ನವಜಾತ ಹೆಣ್ಣು ಶಿಶು ಪತ್ತೆ


ಬಳ್ಳಾರಿ,ಜ.15: ಬಳ್ಳಾರಿ ನಗರದ ಸತ್ಯನಾರಾಯಣ ಪೇಟೆಯ ಗೊಲ್ಲನರಸಪ್ಪ ಕಾಲೋನಿಯ ಕೃಷ್ಣ ಗುಡಿ ಹತ್ತಿರ ರೈಲ್ವೇ ಗೇಟ್ ಪಕ್ಕದಲ್ಲಿ ಜ.11ರಂದು ನವಜಾತ ಹೆಣ್ಣು ಶಿಶು ಪತ್ತೆಯಾಗಿದ್ದು, ವಾರಸುದಾರರು ತಿಳಿದಿರುವುದಿಲ್ಲ.
ಚಹರೆ: ಎಣ್ಣೆಗೆಂಪು, ದುಂಡುಮುಖ ಹೊಂದಿದ್ದು, ಕಪ್ಪು ಕೂದಲು ಇರುತ್ತವೆ.
ನವಜಾತ ಹೆಣ್ಣು ಶಿಶುವಿನ ಪೋಷಕರ ಬಗ್ಗೆ ಮಾಹಿತಿ ದೊರೆಯಲ್ಲಿ ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ಅವರ ಮೊ.9480803088 ಅಥವಾ ದೂ.08392-268108 ಗೆ ಸಂಪರ್ಕಿಸಬಹುದು ಎಂದು ಮಹಿಳಾ ಪೊಲೀಸ್ ಠಾಣೆಯ ಠಾಣಾಧಿಕಾರಿಗಳು ತಿಳಿಸಿದ್ದಾರೆ.