಕೆಯನ್ನು ನೀಡಲಾಯಿತು ಕಾರ್ಯಕ್ರಮದ ವೇದಿಕೆಯ ಮೇಲೆ ಸೂರಪ್ಪ ಮಿರ್ಜಿ, ವಿರುಪಾಕ್ಷಪ್ಪ ಶಾಬಾದಿ, ಕಾಡಪ್ಪ ಲೋಣಿ. ಸಿದ್ದಲಿಂಗ ತೆಲಸಂಗ ಉಪಸ್ಥಿತರಿದ್ದರು ಕಾರ್ಯಕ್ರಮದ ನೇತೃತ್ವವನ್ನು ಉಮಾಕಾಂತ್ ಹೇರಲಗಿ, ಶಶಿ ಜವಳಿ, ಈರಪ್ಪ ಕುರ್ಲೆ, ಸಿದ್ಧರಾಮ ಉಪ್ಪಣಗಿ. ಅರುಣ ಹೇರಲಗಿ, ರವಿ ಪಟ್ಟಣ, ಶಿವಾನಂದ ಗಿಡವೀರ, ಮುತ್ತು ಶಹಾಪೂರ, ನಾಗರಾಜ ಮಟ್ಟಿಕಲಿ,ಅಮೀತ್ ಕುರ್ಲೆ,ಅವಿನಾಶ ಹೇರಲಗಿ,ಪ್ರಮೋದ್ ಹುಣಶ್ಯಾಳ .ಬಸವರಾಜ್ ಕೆಶೆಟ್ಟಿ .ಸುವರ್ಣಾ ಕುರ್ಲೆ ಮಲ್ಲಮ್ಮ ಜೋಗೂರ .ಸ್ಮೀತಾ ಹುಣಶ್ಯಾಳ, ಭಾರತಿ ಗಿಡವೀರ, ಶೈಲಶ್ರೀ ಬೀಳಗಿ, ಜಯಶ್ರೀ ಗುರುಬಸಣ್ಣವರ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.