ನವಜಾತ ಶಿಶುಗಳ ಮರಣ ಪ್ರಮಾಣ ಇಳಿಕೆ : ಜಿ.ಹೇಮಂತ್ ಕುಮಾರ್

ಮೈಸೂರು, ನ.19: ನವಜಾತ ಶಿಶುಗಳ ಮರಣ ಪ್ರಮಾಣ ಕಡಿಮೆ ಮಾಡುವಲ್ಲಿ ಭಾರತವು ಪ್ರಗತಿ ಸಾಧಿಸಿದ್ದು, ನವಜಾತ ಶಿಶುಗಳ ಮರಣ ಪ್ರಮಾಣ(ಎನ್‍ಎಂಆರ್)ದಲ್ಲಿ ಇಳಿಕೆ ಕಂಡುಬಂದಿದೆ. ಆದರೆ ಇದು ನಿಧಾನಗತಿಯಲ್ಲಿ ಸಾಗುತ್ತಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪೆÇ್ರ.ಜಿ.ಹೇಮಂತ್ ಕುಮಾರ್ ತಿಳಿಸಿದರು.
ಅವರಿಂದು ನವಜಾತ ಶಿಶು ಆರೈಕೆ ಮತ್ತು ಶಿಶುಗಳ ರಕ್ಷಣೆಯ ಸವಾಲುಗಳು ರಾಷ್ಟ್ರೀಯ ವೆಬಿನಾರ್ ಮೈಸೂರು ವಿವಿ ಆಹಾರ ವಿಜ್ಞಾನ ಮತ್ತು ಪೆÇೀಷಣೆಯ ಅಧ್ಯಯನ ವಿಭಾಗವು ಸುವರ್ಣ ಮಹೋತ್ಸವ ಆಚರಣೆ ಹಿನ್ನೆಲೆಯಲ್ಲಿ ವಿಜ್ಞಾನಭವನದಲ್ಲಿ ಆಯೋಜಿಸಿದ್ದ `’ನವಜಾತ ಶಿಶು ಆರೈಕೆ ಮತ್ತು ಶಿಶುಗಳ ರಕ್ಷಣೆಯ ಸವಾಲುಗಳು’’ ವಿಷಯ ಕುರಿತ ಎರಡು ದಿನಗಳ ರಾಷ್ಟ್ರೀಯ ವೆಬಿನಾರ್ ಗೆ ಚಾಲನೆ ನೀಡಿ ಮಾತನಾಡಿದರು.
ಜಾಗತಿಕ ನವಜಾತ ಶಿಶುಗಳ ಮರಣದಲ್ಲಿ 1990 ರಲ್ಲಿ 1/3 ರಿಂದ ಇಂದಿನ ಒಟ್ಟು ನವಜಾತ ಶಿಶು ಸಾವುಗಳಲ್ಲಿ 1/4 ಕ್ಕಿಂತ ಕಡಿಮೆಯಾಗಿದೆ. ನವಜಾತ ಶಿಶುಗಳ ಆರೈಕೆ ಮತ್ತು ಬದುಕುಳಿಯುವಿಕೆಯ ಮಹತ್ವವನ್ನು ನೀತಿ ನಿರೂಪಕರು ಗುರುತಿಸಿದ್ದಾರೆ. ಈ ಕುರಿತು ಭಾರತ ಸರ್ಕಾರವು ಸರಣಿ ಕಾರ್ಯಕ್ರಮಗಳನ್ನು ಪ್ರಾರಂಭಿಸಿದೆ ಎಂದರು.
ಪ್ರಸ್ತುತ ಸಮಸ್ಯೆಯನ್ನು ಚರ್ಚಿಸಲು ಮತ್ತು ಮಕ್ಕಳ ಅಭಿವೃದ್ಧಿ, ಶಿಕ್ಷಣ, ಆರೋಗ್ಯ ಕುರಿತು ವೃತ್ತಿಪರರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಅಗತ್ಯವಾಗಿದೆ. ಭಾರತವು 1.38 ಶತಕೋಟಿಯಷ್ಟು ದೊಡ್ಡ ಜನಸಂಖ್ಯೆಯ ದೇಶವಾಗಿದ್ದು, ಈ ಅಂಕಿ ಅಂಶವು 2027ರ ವೇಳೆಗೆ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿ ಚೀನಾವನ್ನು ಹಿಂದಿಕ್ಕಲಿದೆ ಎಂಬುದನ್ನು ಸೂಚಿಸುತ್ತದೆ ಎಂದರು. ಜಾಗತಿಕವಾಗಿ 2.4ಮಿಲಿಯನ್ ಶಿಶುಗಳು ಮೊದಲ ತಿಂಗಳಲ್ಲಿ (2019 ರಲ್ಲಿ) ಸಾವನ್ನಪ್ಪಿವೆ. ಭಾರತವು ಪ್ರತಿವರ್ಷ 25 ದಶಲಕ್ಷ ಮಕ್ಕಳ ಜನನದೊಂದಿಗೆ ವಿಶ್ವದ ವಾರ್ಷಿಕ ಮಕ್ಕಳ ಜನನಗಳಲ್ಲಿ ಐದನೇ ಒಂದು ಭಾಗವನ್ನು ಹೊಂದಿದೆ. ವಿಶ್ವದಾದ್ಯಂತ 7 ಶಿಶುಗಳಲ್ಲಿ 1 ಕಡಿಮೆ ಜನನ ತೂಕದ ಶಿಶು ಜನಿಸುತ್ತದೆ. ಪ್ರತಿ ನಿಮಿಷದಲ್ಲಿ ಆ ಶಿಶುಗಳಲ್ಲಿ ಒಂದು ಶಿಶು ಸಾವನ್ನಪ್ಪುತ್ತದೆ. ಜಾಗತಿಕವಾಗಿ 2.4ಮಿಲಿಯನ್ ಶಿಶುಗಳು ಮೊದಲ ತಿಂಗಳಲ್ಲಿ (2019 ರಲ್ಲಿ) ಸಾವನ್ನಪ್ಪಿವೆ ಎಂದರು. ಅಪೌಷ್ಟಿಕತೆಯು ಶಿಶುಗಳನ್ನು ತೀವ್ರ ರೋಗಗಳಿಗೆ ಗುರಿಯಾಗಿಸುತ್ತದೆ.
ಕಡಿಮೆ ಜನನ ತೂಕ, ಅವಧಿಪೂರ್ವ ಶಿಶು ಜನನದ ಪರಿಣಾಮವು ಮಕ್ಕಳ ಪ್ರೌಢಾವಸ್ಥೆಯಲ್ಲಿ ಮುಂದುವರಿಯುತ್ತವೆ. ಇದು ದೀರ್ಘಕಾಲದ ಅನಾರೋಗ್ಯ, ಬೊಜ್ಜು ಮತ್ತು ಮಧುಮೇಹದ ರೀತಿಯಲ್ಲಿ ವಯಸ್ಕರಿಗೆ ಅಪಾಯವನ್ನುಂಟು ಮಾಡುವುದು. ಸಮುದಾಯ ಆರೋಗ್ಯ ಕಾರ್ಯಕರ್ತರಿಗೆ ಇದು ದೊಡ್ಡ ಸವಾಲಾಗಿದೆ. ಅಪೌಷ್ಠಿಕತೆಯು ಶಿಶುಗಳನ್ನು ತೀವ್ರ ರೋಗಗಳಿಗೆ ಗುರಿಯಾಗಿಸುತ್ತದೆ ಎಂದು ಹೇಳಿದರು. ಜನನದ ಮೊದಲ 1000 ದಿನಗಳಲ್ಲಿ ಕಳಪೆ ಪೌಷ್ಠಿಕಾಂಶವು ಕುಂಠಿತ ಬೆಳವಣಿಗೆಗೆ ಕಾರಣ. ನಮ್ಮ ದೇಶದ ಜನಸಂಖ್ಯೆಯ 70% ಕ್ಕಿಂತ ಹೆಚ್ಚು ಜನರು ಗ್ರಾಮೀಣ ಮತ್ತು ನಗರ ಕೊಳೆಗೇರಿ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಮಕ್ಕಳ ಜೀವನದ ಮೊದಲ 1000 ದಿನಗಳಲ್ಲಿ ಕಳಪೆ ಪೌಷ್ಠಿಕಾಂಶವು ಕುಂಠಿತ ಬೆಳವಣಿಗೆಗೆ ಕಾರಣವಾಗಬಹುದು. ಇದು ಅರಿವಿನ ಸಾಮಥ್ರ್ಯ ದುರ್ಬಲಗೊಳಿಸಲಿದ್ದು, ಶಾಲೆ ಹಾಗೂ ಕೆಲಸದ ಕಾರ್ಯಕ್ಷಮತೆ ಮೇಲೂ ಪರಿಣಾಮ ಬೀರುವುದು. ಇದನ್ನು ತಡೆಗಟ್ಟುವ ಕಾರ್ಯತಂತ್ರವಾಗಿ ದೇಶದಲ್ಲಿ ಅಭಿವೃದ್ಧಿ ತಪಾಸಣೆಯ ಮಹತ್ವಕ್ಕೆ ಆದ್ಯತೆ ನೀಡಬೇಕಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆಹಾರ ವಿಜ್ಞಾನ ಮತ್ತು ಪೆÇೀಷಣೆ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ.ಅಸ್ನಾ ಉರೂಜ್, ಪ್ರಾಧ್ಯಾಪಕರಾದ ಡಾ.ಎಂ.ಕೋಮಲ ಇತರರು ಇದ್ದರು.