ನವದಂಪತಿಗಳು ಆದರ್ಶ ಜೀವನ ನಡೆಸಿ : ಶಾಸಕ  ನೇಮಿರಾಜ್


 ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಅ.29 ನವ ವಧು-ವರರು ದಾಂಪತ್ಯ ಜೀವನದಲ್ಲಿ ಹಿರಿಯರಿಗೆ ಗೌರವ ಸಲ್ಲಿಸುವ ಮೂಲಕ ಸಂಸ್ಕಾರದಿಂದ ಜೀವನ ನಡೆಸಬೇಕು ಎಂದು ಶಾಸಕ ಕೆ ನೇಮಿರಾಜ್ ನಾಯ್ಕ್ ಹೇಳಿದರು.
 ತಾಲೂಕಿನ ಕಡಲ ಬಾಳು ಗ್ರಾಮದಲ್ಲಿ ಗವಿಮಠದ 15ನೇ ಪೀಠಾಧಿಪತಿ ಲಿಂ. ಶಿವ ಶಾಂತವೀರ ಶ್ರೀಗಳ 101ನೇ ಪುಣ್ಯಾರಾಧನೆ ನಿಮಿತ್ತ ಹಮ್ಮಿಕೊಂಡಿದ್ದ ಉಚಿತ ಸಾಮೂಹಿಕ ವಿವಾಹ ಹಾಗೂ ಧರ್ಮಸಭೆ  ಉದ್ಘಾಟಿಸಿ ಶನಿವಾರ ಮಾತನಾಡಿದರು. ಜೀವನದಲ್ಲಿ ಸಂಕೋಚ ಬಿಟ್ಟು ಸಾಮೂಹಿಕ ವಿವಾಹಗಳಲ್ಲಿ ಪಾಲ್ಗೊಳ್ಳುವ ಮೂಲಕ ಆಡಂಬರದ ಮದುವೆ ನಿಲ್ಲಬೇಕು. ಇದರಿಂದ ಬಡವರಿಗೆ ಸಾಲದ ಭಾದೆ ಕಡಿಮೆಯಾಗಲಿದೆ . ಜಾತಿ ಭೇದ ಪಕ್ಷಬೇಧ ಧರ್ಮ ಪರಿಷತ್ ಮಠಾಧೀಶರ ಸಮ್ಮುಖದಲ್ಲಿ ನಡೆಯುವ ಸಾಮೂಹಿಕ ವಿವಾಹಗಳು ಶ್ರೇಷ್ಠತೆ ಹೊಂದಿವೆ ಎಂದರು.
 ನನೆಗುದಿಗೆ ಬಿದ್ದಿರುವ ಮಠದ ಸಮುದಾಯ ಭವನಕ್ಕೆ ಶೀಘ್ರ ಅನುದಾನ ನೀಡಿ ಕಾಮಗಾರಿಯನ್ನು ಪೂರ್ಣಗೊಳಿಸುವ ಮೂಲಕ ಮುಂದಿನ ವರ್ಷ  ಅದೇ ಭವನದಲ್ಲಿ ಸಾಮೂಹಿಕ ವಿವಾಹ ನಡೆಯಲಿದೆ ಎಂದು ಭರವಸೆ ನೀಡಿದರು.
 ಕಾರ್ಯಕ್ರಮದ ಸಾಮೂಹಿಕ ವಿವಾಹದಲ್ಲಿ 21 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಸಿದರು.
 ಕಾರ್ಯಕ್ರಮದ ಸಾನಿಧ್ಯವನ್ನು ಹೆಬ್ಬಾಳದ ನಾಗಭೂಷಣ ಸ್ವಾಮೀಜಿ, ಹಡಗಲಿಯ ಹಿರಿಯ ಶಾಂತವೀರ ಸ್ವಾಮೀಜಿ, ನಂದಿಪುರದ ಮಹೇಶ್ವರ ಸ್ವಾಮೀಜಿ, ಹಂಪಸಾಗರ ನವಲಿ ಹಿರೇ  ಮಠದ ಅಭಿನವ ಶಿವಲಿಂಗ ರುದ್ರಮುನಿ ಸ್ವಾಮೀಜಿ, ಉತಂಗಿ ಹಿರೇಮಠದ ಸೋಮಶಂಕರ ದೇವರು ಹಾಲಸ್ವಾಮಿ ಮಠದ ಹಾಲಸಿದ್ದೇಶ್ವರ ಶ್ರೀಗಳು  ವಹಿಸಿದ್ದರು.
 ಈ ಸಂದರ್ಭದಲ್ಲಿತಹಸೀಲ್ದಾರ್ ಚಂದ್ರಶೇಖರ್ ಶಂಬಣ್ಣ ಗಾಳಿ, ತಾ ಪಂ ಇ ಒ ಪರಮೇಶ್ವರಪ್ಪ ಗ್ರಾ ಪಂ ಅಧ್ಯಕ್ಷೆ ಅನ್ನಪೂರ್ಣಮ್ಮ ಉಪಾಧ್ಯಕ್ಷೆ ಸಿ ಶಾಂತ ನಾಗರಾಜ್, ಸದಸ್ಯರಾದ ಮಂಜುನಾಥ್ ಗೌಡ ಸಿ ರಮೇಶ ಹೆಚ್ಚು ದೊಡ್ಡ ಬಸವರಾಜ್ ಒಂಟಿಗೋಡಿ ವಿರುಪಣ್ಣ ತಾ ಪಂ  ಮಾಜಿ ಸದಸ್ಯರಾದ  ಜಾಣ ಅನಿಲ್ ಕುಮಾರ್, ವೆಂಕಟೇಶ್ ಪಿಡಿಒ ಕೊಟ್ರೇಶ್  ಮುಖಂಡರಾದ ಗುರುರಾಜ್ ದೊಡ್ಡಬಸಯ್ಯ ಶರಣಯ್ಯ ರಾಚಯ್ಯ, ಪ್ರತ್ಯಕ್ಷ ಕಂಪ್ಯೂಟರ್ ಕೊಟ್ರೇಶ್ ಕನ್ನಿಹಳ್ಳಿ ಚಂದ್ರು, ವೈ ಮಲ್ಲಿಕಾರ್ಜುನ, ಪಾಂಡು ನಾಯ್ಕ್, ಕೃಷ್ಣಮೂರ್ತಿ, ಇತರರಿದ್ದರು.
 ಕಾರ್ಯಕ್ರಮವನ್ನು ಬ್ಯಾಟಿ ನಾಗರಾಜ್ ಎ.ಎಂ ಗಂಗಾಧರ್  ನಿರ್ವಹಿಸಿದರು.

One attachment • Scanned by Gmail