ನವದಂಪತಿ ಸ್ಪರ್ಧೆ: ಬಹುಮಾನ ವಿತರಣೆ

ಚಿಕ್ಕನಾಯಕನಹಳ್ಳಿ, ಜು. ೧೫- ದಿವ್ಯ ಜ್ಯೋತಿ ಹವ್ಯಾಸಿ ಕಲಾ ಸಂಘವು ಅನೇಕ ಸಮಾಜದಲ್ಲಿ ಸೇವೆಗಳನ್ನು ಸಲ್ಲಿಸುತ್ತಿದ್ದು, ವಿಶೇಷವಾಗಿ ನವದಂಪತಿಗಳ ಸ್ಪರ್ಧೆಯನ್ನು ಏಕಾದಶಿ ಜಾತ್ರೆಯಲ್ಲಿ ದಾನಿಗಳ ಸಹಕಾರದಲ್ಲಿ ಪ್ರತಿ ವರ್ಷ ಕಾರ್ಯಕ್ರಮವನ್ನು ಏರ್ಪಡಿಸಲಾಗುತ್ತಿದೆ ಎಂದು ದಿವ್ಯ ಜ್ಯೋತಿ ಹವ್ಯಾಸಿ ಕಲಾ ಸಂಘದ ಅಧ್ಯಕ್ಷ ಸಿ.ಡಿ. ಚಂದ್ರಶೇಖರ್ ಹೇಳಿದರು.
ಕನ್ನಡ ಸಂಘದ ವೇದಿಕೆಯಲ್ಲಿ ನಡೆದ ನವದಂಪತಿಗಳ ಸ್ಪರ್ಧೆಯಲ್ಲಿ ಮಾತನಾಡಿದ ಅವರು, ಏಕಾದಶಿ ಜಾತ್ರೆಯಲ್ಲಿ ವಿಶೇಷವಾಗಿ ನವ ವಿವಾಹಿತ ಜೋಡಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ರಥಕ್ಕೆ ಬಾಳೆಹಣ್ಣು ಎಸೆದು ಜಾತ್ರೆಯ ವೈಭವವನ್ನು ಅನುಭವಿಸಿ ಹಿಂತಿರುಗುತ್ತಿದ್ದರು. ರಾಜ್ಯದ ಅನೇಕ ಭಾಗಗಳಿಂದ ಆಗಮಿಸುವ ನವ ದಂಪತಿಗಳಿಗೊಂದು ಕಾರ್ಯಕ್ರಮವನ್ನು ಏರ್ಪಡಿಸಿ ಮನೋರಂಜನೆ ಹಾಗೂ ಸತಿಪತಿಯ ಮನಃ ಸಂತೋಷಗೊಳಿಸಲು ನವದಂಪತಿ ಸ್ಪರ್ಧೆಯನ್ನು ನಮ್ಮ ಸಂಘವು ಕಳೆದ ೨೯ ವರ್ಷಗಳಿಂದ ಏಕಾದಶಿ ಜಾತ್ರೆಯಲ್ಲಿ ದಾನಿಗಳ ಸಹಕಾರದಲ್ಲಿ ಆಯೋಜಿಸಿಕೊಂಡು ಬರಲಾಗುತ್ತಿದೆ ಎಂದರು.
ನವದಂಪತಿ ಸ್ಪರ್ಧೆಯಲ್ಲಿ ಮೈಸೂರಿನ ಮೋಹನ್ ಮತ್ತು ವಿಜೇತ ದಂಪತಿಗೆ ಮೊದಲ ಸ್ಥಾನ, ಚಿ.ನಾ.ಹಳ್ಳಿಯ ವೇದಾಂತ್ ಮತ್ತು ಸಂಗೀತಾ ದಂಪತಿಗೆ ದ್ವಿತಿಯ ಸ್ಥಾನ, ಕಾಸರಗೂಡು ಜಗದೀಶ್ ಮತ್ತು ಪಲ್ಲವಿ ದಂಪತಿಗಳಿಗೆ ತೃತೀಯ ಸ್ಥಾನ, ಬೆಂಗಳೂರಿನ ಚಂದನ್ ಮತ್ತು ನವನೀತ ನಾಲ್ಕನೆಯ ಸ್ಥಾನ, ಮಲ್ಲಸಂದ್ರ ಜೀವನ್ ಮತ್ತು ಲಾವಣ್ಯ ದಂಪತಿಗಳಿಗೆ ಐದನೇ ಸ್ಥಾನ ಪಡೆದುಕೊಂಡರು.
ಸಂಘದ ಸದಸ್ಯರಾದ ಸಂಜಯ್ ಮತ್ತು ವಸಂತ ದಂಪತಿಗಳನ್ನು ೨೫ನೇ ವರ್ಷದ ವಿವಾಹ ಆಚರಣೆ ಅಂಗವಾಗಿ ಸಂಘದ ವತಿಯಿಂದ ಸನ್ಮಾನಿಸಲಾಯಿತು.