ನವಜಾತ ಶಿಶುವಿನ ಹಾರೈಕೆಯ ಮಾಹಿತಿ

ಸಂಡೂರು :ನ:18 ಹೆರಿಯಾದ ತಕ್ಷಣದಿಂದ ಶಿಶುವಿನ ಆರೈಕೆ ಪ್ರಾರಂಭವಾಗಿ ಕರಳು ಬಳ್ಳಿಗೆ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಉಸಿರಾಟದ ತೊಂದರೆ ನಿವಾರಣೆ ಮೂಕಾಸ್ ವಿಲೇವಾರಿ ಲವಲವಿಕೆಯಿಂದ ಇರುವುದು ಚರ್ಮದ ಕಾಳಜಿ ಕಣ್ಣುಗಳ ಬಗ್ಗೆ ಹೆಚ್ಚಿನ ಕಾಳಜಿ ಇರಬೇಕೆಂದು ಪ್ರಸೂತಿ ತಜ್ಞರಾದ ಡಾ|| ಅರ್ಚನರವರು ಮಾತನಾಡಿದರು.
ಅವರು ತಾಲೂಕಿನ ತೋರಣಗಲ್ಲು ಗ್ರಾಮದಲ್ಲಿ ಶಿಶುವಾರ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪನ್ಯಾಸ ನೀಡಿದರು. ಶಿಶು ಮರಣ ತಪ್ಪಿಸಲು ಹೆರಿಗೆ ವಾರ್ಡ್‍ನಲ್ಲಿ ಶಿಶು ಆರೈಕೆ, ಅಪಾಯಕಾರಿ ಚಿಹ್ನೆಗಳನ್ನು ಪತ್ತೆ ಹಚ್ಚುವ ಮೂಲಕ ಅರ್ದ ಗಂಟೆಯೊಳಗೆ ಎದೆ ಹಾಲು ಉಣಿಸಿ ಜೀರೋ ಡೋಸ್ ಲಸಿಕೆ ನೀಡುವ ಬಗ್ಗೆ ಆಶಾ ಕಾರ್ಯಕರ್ತೆಯರು ಮನೆಯದಾರಿತ ಶಿಶು ಆರೈಕೆ ಮಾಡುವ ಬಗ್ಗೆ ಮಾಹಿತಿಯನ್ನ ನೀಡಬೇಕಾಗಿದೆ. ಆಶಾಕಾರ್ಯಕರ್ತೆಯರು ಮನೆ ಭೇಟಿಯಲ್ಲಿ ಶಿಶುವಿಗೆ ಬಿಸಿಬಿಸಿ ನೀರು ಹಾಕುವ, ಜೇನು ಔಡಲ ಎಣ್ಣೆ ಹಾಕುವ ಬಾಯಿಗೆ ಮತ್ತು ಬರೆ ಹಾಕುವ ಅನಿಷ್ಠ ಪದ್ದತಿಯನ್ನು ನಿಲ್ಲಿಸುವಂತೆ ಜನರಿಗೆ ಮನವರಿಕೆ ಮಾಡುವಂತೆ ಆಶಾ ಕಾರ್ಯಕರ್ತೆಯರಿಗೆ ಕರೆ ನೀಡಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪನವರು ಮಾತನಾಡಿ ಒಂದು ವರ್ಷದಲ್ಲಿ ಸಾವಿರ ಶಿಶು ಜನಿಸಿದರೆ, ಅದರಲ್ಲಿ 29 ಶಿಶು ಮರಣಗಳು ಸಂಭವಿಸಿದ್ದು, ಅದರಲ್ಲಿ ನವಜಾತ ಶಿಶು ಜನಿಸಿದ 7 ದಿನಗಳಲ್ಲಿ ಮರಣ ಪ್ರಮಾಣ ಶೇ. 39% ಇದ್ದು, ಇದನ್ನು ಒಂದಂಕಿಗೆ ನಿಲ್ಲಿಸಲು ಸರ್ಕಾರ ಗುರಿಗಳನ್ನ ಹೊಂದಿದೆ. ಹೆರಿಗೆ ನಂತರದಿಂದ ಆಶಾ ಕಾರ್ಯಕರ್ತೆಯರು ಮನೆಗೆ ಭೇಟಿ ಮಾಡಿ ಪ್ರತಿ 3,7,14,21,28,42 ದಿನಗಳಲ್ಲಿ ಭೇಟಿ ಮಾಡಿ ಶಿಶು ತೂಕ ಆರೋಗ್ಯ ಮಾಹಿತಿ ಪಡೆದು ತಪಾಸಣೆ ವಿವರ ಪಡೆದು ಅಪಾಯಕಾರಿ ಶಿಶುಗಳನ್ನು ಎಸ್.ಎಸ್.ಸಿ. ಯು ಗೆ ಸೂಚಿಸಿವುದು ಮತ್ತು ಅಲ್ಲಿಂದ ಬಂದ ನಂತರ ಫಾಲೋವಪ್ ನಿರಂತರ ಕೈಗೊಳ್ಳುವ ಬಗ್ಗೆ ಅವರು ವಿವರಿಸಿದರು. ಈ ಸಂದರ್ಭದಲ್ಲಿ ಶುಶ್ರೂಷಣಾಧಿಕಾರಿ ಲಕ್ಷ್ಮೀ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಮಾಲಾ, ನಾಗರತ್ನ, ನಿಜಾಮುದ್ದೀನ್, ಆಶಾ ಫೆಸಲಿಟೇಟರ್, ಬಸಮ್ಮ ಆಶಾ ಕಾರ್ಯಕರ್ತೆಯರಾದ ಎರ್ರೆಮ್ಮ, ನೀಲಮ್ಮ, ದೇವಮ್ಮ, ಸುಶೀಲಮ್ಮ, ರಾಜೇಶ್ವರ, ಲಕ್ಷ್ಮೀ, ತೇಜಮ್ಮ, ವಿಜಯಶಾಂತಿ, ಇತರರು ಉಪಸ್ಥಿತರಿದ್ದರು.